Breaking News
Home / ಬೆಳಗಾವಿ / ಉದ್ಯೋಗ ಅವಕಾಶಗಳನ್ನು ಪದವಿ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು- ರವಿ ಕಟಗೇರಿ

ಉದ್ಯೋಗ ಅವಕಾಶಗಳನ್ನು ಪದವಿ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು- ರವಿ ಕಟಗೇರಿ

Spread the love

ಮೂಡಲಗಿ : ಪದವಿ ಹಂತದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಅವಕಾಶಗಳು ಹೆಮ್ಮರವಾಗಿದ್ದು ಅನೇಕ ಇಲಾಖೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿಕೊಳ್ಳುತ್ತಿದ್ದು ಸರಿಯಾದ ಮಾರ್ಗದರ್ಶನ ಪಡೆದುಕೊಂಡು ವಿವಿಧ ಇಲಾಖೆಗೆ ಸೇರಿಕೊಳ್ಳಲು ಪೂರ್ವ ತಯಾರಿಯನ್ನು ಪದವಿ ಹಂತದ ಅಧ್ಯಯನದ ಜೊತೆಗೆ ಪ್ರಯತ್ನಿಸಬೇಕೆಂದು ಮೂಡಲಗಿಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರವಿ ಕಟಗೇರಿ ಹೇಳಿದರು.

ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ & ವಿಜ್ಞಾನ ಪದವಿ ಮಹಾವಿದ್ಯಾಲಯದ ಆಯ್‍ಕ್ಯೂಎಸಿ & ಎನ್‍ಎಸ್‍ಎಸ್ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ ಪ್ಲೇಸ್‍ಮೆಂಟ್ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಉದ್ಯೋಗಗಳು ವ್ಯಕ್ತಿಯ ಪ್ರತಿಭೆಯನ್ನಾಧರಿಸಿ ಇಂದಿನ ದಿನದಲ್ಲಿ ಸಾಕಷ್ಟು ಅವಕಾಶಗಳಿದ್ದು ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಂಡು ಪರೀಕ್ಷೆಗಳನ್ನು ಎದುರಿಸಿ ಸರಕಾರಿ & ಖಾಸಗಿ ಉದ್ದಿಮೆಗಳಲ್ಲಿ ಯಶಸ್ಸನ್ನು ಸಾಧಿಸುವಂತೆ ಹಾಗೂ ಆಯ್‍ಎಎಸ್, ಆಯ್‍ಪಿಎಸ್, ಕೆಎಎಸ್ ಪರೀಕ್ಷೆಗಳಿಗೆ ತಯಾರಾಗಲು ಅನುಸರಿಸುವ ಮಾರ್ಗಗಳನ್ನು ತಿಳಿಸಿದರು.
ಅತಿಥಿ ಆಯ್.ಟಿ.ಆಯ್. ಕಾಲೇಜಿನ ಪ್ರಾಚಾರ್ಯ ಚಿದಾನಂದ ಶೆಟ್ಟರ ಮಾತನಾಡಿ ಪದವಿ & ಸ್ನಾತಕೋತ್ತರ ಪದವಿ ಶಿಕ್ಷಣದ ನಂತರ ಬದುಕಿಗೆ ವೃತ್ತಿ ಕೈಗೊಳ್ಳುವುದು ವಿದ್ಯಾರ್ಥಿಗಳಿಗೆ ಅಗತ್ಯವಾಗಿದ್ದು ವಿವಿಧ ಇಲಾಖೆಗಳಲ್ಲಿ ಕೈಗಾರಿಕೆಗಳಲ್ಲಿ ಹಾಗೂ ಸ್ವಯಂ ಉದ್ಯೋಗಗಳಲ್ಲಿ ಅವಕಾಶಗಳಿದ್ದು ಅವುಗಳ ಸರಿಯಾದ ಮಾರ್ಗದರ್ಶನ ಪಡೆದುಕೊಂಡು ನಮ್ಮ ಬದುಕಿನ ದಾರಿ ರೂಪಿಸಿಕೊಳ್ಳುವುದು ಅಗತ್ಯವಿದೆ ಎಂದರು.

ಪ್ಲೇಸ್‍ಮೆಂಟ್ ಘಟಕಾಧಿಕಾರಿ ನಂದಾ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿ ನನ್ನ ಜೀವನದ ಮೊದಲ ಆಯ್ಕೆ ಸಮಾಜದಲ್ಲಿ ಹೆಸರು ಮಾಡುವುದು ಎರಡನೇ ಆಯ್ಕೆ ಸಮಾಜ ಒಪ್ಪುವಂತಹ ವೃತ್ತಿ ಮಾಡುವದಾಗಿರಬೇಕು ಆ ದಾರಿಯಲ್ಲಿ ನಾವು ನಡೆಯಬೇಕೆಂದರು.
ಕಾಲೇಜು ಪ್ರಾಚಾರ್ಯ ಎಸ್.ಬಿ.ಗೋಟೂರೆ ಮಾತನಾಡಿ ವೃತ್ತಿ ಆಯ್ಕೆಗೆ ತಯಾರಿ ಬಹಳಷ್ಟು ಮುಖ್ಯವಾಗಿದ್ದು ಉತ್ತಮ ವೃತ್ತಿ ನನ್ನ ಮೊದಲ ಆಧ್ಯತೆಯಾಗಿರ ಬೇಕೆಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ರಾಜು ಪತ್ತಾರ, ಮಲ್ಲಪ್ಪ ಪಾಟೀಲ, ಸಂಜೀವ ಮಂಟೂರ, ಮುತ್ತಣ್ಣಾ ಒಡೆಯರ, ಸುನೀಲ ಸತ್ತಿ ಮತ್ತಿತರರು ಹಾಜರಿದ್ದರು
ವಿದ್ಯಾರ್ಥಿನಿ ಅಕ್ಷತಾ ಗೊರಗುದ್ದಿ ನಿರೂಪಿಸಿದರು ಲಕ್ಷ್ಮೀ ಗೊರಗುದ್ದಿ ಸ್ವಾಗತಿಸಿದರು ಜ್ಯೋತಿ ಗರಗದ ವಂದಿಸಿದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ