ಮೂಡಲಗಿ : ದಿನಾಂಕ 22-01-2026 ರಂದು ಇಲ್ಲಿನ ಶೈಕ್ಷಣಿಕ ಸಂಸ್ಥೆಯಾದ ಆರ್.ಡಿ.ಎಸ್. ಸಿಬಿಎಸ್ಇ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುವ ಸಮಾರಂಭ ವಿನೂತನ-7 ಸಾಯಂಕಾಲ 4 ಘಂಟೆಗೆ ಶಾಲೆಯ ಆವರಣದಲ್ಲಿ ಜರಗಲಿದ್ದು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮೂಡಲಗಿಯ ಶ್ರೀಶಿವಬೋಧರಂಗ ಸಿದ್ದಸಂಸ್ಥಾನಮಠದ ಪೀಠಾಧಿಪತಿಗಳಾದ ಶ್ರೀಶ್ರೀಶ್ರೀ ದತ್ತಾತ್ರೇಯ ಸ್ವಾಮೀಜಿ ಮತ್ತು ಪೂಜ್ಯ ಶ್ರೀಬಸವಜಯಮೃತ್ಯುಂಜಯ ಸ್ವಾಮೀಜಿ ವಹಿಸುವರು ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ತಮ್ಮಣ್ಣಾ ಪಾರ್ಶಿ, ವಿಶೇಷ ಅತಿಥಿಗಳಾಗಿ ಖ್ಯಾತ ಚಲನಚಿತ್ರ ಕಾಮಿಡಿ ನಟ ಹಾಗೂ ಸಂಗೀತ ನಿರ್ದೇಶಕ ಸಾಧುಕೋಕಿಲಾ ಮುಖ್ಯ ಅತಿಥಿಗಳಾಗಿ ಬೆಳಗಾವಿಯ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯದ ಕುಲಸಚಿವರಾದ ಸಂತೋಷ ಕಾಮಗೌಡ ಮೂಡಲಗಿ ತಾಲೂಕಾ ತಹಶೀಲದಾರ ಶ್ರೀಶೈಲ್ ಗುಡಮೆ ಗೋಕಾಕ ಡಿವಾಯ್ಎಸ್ಪಿ ರವಿ ನಾಯ್ಕ ಭಾರತ ಸರಕಾರದ ಎಸ್ಇಬಿಆಯ್ ಪ್ರಮಾಣೀಕೃತ ಸಂಪನ್ಮೂಲ ವ್ಯಕ್ತಿ ಪ್ರಶಾಂತ ಮೊಟಗಿ ವಕೀಲರಾದ ಶಿಲ್ಪಾ ಗೋಡಿಗೌಡರ ಮೂಡಲಗಿ ಬಿಇಓ ಪ್ರಕಾಶ ಹಿರೇಮಠ ಸಿಪಿಆಯ್ ಶ್ರೀಶೈಲ್ ಬ್ಯಾಕೂಡ ಸಂಸ್ಥೆಉಪಾಧ್ಯಕ್ಷರಾದ ಪೂಜಾ ಪಾರ್ಶಿ ಕಿಂಡರ್ಗಾರ್ಟನ್ ಸಂಪನ್ಮೂಲ ವ್ಯಕ್ತಿ ಇಂದಿರಾ ಸಾತನೂರ ಸ್ಥಳೀಯ ಬಿ.ಬಿ.ಬೆಳಕೂಡ, ಸುಭಾಸ ಢವಳೇಶ್ವರ, ಬಾಲನಗೌಡ ಪಾಟೀಲ, ನಿಂಗಪ್ಪಾ ಪಿರೋಜಿ, ಕುಮಾರ ಲೋಕನ್ನವರ, ರವೀಂದ್ರ ತುಪ್ಪದ, ರಮೇಶ ಕೆಂಚರಡ್ಡಿ, ಈರಪ್ಪ ಸಂಕನ್ನವರ, ಡಾ. ವಿಶಾಲ ಪಾಟೀಲ, ಪ್ರವೀಣ ಶಿವನಗೌಡ ಪಾಟೀಲ ಭಾಗವಹಿಸುವರು ಎಂದು ಶಾಲೆಯ ಪ್ರಾಚಾರ್ಯರಾದ ದ್ರಾಕ್ಷಾಯಣಿ ಎಸ್ ಮಠಪತಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
IN MUDALGI Latest Kannada News