Breaking News
Home / Uncategorized / ರಾಜಾಪೂರ: ಜ್ಞಾನಗಂಗೋತ್ರಿ ಆಂಗ್ಲ ಮಾಧ್ಯಮಪ್ರೌಢ ಶಾಲೆ ಸ್ಪಂಧನ ಸಾಂಸ್ಕೃತಿಕ ಕಾರ್ಯಕ್ರಮ

ರಾಜಾಪೂರ: ಜ್ಞಾನಗಂಗೋತ್ರಿ ಆಂಗ್ಲ ಮಾಧ್ಯಮಪ್ರೌಢ ಶಾಲೆ ಸ್ಪಂಧನ ಸಾಂಸ್ಕೃತಿಕ ಕಾರ್ಯಕ್ರಮ

Spread the love


ರಾಜಾಪೂರ: ಜ್ಞಾನಗಂಗೋತ್ರಿ ಆಂಗ್ಲ ಮಾಧ್ಯಮಪ್ರೌಢ ಶಾಲೆ
ಸ್ಪಂಧನ ಸಾಂಸ್ಕೃತಿಕ ಕಾರ್ಯಕ್ರಮ

ಮೂಡಲಗಿ: ಗುಣಾತ್ಮಕ ಶಿಕ್ಷಣ ಕ್ರಿಯಾಶೀಲ ಬೆಳವಣಿಗೆ ಎಂಬ ಪರಿಕಲ್ಪನೆಯೊಂದಿಗೆ ಮಕ್ಕಳ ಸರ್ವಾಗಿನ ಅಭಿವೃದ್ಧಿಗಾಗಿ ಮೂಡಲಗಿ ತಾಲೂಕಿನ ರಾಜಾಪೂರ ಗ್ರಾಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಜ್ಞಾನಗಂಗೋತ್ರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಕಳೆದು 12 ವರ್ಷಗಳಿಂದ ಶ್ರಮಿಸುತ್ತಿದೆ.
2012ರಲ್ಲಿ 140 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಈ ಶಾಲೆಯು ಇಂದು 988 ವಿದ್ಯಾರ್ಥಿಗಳನ್ನು ಒಳಗೊಂಡ ಗ್ರಾಮೀಣ ಭಾಗದಲ್ಲಿ ಅಕ್ಷರ ಕ್ರಾಂತಿಯನ್ನು ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸೃಜನಾತ್ಮಕ ಶಿಕ್ಷಣವನ್ನು ಒದಗಿಸುವ ಮುಖ್ಯ ಧೇಯೋದ್ದೇಶವೇ ಈ ಸಂಸ್ಥೆಯ ಗುರಿ. ಈ ಸಂಸ್ಥೆಯು ಸುಸಜ್ಜಿತವಾದ ಕಟ್ಟಡ, ವಿಶಾಲವಾದ ಆಟದ ಮೈದಾನ, ನುರಿತ ಶಿಕ್ಷಕ ವರ್ಗಹೊಂದಿದ ಒಂದು ಬೃಹತ್ ಸಂಸ್ಥೆಯಾಗಿದ್ದು, ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಬೇಕೆಂಬುದು ಈ ಸಂಸ್ಥೆಯ ಉದ್ದೇಶವಾಗಿದೆ. ಇಂದು ಜಗತ್ತು ನಾಗಾಲೋಟದಲ್ಲಿ ಓಡುತ್ತಿರುವುದು ಇದರ ಜೊತೆಗೆ ಆಧುನಿಕತೆಯೊಂದಿಗೆ ಹೊಂದಿಕೊಂಡು ಹೋಗುವ ಸಲವಾಗಿ ಈ ಶಾಲೆಯ ಮಾರ್ಗದರ್ಶಕ ಗುರುಗಳಾದ ಶ್ರೀ ರಮೇಶ್ ಗುಂಡಪ್ಪಗೊಳ ಸರ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆಧುನಿಕತೆ ಹಾಗೂ ಆಧುನಿಕ ಶಿಕ್ಷಣದಿಂದ ವಂಚಿತರಾಗ ಬಾರದು ಎಂಬ ಉದ್ದೇಶದಿಂದ ಸುಸಜ್ಜಿತವಾದ ಕಂಪ್ಯೂಟರ್ ಲ್ಯಾಬ್,ಪ್ರೊಜೆಕ್ಟರ್, ಸ್ಮಾರ್ಟ್ ಬೋರ್ಡ್ ನೊಂದಿಗೆ ಡಿಜಿಟಲ್ಶಿಕ್ಷಣವನ್ನು ಒದಗಿಸುತ್ತಿದ್ದಾರೆ. ದೂರದ ಊರಿನಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ವಾಹನದ ವ್ಯವಸ್ಥೆ, ಬಾಲಕ-ಬಾಲಕೀಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.2024ರ ನವೆಂಬರ್ತಿಂಗಳಲ್ಲಿ ರಾಜ್ಯ ಮಟ್ಟದ ಶ್ರೇಷ್ಠ ಶಾಲೆ ಎಂಬ ರಾಜ್ಯ ಮಟ್ಟದ ಪ್ರಶಸ್ತಿಯ ಗರಿಯೂ ಕೂಡ ಈ ಸಂಸ್ಥೆಗೆ ಇದೆ.


ಮಕ್ಕಳು ಪಠ್ಯವನ್ನು ಅಭ್ಯಾಸ ಮಾಡುವುದರ ಜೊತೆಗೆ ಹೊರ ಜಗತ್ತಿನಲ್ಲಿ ನಡೆಯುವ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಿಸುವ ಮನೋಭಾವವನ್ನು ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡುವಲ್ಲಿ ಸಂಸ್ಥೆಯ ಅಧ್ಯಕ್ಷರು ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿಯವರು ಶಾಲೆ ಆಡಳಿತ ಮಂಡಳಿಯವರು ಸದಾ ಶ್ರಮಿಸುತ್ತಿದ್ದಾರೆ..
ಕಳೆದವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ಹೊಂದಿದೆ.2023-24 ನೇಸಾಲಿನಲ್ಲಿ 30 ಮಕ್ಕಳು ಮುರಾರ್ಜಿ, ನವೋದಯ ಶಾಲೆಗಳಿಗೆ ಆಯ್ಕೆಯಾಗಿದ್ದು ಇದಕ್ಕೆ ವಿಶೇಷ ತರಬೇತಿ ನೀಡಲಾಗುತ್ತದೆ. ಮಕ್ಕಳಿಗೆ ಪಾಠದ ಜೊತೆಗೆ ಸಹಪಠ್ಯಚಟುವಟಿಕೆಗಳು, ಕಲೆ, ಸಂಗೀತ, ನೃತ್ಯ ಸೇರಿದಂತೆ ಹಲವು ಕೌಶಲ್ಯ ತರಬೇತಿಗಳನ್ನು ಕೂಡ ನೀಡಲಾಗುತ್ತದೆ. ಮಕ್ಕಳನ್ನು ಪ್ರತಿಭಾವಂತರನ್ನಾಗಿ ಬೆಳೆಸಬೇಕು ಎಂಬುದು ಶಾಲೆಯ ಮಾರ್ಗದರ್ಶಕರಾದ ಶ್ರೀ ರಮೇಶ ಗುಂಡಪ್ಪಗೋಳ ಅವರ ಆಶಯವಾಗಿದೆ.
ರಾಜ್ಯ ಪ್ರಶಸ್ತಿ ಪುರಸ್ಕೃತ ಜ್ಞಾನಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ   ಬಹುಮಾನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಶ್ರೀ ಮಂಜುನಾಥ ಮಹಾಸ್ವಾಮಿಗಳು ಕ್ಯಾರಗುಡ್ಡ ಹುಕ್ಕೆರಿ ಇವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋಕಾಕ ತಹಶೀಲ್ದಾರ ಹಾಗೂ ತಾಲೂಕಾ ದಂಡಾಧಿಕಾರಿಗಳಾದ ಡಾ. ಮೋಹನ ಭಸ್ಮೆ, ಯರಗಟ್ಟಿ ತಹಶೀಲ್ದಾರ ಹಾಗೂ ತಾಲೂಕಾ ದಂಡಾಧಿಕಾರಿಗಳಾದ ಎಮ್‌ ವಿಗುಂಡಪ್ಪಗೋಳ, ಕ್ಷೇತ್ರಶಿಕ್ಷಣಾಧಿಕಾರಿಗಳಾದ  ಎ ಸಿ ಮನ್ನಿಕೇರಿ ಸೇರಿದಂತೆ ಅನೇಕ ಗಣ್ಯರು, ಪಾಲಕ-ಪೋಷಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ.

“ಗ್ರಾಮೀಣ ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮದ ಶಿಕ್ಷಣವನ್ನು ಕಡಿಮೆ ವೆಚ್ಚದಲ್ಲಿ ನೀಡುತ್ತಿರುವ ಶಾಲೆ ಇದಾಗಿದ್ದು ಈ ಶಾಲೆಯ ಪ್ರತಿಭೆಗಳು ರಾಜ್ಯಮಟ್ಟದಲ್ಲಿ ಮಿಂಚುತ್ತಿರುವುದನ್ನು ಇತ್ತೀಚಿಗೆ ಗಮನಿಸಿದ್ದೇನೆ. ಈ ಶಾಲೆಯಿಂದ ಇನ್ನಷ್ಟು ಪ್ರತಿಭಾವಂತ ವಿದ್ಯಾರ್ಥಿಗಳು ಹೊರಬಂದು ತಮ್ಮ ಭವಿಷ್ಯ ಉಜ್ವಲವಾಗಲೆಂದು ಹಾರೈಸುತ್ತೇನೆ.”

ಶ್ರೀ ಎಮ್. ವಿ ಗುಂಡಪ್ಪಗೋಳ, ತಹಶೀಲ್ದಾರ ಹಾಗೂ ತಾಲೂಕಾದಂಡಾಧಿಕಾರಿಗಳು, ಯರಗಟ್ಟಿ


Spread the love

About inmudalgi

Check Also

ಬೆಟಗೇರಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನ.9ರಂದು ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ, ಗ್ರಾಮ ಪಂಚಾಯತಿ, ಪ್ರಾಥಮಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ