“ ಆರ್‍ಡಿಎಸ್ ಪಿಯು ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ”
ಮೂಡಲಗಿ : ಇಲ್ಲಿಯ ಆರ್. ಡಿ. ಸೊಸೈಟಿಯ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬಿಳ್ಕೊಡುವ ಸಮಾರಂಭವನ್ನು 31 ಜನೇವರಿ 2025ರಂದು ಹಮ್ಮಿಕೊಳ್ಳಲಾಗಿದೆ.
ಬೆಳಗಾವಿಯ ಕೆಎಂಎಫ್ ಅಧ್ಯಕ್ಷರು ಮತ್ತು ಜನಪ್ರಿಯ ಶಾಸಕರಾದ ಬಾಲಚಂದ್ರ ಲ ಜಾರಕಿಹೊಳಿ ಉದ್ಘಾಟಿಸುವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಡಿ.ಎಸ್. ಅಧ್ಯಕ್ಷರಾದ ಸಂತೋಷ ತಮ್ಮಣ್ಣಾ ಪಾರ್ಶಿ ವಹಿಸಿಕೊಳ್ಳುವರು ಮುಖ್ಯ ಅಥಿತಿಗಳಾಗಿ ಮೂಡಲಗಿ ತಾಲೂಕಿನ ತಹಶೀಲದಾರ ಶಿವಾನಂದ ಬಬಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮೆನ್ನಿಕೇರಿ ಸಿ.ಡಿ.ಪಿ.ಓ. ಯಲ್ಲಪ್ಪಾ ಗದಾಡಿ ಎಂ.ಇ.ಎಸ್. ಪದವಿ ಕಾಲೇಜಿನ ನಿವೃತ್ತ ಉಪನ್ಯಾಸಕ ಎಸ್.ಬಿ.ಖೋತ ಸಂಸ್ಥೆಯ ಉಪಾಧ್ಯಕ್ಷರಾದ ಪೂಜಾ ಪಾರ್ಶಿ ಸಿ.ಬಿ.ಎಸ್.ಇ. ಶಾಲೆಯ ಮೆಂಟರ್ ಇಂದಿರಾ ಸಾತನೂರ ಜಾನಪದ ಗಾಯಕ ಶಬ್ಬೀರ ಡಾಂಗೆ ಎಚ್.ಡಿ.ಎಫ್.ಸಿ ಬ್ಯಾಂಕ್ ಮಾನ್ಯೇಜರ ಅಜಯ ಕದಂ ಹಾಗೂ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಅತಿಥ್ಯ ವಹಿಸುವರು.
ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಪಾಲಕರು ಮತ್ತು ಹಳೆಯ ವಿದ್ಯಾರ್ಥಿಗಳು, ಮೂಡಲಗಿ ತಾಲೂಕಾ ಪತ್ರಕರ್ತರು, ಸಹಕಾರಿ ಸಂಘಗಳ ಪದಾಧಿಕಾರಿಗಳು ಸಿಬ್ಬಿಂದಿ ವರ್ಗ ಮತ್ತು ಸರಕಾರಿ ಕಛೇರಿಗಳ ಅಧಿಕಾರಿಗಳು ಪೋಲಿಸ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗ ಭಾಗವಹಿಸುವರು ಮತ್ತು ವಿದ್ಯಾರ್ಥಿಗಳಿಂದ ವಿವಿಧ ಮನರಂಜನೆ ಚಟುವಟಿಕೆಗಳು ನಡೆಸಲಾಗುವುದು ಎಂದು ಸಂಘಟಿಕರು ತಿಳಿಸಿರುತ್ತಾರೆ.