Breaking News
Home / ತಾಲ್ಲೂಕು / ಸಮೀಪದ ನಾಗನೂರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮ

ಸಮೀಪದ ನಾಗನೂರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮ

Spread the love

ಮೂಡಲಗಿ : ಶತಮಾನಗಳಿಂದಲು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಸಹಾಯ ನೀಡಿ ಭವ್ಯ ಭವಿಷ್ಯತ್ತಿ ಪ್ರಜೆಗಳ ನಿರ್ಮಾಣ ಕಾರ್ಯ ಮಾಡಿರುವದು ಹೆಮ್ಮೆಯ ವಿಷಯವಾಗಿದೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.

ಅವರು ಸಮೀಪದ ನಾಗನೂರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮೂಡಲಗಿ ತಾಲೂಕಿನಲ್ಲಿ ಶತಮಾನ ಕಂಡ ಶಾಲೆಗಳಲ್ಲಿ ಇದೊಂದಾಗಿದೆ. ಇಂತಹ ಶಾಲೆಯಲ್ಲಿ ಅನೇಕ ಗುರುಗಳು, ಶಿಷ್ಯ ವೃಂದ ಈ ಶಾಲೆಯ ಉಪಯೋಗ ತೆಗೆದುಕೊಂಡಿದ್ದಾರೆ. ಈ ಶಾಲೆಯ ಹಳೇಯ ವಿದ್ಯಾರ್ಥಿಗಳಾದ ಅಮೇರಿಕಾದಲ್ಲಿ ನೆಲೆಸಿರುವ ಸಂಜು ತಿಗಡಿ, ಬೆಂಗಳೂರಿನಲ್ಲಿರುವ ವಿಠ್ಠಲ ನಾಯಕವಾಡಿ ಆರ್ಥಿಕ ಧನ ಸಹಾಯ ಹಾಗೂ ಕಲಿಕೋಪಕರಣಗಳನ್ನು ನೀಡಿದ್ದು ಸ್ಮರಣೀಯವಾಗಿದೆ ಎಂದರು.

ಈ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು ಹಾಗೂ ಸದಸ್ಯರು ಊರಿನ ಹಿರಿಯರ ಜನಪ್ರತಿನಿಧಿಗಳ ಶಿಕ್ಷಕರ ಸಹಾಯ ಸಹಕಾರದಿಂದ ಶಾಲೆಗೆ ವಿಶೇಷ ಮೆರಗು ನೀಡಿದ್ದಾರೆ. ಶಾಲೆಗೆ ಬೇಕಾಗಿದ್ದ ಮೂಲಭೂತವಾದ ಕಟ್ಟಡ, ಶೌಚಾಲಯ, ಕಂಪೌಂಡ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ವೇದಿಕೆ ನಿರ್ಮಾಣ ಕಾರ್ಯಗಳು ಮೆಚ್ಚುವಂತಹದು. ಮುಂದಿನ ದಿನಗಳಲ್ಲಿ ಮಕ್ಕಳ ಕಲಿಕೆ ಕ್ರೀಡೆ ಪಠ್ಯ ಹಾಗೂ ಪಠ್ಯೇತರ ಕಾರ್ಯಗಳಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡುವಂತೆ ಹೇಳಿದರು.

ಶಾಲಾ ಭೂದಾನಿ ಆರ್.ಎಮ್ ಪಾಟೀಲ, ಪರಸಪ್ಪ ಬಬಲಿ, ಶಿಕ್ಷಕ ಸಂಘಟನೆಯ ಎಸ್.ಎಮ್ ಲೋಕನ್ನವರ, ಬಿ.ಆರ್ ತರಕಾರ, ಎಮ್.ವಾಯ್ ಸಣ್ಣಕ್ಕಿ, ನಿವೃತ್ತ ಶಿಕ್ಷಕ ಎಸ್.ಬಿ ಮದಿಹಳ್ಳಿ ಮಾತನಾಡಿ, ಶಾಲೆಗಳು ಗುಣಾತ್ಮಕ ಕಲಿಕೆ, ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕು. ಶಿಕ್ಷಕರು ಅವುಗಳನ್ನು ಸಮರ್ಪಕ ರೀತಿಯಲ್ಲಿ ಉಪಯೋಗಿಸಿಕೊಂಡಾಗ ಮಾತ್ರ ಮಗುವಿನ ಕಲಿಕೆ ಫಲಪ್ರದವಾಗುದು ಎಂದರು. ಶತಮಾನ ಕಂಡ ಶಾಲೆಯ ಶತಮಾನೋತ್ಸವ ಹಾಗೂ ಕೈಗೊಳ್ಳಬಹುದಾದ ಕ್ರಮಗಳ ಕುರಿತು ವಿವÀರಿಸಿದರು.

ನಿವೃತ್ತ ಶಿಕ್ಷಕ ಎಸ್.ಬಿ ಮದಿಹಳ್ಳಿ, ಪ್ರಧಾನ ಗುರು ಎಸ್.ಬಿ ಹಿರೇಮಠ, ಚಂದ್ರು ಕೆಂಚನ್ನವರ, ಶಿವು ಸರ್ವಿಯವರನ್ನು ಸತ್ಕರಿಸಲಾಯಿತು. ಸಾಂಯಕಾಲ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷ ರಾಮಣ್ಣಾ ಪಡದಲ್ಲಿ, ಪಪಂ ಸದಸ್ಯ ದುಂಡಪ್ಪ ನಂದಗಾವ, ಶಿಕ್ಷಣ ಪ್ರೇಮಿ ಧನು ಜೊಕಿ, ರಾಜು ಕರಿಹೊಳಿ, ಸವಿತಾ ಪತ್ತಾರ, ಮೀನಾಕ್ಷಿ ಬೋಸಲೆ, ಸಿ.ಆರ್.ಪಿ ಎಸ್.ಎಮ್ ಗೋಕಾಕ, ಎಮ್.ಎಮ್ ಉಸ್ತಾದ, ಆರ್.ಆರ್.ಕನಕಿಕೊಡಿ, ಈರಪ್ಪ ಬೆಳಕೂಡ, ಕಣ್ಣಪ್ಪ ಜಾಂಗಟೆ, ಪ್ರಧಾನ ಗುರು ಎಸ್.ಬಿ ಹಿರೇಮಠ, ಕೆ.ಎಲ್.ಮೀಶಿ, ಆರ್.ಎಮ್ ಗುಡೆನ್ನವರ, ಎಸ್.ವಿ ಕೋಪರ್ಡೆ, ನಿರ್ಮಲಾ ರಾಮದುರ್ಗ ಮತ್ತಿತರರು ಉಪಸ್ಥಿತರಿದ್ದರು.
ಪಿ.ಡಿ ಅಳಗೋಡಿ ಸ್ವಾಗತಿಸಿ, ನಾಗವೇಣಿ ಕೋರಿ ವಂದಿಸಿದರು. ಕವಿತಾ ಪಾಸಪ್ಪಗೋಳ ನಿರೂಪಿಸಿದರು.


Spread the love

About inmudalgi

Check Also

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೂಡಲಗಿ ತಾಲೂಕಾ ಎಸ್.ಸಿ/ಎಸ್.ಟಿ ಹಾಗೂ ಅಲ್ಪ ಅಲ್ಪಸಂಖ್ಯಾತರ ಶಾಖಾ ಘಟಕ ಉದ್ಘಾಟನೆ

Spread the loveಮೂಡಲಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯು ಸಮಜದಲ್ಲಿ ಹಿಂದುಳಿದ ಜನರಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ