Breaking News
Home / ಬೆಳಗಾವಿ / ತಂದೆ-ತಾಯಿಗಳು ಮಕ್ಕಳಿಗೆ ಸಂಸ್ಕಾರ ಮತ್ತು ಮಾನವೀಯ ಗುಣಗಳಿಗೆ ಆಧ್ಯತೆ ನೀಡಿ – ಕುಲಸಚಿವ ಸಂತೋಷ ಕಾಮಗೊಂಡ

ತಂದೆ-ತಾಯಿಗಳು ಮಕ್ಕಳಿಗೆ ಸಂಸ್ಕಾರ ಮತ್ತು ಮಾನವೀಯ ಗುಣಗಳಿಗೆ ಆಧ್ಯತೆ ನೀಡಿ – ಕುಲಸಚಿವ ಸಂತೋಷ ಕಾಮಗೊಂಡ

Spread the love

ಮೂಡಲಗಿ : ಮಕ್ಕಳಿಗೆ ತಂದೆ ತಾಯಿಗಳು ಸಂಸ್ಕಾರ  ಮತ್ತು ಮಾನವೀಯ ಗುಣಗಳಿಗೆ ಆಧ್ಯತೆ ನೀಡಬೇಕು ಇಂದಿನ ಒತ್ತಡ ದಿನಗಳಲ್ಲಿ ಪಾಲಕರು ಮಕ್ಕಳ ಜೊತೆಗೆ ಸಮಯ ಹಂಚಿಕೊಳ್ಳುವಂತೆ ಪ್ರಯತ್ನಿಸಬೇಕು ವಿದ್ಯಾರ್ಥಿಗಳು ಬಡತನವಿದೆ ಎಂಬ ಒತ್ತಡ ನಮ್ಮನ್ನು ಸಾದಕರನ್ನಾಗಿ ಮಾಡಲು ದಾರಿಯನ್ನು ಒದಗಿಸುತ್ತದೆ ಬಡತನವನ್ನು ಸಿರಿತನ ತರವಂತಹ ಸಾಧನೆ ನಮ್ಮದಾಗಿರಬೇಕು ನಮ್ಮಲ್ಲಿ ಕೋಟಿ ಇಲ್ಲದಿದ್ದರು ಪರವಾಗಿಲ್ಲ ಸರಕಾರದ ಕೋಟಿ ರೂಗಳ ಯೋಜನೆ ಹಣಕಾಸಿ ಸಹಿ ಮಾಡುವಷ್ಟು ಸಾದಕರು ನಾವಾಗಬೇಕು ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವ ಸಂತೋಷ ಕಾಮಗೊಂಡ ಹೇಳಿದರು
ಪಟ್ಟಣದ ಆರ್.ಡಿ.ಎಸ್. ಶ್ರೀ ವಿದ್ಯಾನಿಕೇತನ ಸಿಬಿಎಸ್‍ಇ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಪಾಲಕರು ಮಕ್ಕಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕಾಳಜಿ ವಹಿಸುತ್ತಿಲ್ಲ ಮನೆಯಲ್ಲಿ ಸಹಿತ ರಾತ್ರಿ 7 ರಿಂದ 9 ರವರೆಗೆ ಪಾಲಕರು ಮೊಬೈಲ್ ಟಿವಿ ಇನ್ನಿತರ ಘಟನೆಗಳಿಂದ ದೂರ ಇದ್ದು ಮಕ್ಕಳಜೊತೆ ಸಮಯ ಹಂಚಿಕೊಳ್ಳಬೇಕು ಮಕ್ಕಳು ಭಾವನಾತ್ಮಕವಾಗಿ ಕುಟುಂಬ, ಸಂಸ್ಕøತಿ ಸಂಪ್ರದಾಯಗಳ ಅರಿವು ಹೊಂದುವದರ ಜೊತೆಗೆ ಉತ್ತಮ ಅಧ್ಯಯನ ಮಾಡುವಂತೆ ಪ್ರೇರಣೆ ನೀಡುವುದಕ್ಕೆ ಆದ್ಯತೆ ನೀಡುವಂತೆ ತಿಳಿಸಿದರು.


ಅತಿಥಿ ಹಾಸ್ಯಕಲಾವಿದರು & ಖ್ಯಾತ ಸಂಗೀತ ನಿರ್ದೇಶಕರಾದ ಸಾದುಕೋಕಿಲ ಮಾತನಾಡಿ ಮಕ್ಕಳ ಕೈಯಲಿ ಮೊಬೈಲ್ ನೀಡಬೇಡಿ ಮಕ್ಕಳಿಗೆ ಕೌಟುಂಬಿಕ ನೋವುಗಳ ಅರಿವು ಗೊತ್ತಾಗುವಂತೆ ಇರಬೇಕು ನಾವು ಹಿಂದಿನ ದಿನಗಳಲ್ಲಿ ಬಡತನದ ಮೂಲಕವೇ ಬೆಳೆದುಬಂದಿದ್ದು ನಮ್ಮ ಕುಟುಂಬ ಕೆಲಸಕ್ಕಾಗಿ ಉತ್ತರ ಕರ್ನಾಟಕದ ಹಲವಾರು ಭಾಗಗಳಿಗೆ ಬಂದು ದುಡುಮೆ ಮಾಡಿ ಕಷ್ಟಪಟ್ಟೀದಿವಿ ಇಂದಿನ ಮಕ್ಕಳಿಗೆ ಇವುಗಳ ಯಾವುದರ ಅರಿವು ಇಲ್ಲದೇ ಮೊಜುಮಸ್ತಿಗಾಗಿ ತೊಡಿಗಿಕೊಂಡು ತಂದೆ ತಾಯಿಗಳ ಮೇಲಿನ ಪ್ರೇಮ ಕಡಿಮೆಯಾಗಿ ಸಂಸ್ಕಾರ ಮರೆಯುತ್ತಿದ್ದಾರೆ ಸಂಸ್ಕಾರಗಳನ್ನು ಕಲಿಸಿಕೊಡುವುದು ಅಗತ್ಯವಿದೆ ಅಂತಹ ದೃಷ್ಟಿಯಲ್ಲಿ ಇಂತಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿಯವರ ಕಾರ್ಯ ಶ್ಲಾಘನೀಯವಾದÀದ್ದು ಎಂದರು.
ಅತಿಥಿ ಭಾರತ ಸರಕಾರದ ಎಸ್‍ಇಬಿಆಯ್ ಪ್ರಮಾಣೀಕೃತ ಸಂಪನ್ಮೂಲ ವ್ಯಕ್ತಿ ಪ್ರಶಾಂತ ಮೋಟಗಿ ಮಾತನಾಡಿ ಶ್ರೀವಿದ್ಯಾನಿಕೇತನ ಸಿಬಿಎಸ್‍ಇ ಶಾಲೆಯ ಮಕ್ಕಳ ವಿಕಾಸಕ್ಕಾಗಿ ಅನೇಕ ಯೋಜನೆಗಳನ್ನು & ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮೀಣ ಮಕ್ಕಳ ಅಭಿವೃದ್ಧಿಗಾಗಿ ಪ್ರಯತ್ನಿಸುವ ಏಕೈಕ ಸಂಸ್ಥೆಯಾಗಿದ್ದು ಅದರ ನಿರ್ವಹಣೆ ಕಾರ್ಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿಯವರ ಕಾರ್ಯ ಅವಿಸ್ಮರಣಿಯ ಎಂದರು.
ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀಬಸವಜಯಮೃತ್ಯುಂಜಯ ಸ್ವಾಮೀಜಿ ಆರ್ಶೀವಚನ ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ ಅಧ್ಯಕ್ಷತೆ ವಹಿಸಿಕೊಂಡಿದ್ದರು ಕಾರ್ಯಕ್ರಮದಲ್ಲಿ ಮೂಡಲಗಿ ತಾಲೂಕಾ ತಹಶೀಲದಾರ ಶ್ರೀಶೈಲ್ ಗುಡಮೆ ವಕೀಲರಾದ ಶಿಲ್ಪಾ ಗೋಡಿಗೌಡರ ಸಂಸ್ಥೆಉಪಾಧ್ಯಕ್ಷರಾದ ಪೂಜಾ ಪಾರ್ಶಿ ಕಿಂಡರ್‍ಗಾರ್ಟನ್ ಸಂಪನ್ಮೂಲ ವ್ಯಕ್ತಿ ಇಂದಿರಾ ಸಾತನೂರ ಸ್ಥಳೀಯ ಬಿ.ಬಿ.ಬೆಳಕೂಡ, ಸುಭಾಸ ಢವಳೇಶ್ವರ, ಬಾಲನಗೌಡ ಪಾಟೀಲ, ನಿಂಗಪ್ಪಾ ಪಿರೋಜಿ, ಕುಮಾರ ಲೋಕನ್ನವರ, ರವೀಂದ್ರ ತುಪ್ಪದ, ರಮೇಶ ಕೆಂಚರಡ್ಡಿ, ಈರಪ್ಪ ಸಂಕನ್ನವರ, ಡಾ. ವಿಶಾಲ ಪಾಟೀಲ, ಪ್ರವೀಣ ಶಿವನಗೌಡ ಪಾಟೀಲ ಶಾಲೆಯ ಪ್ರಾಚಾರ್ಯ ದ್ರಾಕ್ಷಾಯಣಿ ಮಠಪತಿ ಹಾಜರಿದ್ದರು.


Spread the love

About inmudalgi

Check Also

ಉತ್ತಮ ಶಿಕ್ಷಣ ನಮ್ಮ ಬದುಕಿಗೆ ಜ್ಞಾನ ಸ್ಪೂರ್ತಿ ತುಂಬುತ್ತದೆ. ಡಾ. ಸುಬ್ರಾವ ಎಂಟೆತ್ತಿನವರ.

Spread the love ಮೂಡಲಗಿ : ಉತ್ತಮ ಶಿಕ್ಷಣ ನಮ್ಮ ಬದುಕಿಗೆ ಸ್ಪೂರ್ತಿ ಆಶ್ರಯ ಹಾಗೂ ಖ್ಯಾತಿಯನ್ನು ತಂದುಕೊಡುತ್ತದೆ ಶಿಕ್ಷಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ