Breaking News
Home / ಬೆಳಗಾವಿ / ವಿದ್ಯಾರ್ಥಿಗಳು ಜ್ಞಾನ ಮತ್ತು ಬುದ್ಧಿಯನ್ನು ಬೆಳಸಿಕೊಳ್ಳಬೇಕು – ಸದಾಶಿವ ಬೆಳಗಲಿ

ವಿದ್ಯಾರ್ಥಿಗಳು ಜ್ಞಾನ ಮತ್ತು ಬುದ್ಧಿಯನ್ನು ಬೆಳಸಿಕೊಳ್ಳಬೇಕು – ಸದಾಶಿವ ಬೆಳಗಲಿ

Spread the love

ಮೂಡಲಗಿ : ವಿದ್ಯಾರ್ಥಿಗಳು ಜ್ಞಾನ ಮತ್ತು ಬುದ್ಧಿಯನ್ನು ಬೆಳಸಿಕೊಳ್ಳಬೇಕು ಇಂದು ಸಾಮಾಜಿಕ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳು ಪ್ರೀತಿ ಪ್ರೇಮ ಎಂಬ ಭಾವನೆಗಳನ್ನು ಹೊಂದಿ ನಿಜವಾದ ಬದುಕನ್ನು ನಾಶಮಾಡಿಕೊಳ್ಳುತ್ತಿದ್ದು ಬದುಕಿನ ಸ್ವಾರಸ್ಯವನ್ನು ಕಳೆದುಕೊಳ್ಳುವ ಬದಲು ತಂದೆತಾಯಿಗಳ ಆಸೆ ಆಕಾಂಕ್ಷೆಗಳಂತೆ ಸಾಧಕರಾಗಲು ಪ್ರಯತ್ನಿಸಬೇಕು ಆತ್ಮ ಪರಿಶುದ್ಧಿ ಮಾಡಿಕೊಂಡು ಸ್ವಾಬಿಮಾನದ ಬದುಕು ಕಟ್ಟಿಕೊಳ್ಳುವಂತೆ ನಿರಂತರ ಅಧ್ಯಯನ ಗುರು ಭಕ್ತಿ ತೋರಿಸಿ ಸಾಧನೆಯ ಶೀಖರವನ್ನೇರಲು ಪ್ರಯತ್ನಿಸುವಂತೆ ನಾಗನೂರಿನ ಸರಕಾರಿ ಪ್ರೌಢ ಶಾಲೆಯ ಸಹಶಿಕ್ಷಕ ಸದಾಶಿವ ಬೆಳಗಲಿ ಹೇಳಿದರು.

ಪಟ್ಟಣದ ಆರ್.ಡಿ.ಎಸ್ ಪಿ ಯು ಕಾಲೇಜಿನಲ್ಲಿ ಇಂದು ಸನ್ 2025-26ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ, ಕ್ರೀಡೆ, ಸಾಂಸ್ಕøತಿಕ ಚಟುವಟಿಕೆ ಹಾಗೂ ಎನ್‍ಎಸ್‍ಎಸ್, ಸ್ಕೌಟ್ಸ್, ರೆಡ್ ಕ್ರಾಸ್ ಘಟಕಗಳ ಉದ್ಘಾಟನಾ ಸಮಾರಂಭ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿ ನೌಕರರಾಗುವ ಬದಲು ಮಾಲೀಕರಾಗುವ ಹಾಗೂ ಹಳೆಯ ಸಾಂಪ್ರದಾಯಕ ಸಾವಯುವ ಕೃಷಿ ಸಾಧಕರಾಗಿ ಬೆಳದು ಸ್ವಾವಲಂಬನೆ ಜೀವನಕ್ಕೆ ತೊಡುಗುವಂತೆ ಸಲಹೆ ನೀಡಿತ್ತಾ ಬ್ರೀಟಿಷ ಕಾಲದಲ್ಲಿ ಭಾರತ ವಿಶ್ವ ದರ್ಜೆ ಶೈಕ್ಷಣಿಕ ಅಭಿವೃದ್ಧಿ ಹೊಂದಿತ್ತು ನಂತರ ಬ್ರೀಟಿಷ ಪ್ರಾಬಲ್ಯ ಭಾರತೀಯರ ಸ್ವಾವಲಂಬನೆ ಶಿಕ್ಷಣಕ್ಕೆ ಅಡೆತಡೆ ನೀಡಿದೆ ನಮ್ಮ ಪೂರ್ವಜರ ಸ್ವಾಬಿಮಾನ ಶಿಕ್ಷಣಕ್ಕೆ ಆಧ್ಯತೆ ನೀಡೋಣ ಎಂದರು.
ಅತಿಥಿ ಅರಳಿಮಟ್ಟಿ ಸರಕಾರಿ ಪ್ರೌಢ ಶಾಲೆಯ ಸಹಶಿಕ್ಷಕ ಮಹಾಂತೇಶ ಕುಂಬಾರ ಮಾತನಾಡಿ ಗುರುಭಕ್ತಿ ವಿದ್ಯಾರ್ಥಿಗಳ ಬದುಕಿನಲ್ಲಿ ಆದರನೀಯವಾಗಿದ್ದು ಅದರ ಜೊತೆಗೆ ಸಮಯ ಪಾಲನೆ ಹಾಗೂ ಶೈಕ್ಷಣಿಕ ಪಠ್ಯ & ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವದರಿಂದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆಯ ಅವಕಾಶಗಳಿದ್ದು ಅವುಗಳ ಸದುಪಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅಧ್ಯಕ್ಷತೆಯನ್ನು ಆರ್.ಡಿ.ಎಸ್. ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸಂತೋಷ ಪಾರ್ಶಿ ವಹಿಸಿಕೊಂಡು ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನು ಹೊಂದಿ ನಿರಂತರ ಪ್ರಯತ್ನ ಪಟ್ಟರೆ ಮಾತ್ರ ಜೀವನದಲ್ಲಿ ಯಶಸ್ವಿ ವ್ಯಕ್ತಿಗಳು ಆಗಲು ಸಾದ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಮುನ್ಯಾಳ ಗ್ರಾಮ ಪಂಚಾಯತ ಸದಸ್ಯರಾದ ರಮೇಶ ಪಾಟೀಲ ಕಾಲೇಜಿನ ಪ್ರಾಚಾರ್ಯ ಎಸ್.ಸಿ.ಸತ್ತಿಗೇರಿ ಪದವಿ ಕಾಲೇಜಿನ ಪ್ರಾಚಾರ್ಯ ಎಸ್. ಬಿ. ಗೋಟೂರೆ ಆಯ್.ಟಿ.ಆಯ್. ಕಾಲೇಜಿನ ಪ್ರಾಚಾರ್ಯ ಚಿದಾನಂದ ಶೆಟ್ಟರ ಉಪನ್ಯಾಸಕರಾದ ಎಸ್.ಎನ್. ಕುಂಬಾರ, ಆರ್. ಜೆ. ಕಟಗೇರಿ, ಎಸ್.ಬಿ.ಬೆಳವಿ ವೆಂಕಟೇಶ ಹೆಳವರ, ವಾಣಿಶ್ರೀ ಕಾಪಶೆ, ಸವಿತಾ ಪಡದಲ್ಲಿ, ವಿದ್ಯಾಶ್ರೀ ಜುಗಳ, ಸಾಗರ ಕಳ್ಳಿಗುದ್ದಿ, ಚೇತನ ಹೊಸಟ್ಟಿ ಹಾಜರಿದ್ದರು.
ಉಪನ್ಯಾಸಕ ಎಂ.ಬಿ.ಸಿದ್ನಾಳ ನಿರೂಪಿಸಿದರು ಉಪನ್ಯಾಸಕ ಎಸ್.ಬಿ. ಲಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಜಿ.ಎಸ್.ಮನ್ನಾಪೂರ ವಂದಿಸಿದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ