ಮೂಡಲಗಿ : ದುಷ್ಟರನ್ನು ಸಂಹರಿಸಿ ಶಿಷ್ಟರನ್ನು ಕಾಪಾಡಲು ಹಾಗೂ ಧರ್ಮ ಅವನತಿಯ ಅಂಚಿನಲ್ಲಿದ್ದಾಗ ಧರ್ಮವನ್ನು ಕಾಪಾಡಲು ಮತ್ತೆ ಮತ್ತೆ ಭಗವಂತನ ರೂಪದಲ್ಲಿ ಅವತರಿಸಿ ಧರ್ಮ ಮಾರ್ಗದಿಂದ ನಡೆದರೆ ಮಾತ್ರ ಬದುಕಿಗೆ ಬೆಲೆ ಬರುತ್ತದೆ ಎಂದು ಶ್ರೀಕೃಷ್ಣಪರಮಾತ್ಮನು ತಿಳಿಸಿಕೊಟ್ಟಿದ್ದಾನೆ ಪ್ರಸ್ತುತ ಕಾಲದಲ್ಲಿ ಧರ್ಮ, ಸಂಸ್ಕೃತಿ ಮತ್ತು ಸಂಪ್ರದಾಯಿಗಳು ಮಾಯವಾಗುವಾಗ ಅವುಗಳ ಕಲ್ಪನೆ ಮಕ್ಕಳ ಹಂತಗಳಿAದಲೇ ಬೆಳಸುವುದು ಅಗತ್ಯವಿದೆ ಎಂದು ಮಾಡಲಗಿಯ ಆರ್.ಡಿ.ಸಂಸ್ಥೆಯ ಉಪಾಧ್ಯಕ್ಷರಾದ ಪೂಜಾ ಪಾರ್ಶಿ ಹೇಳಿದರು.
ಪಟ್ಟಣದ ಆರ್.ಡಿ. ಸಂಸ್ಥೆಯ ಶ್ರೀವಿದ್ಯಾನಿಕೇತನ ಕನ್ನಡ ಪ್ರಾಥಮಿಕ & ಪ್ರೌಢ ಶಾಲೆಯಲ್ಲಿ ಆಯೋಜಿಸಿದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಗವಂತನ ನಾಮಸ್ಮರಣೆ ಆಧ್ಯಾತ್ಮೀಕ ಚಿಂತನೆ ಉಡುಗೆ ವೇಷಭೂಷಣ ಮತ್ತು ವಿದ್ಯಾರ್ಥಿಗಳಲ್ಲಿ ಅವುಗಳ ವಿಚಾರದಾರೆಗಳನ್ನು ಬೆಳಸುವುದು ಅಗತ್ಯವಿದೆ ಎಂದರು.
ಶಾಲೆಯ ಪ್ರಧಾನ ಗುರುಗಳಾದ ಸಂಗಮೇಶ ಹಳ್ಳೂರ ಮಾತನಾಡಿ ವಿದ್ಯೆಯ ಜೊತೆಗೆ ಮಕ್ಕಳಲ್ಲಿ ಧಾರ್ಮಿಕ ಚಿಂತನೆಗಳು ಭಗವಂತನ ರೂಪಕಗಳು ಅರಿವು ನೀಡುವದರ ಜೊತೆಗೆ ಧರ್ಮ ಉಳಿಸುವದಕ್ಕಾಗಿ ಅಧರ್ಮ ನಾಶಪಡಿಸುವದಕ್ಕಾಗಿ ರೂಪಿತಗೊಂಡ ಭಗವಂತನ ವಿವಿಧ ಅವತಾರಗಳನ್ನು ಪರಿಚಯಿಸುವುದು ಅವಶ್ಯಕವಿದೆ ರಾಮ ರಹೀಮ ಏಕತಾ ಹೈ ಎನ್ನುವ ವಿಚಾರ ಮಕ್ಕಳಲ್ಲಿ ಬೆಳಸುವುದು ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಡಿ.ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ ವಹಿಸಿಕೊಂಡು ಮಾತನಾಡಿ ಮಕ್ಕಳಲ್ಲಿ ಭಕ್ತಿ ಶೃದ್ದೆ ಮತ್ತು ಭಗವಂತನ ರೂಪಕಗಳ ಅರಿವು ಮೂಡಿಸುವುದು ಇಂದಿನ ಶಿಕ್ಷಣದಲ್ಲಿ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲಕರಾದ ಗಣೇಶ ಪತ್ತಾರ, ಬಿ.ಡಿ.ಪಾಟೀಲ ಶಿಕ್ಷಕಿಯರಾದ ವಂದನಾ ನಿಡಗುಂದಿ, ಎ.ಆರ್.ಹೆಳವಿ ವಿಜಯಲಕ್ಷ್ಮೀ ಪತ್ತಾರ ರೂಪಾ ಜಾಡರ ಎಸ್ ಎಸ್ ಮಾಲಗಾರ ಪೂಜಾ ಪಾಟೀಲ, ಬಿ.ವಾಯ್.ಮಾಳೇದ ಚೇತನ ಡಬ್ಬಿ ಮಕ್ಕಳ ಪಾಲಕರು ಹಾಜರಿದ್ದರು.
ಶಿಕ್ಷಕಿಯರಾದ ಸುನೀತಾ ಪುಟ್ಟಿ ಸ್ವಾಗತಿಸಿ ನಿರೂಪಿಸಿದರು ಬೋರಮ್ಮ ಕಬ್ಬೂರ ವಂದಿಸಿದರು.