Breaking News
Home / ಬೆಳಗಾವಿ / “ವಿದ್ಯಾರ್ಥಿಗಳ ಪರೀಕ್ಷಾ ಯಶಸ್ಸು ಅಧ್ಯಯನಶೀಲತೆ ಮತ್ತು ಪ್ರಯತ್ನವನ್ನು ಅವಲಂಭಿಸಿದೆ ” – ಪ್ರಕಾಶ ಗರಗಟ್ಟಿ

“ವಿದ್ಯಾರ್ಥಿಗಳ ಪರೀಕ್ಷಾ ಯಶಸ್ಸು ಅಧ್ಯಯನಶೀಲತೆ ಮತ್ತು ಪ್ರಯತ್ನವನ್ನು ಅವಲಂಭಿಸಿದೆ ” – ಪ್ರಕಾಶ ಗರಗಟ್ಟಿ

Spread the love

“ವಿದ್ಯಾರ್ಥಿಗಳ ಪರೀಕ್ಷಾ ಯಶಸ್ಸು ಅಧ್ಯಯನಶೀಲತೆ ಮತ್ತು ಪ್ರಯತ್ನವನ್ನು ಅವಲಂಭಿಸಿದೆ ” – ನಿವೃತ್ತ ಪ್ರಾಚಾರ್ಯ ಪ್ರಕಾಶ ಗರಗಟ್ಟಿ

ಮೂಡಲಗಿ : ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪರೀಕ್ಷಾ ಯಶಸ್ಸು ಕ್ರೀಯಾಶೀಲತೆ ಜೊತೆಗೆ ಅಧ್ಯಯನಶೀಲತೆ ಮತ್ತು ನಿರಂತರ ಪ್ರಯತ್ನವನ್ನು ಅವಲಂಭಿಸಿದ್ದು ಗುರುಗಳು ನೀಡಿದ ಮಾರ್ಗದರ್ಶನವನ್ನು ಸರಿಯಾಗಿ ಪಡಿದುಕೊಂಡು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು ಇಂದು ಜ್ಞಾನ ಜಗತ್ತನ್ನು ಆಳುವ ಶಕ್ತಿಯಾಗುತ್ತಿದ್ದು ಹಣ ಆಸ್ತಿಗಿಂತ ಜ್ಞಾನ ಶ್ರೇಷ್ಠವಾದದ್ದು ಹಾಗೂ ಹೆಚ್ಚು ಅಂಕಗಳನ್ನು ಗಳಿಸಲು ವಿದ್ಯಾರ್ಥಿಗಳು ನಿರಂತರ ಪ್ರಯತ್ನ ಮತ್ತು ತಮ್ಮ ಜಾಣ್ಮೆಯನ್ನು ಸರಿಯಾದ ಸಮಯಕ್ಕೆ ಸರಿಯಾದ ನಿರ್ವಹಣೆಯಿಂದ ಪ್ರಯತ್ನಿಸಬೇಕೆಂದು ಕಲ್ಲೋಳಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರಕಾಶ ಗರಗಟ್ಟಿ ಹೇಳಿದರು.
ಪಟ್ಟಣದ ಆರ್.ಡಿ.ಎಸ್ ಶ್ರೀವಿದ್ಯಾನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪರೀಕ್ಷೆಗೆ ಅಬಿನಂಧನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ವಿದ್ಯಾರ್ಥಿಗಳು ನಿರಂತರ ಪ್ರಜ್ವಲಿಸುವ ಜ್ಯೋತಿಗಳಾಗಬೇಕು ಶಿಕ್ಷಕರು ವಿದ್ಯಾರ್ಥಿಗಳ ಬದುಕಿಗೆ ದೀಪದ ಎಣ್ಣೆಯಂತೆ ಸ್ಪೂರ್ತಿ ತುಂಬವವರು ಆದರೆ ಮಕ್ಕಳು ಉತ್ತಮ ಅಂಕಗಳ ಗಳಿಸುವದರ ಜೊತೆಗೆ ಸುಂದರ ಬದುಕನ್ನು ರೂಪಿಸಿಕೊಳ್ಳುವಲ್ಲಿ ಸಹಾಯಕವಾಗುತ್ತದೆ ಇಂತಹ ಶಿಕ್ಷಣ ಸಂಸ್ಥೆ ಕಟ್ಟಿದ ಪಾರ್ಶಿ ಮನೆತನದ ಕಾರ್ಯ ಶ್ಲಾಘನೀಯ ಎಂದರು.


ಶಾಲೆಯ ಮುಖ್ಯೋಪಾದ್ಯರಾದ ಸಂಗಮೇಶ ಹಳ್ಳೂರ ಮಾತನಾಡಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ಶೃದ್ದೆ ಮತ್ತು ನಿಷ್ಠೆಯ ಜೊತೆಗೆ ತಂದೆ ತಾಯಿಗಳ ಮತ್ತು ಗುರುಗಳ ಕನಸ್ಸನ್ನು ನನಸು ಮಾಡುವದರೊಂದಿಗೆ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಎಸ್.ಎಸ್.ಎಲ್.ಸಿ ಮಹತ್ವದ ಹೆಜ್ಜೆಯಾಗಿರುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಸಂತೋಷ ಪಾರ್ಶಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಏನಾದರೂ ಸಾಧಿಸುವ ಛಲ ಇರಬೇಕು. ಅದನ್ನು ಮುಟ್ಟಲು ಯೋಗ್ಯವಾದ ಗುರಿ ಹಾಗೂ ಸ್ಪಷ್ಟ ಪ್ರಯತ್ನ ಇರಬೇಕು ಇದಕ್ಕೆ ಗುರುಗಳು ಸರಿಯಾದ ಮಾರ್ಗದರ್ಶನ ನೀಡಬೇಕು ಅಂತಹ ಯೋಗ್ಯವಾದ ಬದುಕು ಆಯ್ಕೆ ಮಾಡಿಕೊಳ್ಳಲು ನಮ್ಮ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಸದಾಕಾಲ ಅವಕಾಶ ಮಾಡಿಕೊಡುತ್ತದೆ ಎಂದರು.

ವಿದ್ಯಾರ್ಥಿಗಳು ಶಿಕ್ಷಕರು ತಮ್ಮ ಶಾಲಾ ದಿನದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಮತ್ತು ಇದೇ ಸಂದರ್ಭದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ಶಿಕ್ಷಕರನ್ನು ಗೌರವಿಸಲಾಯಿತು ಹತ್ತನೇಯ ತರಗತಿ ವಿದ್ಯಾರ್ಥಿಗಳು ಶಿಕ್ಷಣದ ನಿರಂತರೆತೆಗೆ 9ನೇ ತರಗತಿ ವಿದ್ಯಾರ್ಥಿಗಳಿಗೆ ದೀಪವನ್ನು ನೀಡುವದರ ಜೊತೆಗೆ ಮುಂಬರುವ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಪೂಜಾ ಪಾರ್ಶಿ ಪಿ ಯು ಕಾಲೇಜಿನ ಪ್ರಾಚಾರ್ಯ ಶಿವಾನಂದ ಸತ್ತಿಗೇರಿ ಇತರರು ಹಾಜರಿದ್ದರು
ಸುನೀತಾ ಪುಟ್ಟಿ ನಿರೂಪಿಸಿದರು ಅಶ್ವೀನಿ ಮೆಳ್ಳಿಗೇರಿ ಸ್ವಾಗತಿಸಿದರು ಲತಾ ಅಂಬಣ್ಣಗೋಳ ವಂದಿಸಿದರು.


Spread the love

About inmudalgi

Check Also

ಮಾ.11 ರಂದು ನವಜೀವನೋತ್ಸವ ಕಾರ್ಯಕ್ರಮ

Spread the loveಮೂಡಲಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡಲಗಿ ತಾಲೂಕಾ ವಲಯದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ