Breaking News
Home / ಬೆಳಗಾವಿ / ವಿದ್ಯಾರ್ಥಿಗಳಿಗೆ ಗ್ರಾಮೀಣ ಕಲೆ, ಸಂಪ್ರದಾಯ ಹಾಗೂ ಸಂಸ್ಕøತಿಗಳ ತಿಳಿವಳಿಕೆ ಅಗತ್ಯ : ಸದಾಶಿವ ಮಾದರ

ವಿದ್ಯಾರ್ಥಿಗಳಿಗೆ ಗ್ರಾಮೀಣ ಕಲೆ, ಸಂಪ್ರದಾಯ ಹಾಗೂ ಸಂಸ್ಕøತಿಗಳ ತಿಳಿವಳಿಕೆ ಅಗತ್ಯ : ಸದಾಶಿವ ಮಾದರ

Spread the love

ವಿದ್ಯಾರ್ಥಿಗಳಿಗೆ ಗ್ರಾಮೀಣ ಕಲೆ, ಸಂಪ್ರದಾಯ ಹಾಗೂ ಸಂಸ್ಕøತಿಗಳ ತಿಳಿವಳಿಕೆ ಅಗತ್ಯ
: ಸದಾಶಿವ ಮಾದರ

ಮೂಡಲಗಿ : ವಿದ್ಯಾರ್ಥಿಗಳಿಗೆ ಗ್ರಾಮೀಣ ಕಲೆ, ಸಂಪ್ರದಾಯ ಹಾಗೂ ಸಂಸ್ಕøತಿಗಳ ತಿಳವಳಿಕೆ ಅಗತ್ಯವಾಗಿದೆ ಇಂದು ಗ್ರಾಮೀಣ ಸಂಪ್ರದಾಯಗಳು ನಸಿಶಿ ಹೋಗುತ್ತಿದ್ದು ತಾಯಿಯ ಮಮತೆ ತಂದೆಯ ವಾತ್ಸಲ್ಯ ಹಾಗೂ ಬಂದುಗಳು ಆತ್ಮೀಯತೆ ಮಾಯವಾಗುತ್ತಿದ್ದು ಕುಟುಂಬ ಪದ್ದತಿ ಮರೀಚಿಕೆಯಾಗುತ್ತಿದ್ದು ನಿಜವಾದ ನಮ್ಮ ದೇಶದ ಗ್ರಾಮೀಣ ಜನರ ಬದುಕು ವಿಶಿಷ್ಟ ವೈವಿದ್ಯಮಯವಾದ ಆಚರಣೆ ಸಂಪ್ರದಾಯ ಹಾಗೂ ಸಾಮಾಜಿಕ ಕಳಕಳಿಯ ಸಿದ್ದಾಂತಗಳನ್ನು ಒಳಗೊಂಡಿದ್ದು ಅದರ ಮೌಲ್ಯಗಳನ್ನು ಇಂದಿನ ವಿದ್ಯಾರ್ಥಿಗಳಲ್ಲಿ ತಿಳಿಸಿಕೊಡುವುದು ಅವಶ್ಯಕವಿದೆ ಎಂದು ಮೂಡಲಗಿಯ ಶ್ರೀ ಕೆ.ಎಚ್. ಸೋನವಾಲ್ಕರ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕರಾದ ಸದಾಶಿವ ಮಾದರ ಹೇಳಿದರು.
ಪಟ್ಟಣದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಕಲಾ ವಾಣಿಜ್ಯ ವಿಜ್ಞಾನ ಸಮಾಜಕಾರ್ಯ ಪದವಿ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಹಮ್ಮಿ ಕೊಂಡಿರುವ ಹಳ್ಳಿಗರ ಸಂಸ್ಕøತಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಾರತದ ಸಂಸ್ಕøತಿಯ ರೂವಾರಿ ಸ್ವಾಮಿ ವಿವೇಕಾನಂದರು ಭಾರತವನ್ನು ವಿಶ್ವಕ್ಕೆ ಪರಿಚಯ ಮಾಡಿದರು ಅಂತಹ ಮಹಾತ್ಮರು ನಮ್ಮ ಸಂಸ್ಕøತಿ ಉಳಿವಿಗಾಗಿ ಹೋರಾಡಿದರು ಅಲ್ಲದೇ ಹಳ್ಳಿಯ ಸೊಗಡು ಹೆಣ್ಣುಮಕ್ಕಳ ವಸ್ತ್ರಾಲಂಕಾರ ಅವರು ಹೇಳುವ ಒಗಟು ಒಡಪು ಜೀವನಾಮೃತವನ್ನು ನೀಡುತ್ತೇವೆ ಅಂತಹ ತಾಯಿಂದರು ನನೆಸಿಕೊಳ್ಳುವ ಅವರ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕವಿದೆ ಎಂದರು.


ಅತಿಥಿಯಾಗಿ  ನ್ಯಾಯವಾದಿ  ಮತ್ತು ಮಂಜುನಾಥ ಸೈನಿಕ ಕೋಚಿಂಗ್ ಕೇಂದ್ರದ ಅಧ್ಯಕ್ಷರಾದ ಲಕ್ಷ್ಮಣ ಅಡಿಹುಡಿ ಮಾತನಾಡಿ ನಮ್ಮ ಭಾಷೆ ನಮ್ಮ ಗ್ರಾಮೀಣ ಜನರ ವಿಚಾರಗಳು ಮೊಬೈಲ್ ವಿದ್ಯಮಾನದಿಂದ ತಮ್ಮ ಆಸ್ತಿತ್ವ ಕಳೆದುಕೊಳ್ಳುತ್ತಿದ್ದು ನಮ್ಮ ಸಂಪ್ರದಾಯ ಸಂಸ್ಕøತಿ ಹಾಗೂ ಭಾಷೆಯ ಸೊಗಡು ನಮ್ಮ ಜೀವನದ ಆಧಾರಸ್ತಂಭಗಳಾಗಬೇಕು ಇಂದು ಪಟ್ಟಣದ ಬದುಕು ಕೃತಕವಾಗಿದ್ದು ಹಳ್ಳಿಯ ಹಿಂದಿನ ಬದುಕು ನೈಸರ್ಗಿಕ ನಿಯಮಗಳಂತೆ ರಚಿತವಾಗಿತ್ತು ಆಯುಷ್ಯವು ಸಹಿತ ದೀರ್ಘಕಾಲಿಕವಾಗಿ ಜನರ ಬಾಳುತ್ತಿದ್ದರು ಅದು ವಾಸ್ತವಿಕ ಜೀವನವಾಗಿ ಜನರ ನಾಡಿಮಿಡತದಲ್ಲಿ ಉಸಿರಾಗಿತ್ತು ಇಂದು ಗ್ರಾಮೀಣ ಬದುಕಿನ ಅನಾವರಣ ಮಕ್ಕಳಲ್ಲಿ ಬೆಳಸುವುದು ಅವಶ್ಯಕವಿದೆ ಎಂದರು.
ಪದವಿ ಕಾಲೇಜಿನ ಪ್ರಾಚಾರ್ಯ ಸತೀಶ ಗೋಟೂರೆ ಮಾತನಾಡಿ ನಮ್ಮ ಉಡುಗೆ ತೊಡುಗೆಗಳು ನಮ್ಮ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತೇವೆ ಅವುಗಳನ್ನು ನಾವುಗಳು ಉಳಿಸಿಕೊಂಡು ಹೋಗುವುದು ಅವಶ್ಯವಿದೆ ಎಂದರು.
ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶಿವಾನಂದ ಸತ್ತಿಗೇರಿ ಮಾತನಾಡಿ ಹಳ್ಳಿಯ ಜೀವನ ನಮ್ಮ ಸಂಪ್ರದಾಯಿಗಳ ಪ್ರತಿಬಿಂಬವಾಗಿದ್ದು ಅವುಗಳನ್ನು ವಿದ್ಯಾರ್ಥಿಗಳಲ್ಲಿ ಬೆಳಸಿ ಉಳಿಸಿಕೊಂಡು ಹೋಗುವುದು ಇಂದಿನ ಅವಶ್ಯಕತೆಯಾಗಿದೆ ಎಂದರು.
ವಿದ್ಯಾರ್ಥಿಗಳು ಗ್ರಾಮೀಣ ಹಾಡುಗಳು, ಗ್ರಾಮೀಣ ನೃತ್ಯಗಳು ಹಾಗೂ ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿ ಗ್ರಾಮೀಣ ಸೊಬಗಿನ ಆನಂದವನ್ನು ಗ್ರಾಮೀಣ ಊಟದೊಂದಿಗೆ ಸವಿದರು.
ಕಾರ್ಯಕ್ರಮದಲ್ಲಿ ಸಂಗಮೇಶ ಕುಂಬಾರ, ಸಂಜೀವ ವಾಲಿ, ಎಸ್.ಬಿ.ಲಟ್ಟಿ, ಎಂ.ಬಿ. ಸಿದ್ನಾಳ, ಎಂ. ಆಯ್ ಜಾಡರ, ರವಿ ಕಟಗೇರಿ, ಸಂಜೀವ ಮಂಟೂರ, ಮಲ್ಲಪ್ಪಾ ಪಾಟೀಲ, ಬಾಳು ಪುರವಂತ, ಮಾಯವ್ವ ಪೂಜೇರಿ, ಅಶ್ವೀನಿ ಬಡಿಗೇರ, ಲಕ್ಷ್ಮೀ ಮುರಗೋಡ ಇನ್ನಿತರ ಸಿಬ್ಬಂದಿಗಳು ಹಾಜರಿದ್ದರು.
ಉಪನ್ಯಾಸಕ ಜಿ.ಎಸ್.ಮನ್ನಾಪೂರ ನಿರೂಪಿಸಿದರು. ಉಪನ್ಯಾಸಕ ಸಿದ್ದಾರೂಡ ಬೆಳವಿ ಸ್ವಾಗತಿಸಿದರು. ಉಪನ್ಯಾಸಕಿ ವಾಣಿಶ್ರೀ ಕಾಪಸೆ ವಂದಿಸಿದರು.


Spread the love

About inmudalgi

Check Also

ಆಭರಣ ಕಳ್ಳರ ಬಂಧನ 9.60 ಲಕ್ಷ ರೂ ಮೊತ್ತದ ಆಭರಣ ವಶ

Spread the love   ಆಭರಣ ಕಳ್ಳರ ಬಂಧನ 9.60 ಲಕ್ಷ ರೂ ಮೊತ್ತದ ಆಭರಣ ವಶ ಕುಲಗೋಡ: ಮನೆ ಕಳ್ಳತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ