ಮೂಡಲಗಿ : ಸ್ವದೇಶಿ ಚಿಂತನೆ, ಸಾಮಾಜಿಕ & ಆರ್ಥಿಕ ಚಿಂತನೆ, ಶೈಕ್ಷಣಿಕ ಸುದಾರಣೆಯ ಜೊತೆಗೆ ಅಂತ್ಯೋದಯ ದಿವಸದ ಪ್ರತಿಪಾದನೆಯಲ್ಲಿ ಪಂ ದೀನದಯಾಳ ಉಪಾಧ್ಯಾಯರ ಪಾತ್ರ ಅವೀಸ್ಮರಣಿಯವಾಗಿದೆ ದೀನದಯಾಳರು ಸಾಮರಸ್ಯದ ಜೀವನ ಪರಿಸರ ರಕ್ಷಣೆ ಹಾಗೂ ಗ್ರಾಮೀಣ ಅಭಿವೃದ್ಧಿಯ ಪ್ರತಿಪಾಧನೆಯ ಮೂಲಕ ರಾಷ್ಟ್ರಪ್ರೇಮವನ್ನು ತುಂಬುವದರ ಜೊತೆಗೆ ದೇಶದ ಐಕ್ಯತೆಗೆ ಮಾನವ ಕಲ್ಯಾಣಕ್ಕೆ ಆದ್ಯತೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಕೇಂದ್ರ ಸರಕಾರದ ಶಿಕ್ಷಣ ಸಚಿವಾಲಯದ ಸಂಶೋದನಾ ಕೇಂದ್ರ (ಸಿಎಂಡಿಆರ್) ಧಾರವಾಡದ ಸಹಾಯಕ ಪ್ರಾಧ್ಯಾಪಕರು ಡಾ.ದುಂಡಪ್ಪ ಬಡಲಕ್ಕನ್ನವರ ಉಪನ್ಯಾಸ ನೀಡಿದರು.
ಪಟ್ಟಣದ ಆರ್.ಡಿ.ಎಸ್ ಕಲಾ, ವಾಣಿಜ್ಯ, ವಿಜ್ಞಾನ, ಸಮಾಜಕಾರ್ಯ ಪದವಿ ಮಹಾವಿದ್ಯಾಲಯದಲ್ಲಿ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯ ಬೆಳಗಾವಿಯ ಪಂ ದೀನದಯಾಳ ಉಪಾಧ್ಯಾಯರ ಅಧ್ಯಯನ ಪೀಠದಿಂದ ಜರುಗಿದ ಪಂ ದೀನದಯಾಳ ಉಪಾಧ್ಯಾಯರವರ ಜೀವನ ಮತ್ತು ಸಾಧನೆಗಳ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಉಪನ್ಯಾಸ ನೀಡುತ್ತಾ ಭಾರತದ ಅಖಂಡತೆ ಮತ್ತು ಕೆಳಹಂತದ ವರ್ಗಗಳ ಮಾನವನ ಜೀವನದ ಸಂತಸದ ಬದುಕು ನಿರ್ಮಾಣದಲ್ಲಿ sಸರಕಾರದ ಪಾತ್ರ ಪರಿಚಯ ಮಾಡಿಕೊಟ್ಟ ದೀಮಂತ ರಾಜಕಾರಣಿ ದೀನದಯಾಳ ಪಂಡಿತ್ ಜೀ ಆಗಿದ್ದರು ಎಂದರು.
ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯ ಬೆಳಗಾವಿ ಪಂ ದೀನದಯಾಳ ಉಪಾಧ್ಯಾಯರ ಅಧ್ಯಯನ ಪೀಠದ ಸಹಾಯಕ ಸಂಶೋದಕರಾದ ಯಲ್ಲಪ ಮೂಡಲಗಿ ಮಾತನಾಡುತ್ತಾ ರಾಷ್ಟ್ರದರ್ಮದಲ್ಲಿ ಹಿಂದುತ್ವ ಸಿದ್ದಾಂತ & ತತ್ವಶಾಸ್ತ್ರ ಮತ್ತು ಮಾನವತೆ ಧರ್ಮಗಳನ್ನು ಪಂಡಿತಜೀ ಪ್ರತಿಪಾದಿಸಿದರು ಅಂತಹ ಮಹನೀಯರ ಜೀವನದ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಜಾಗೃತಗೊಳಿಸುವುದು ಅಗತ್ಯವಿದೆ ಎಂದರು.
ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ಬ್ರೀಟಿಷ ದೋರಣೆಯಿಂದ ಒಡೆದು ಹೋದ ಸಮಾಜ ಧರ್ಮ ಮತ್ತು ರಾಷ್ಟ್ರವನ್ನು ಕಟ್ಟುವಲ್ಲಿ ಪಂ ದೀನದಯಾಳ ಉಪಾಧ್ಯಾಯರ ಪಾತ್ರ ಹೆಮ್ಮರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಶಿವಾನಂದ ಸತ್ತಿಗೇರಿ ಉಪನ್ಯಾಸಕ ಬಿ. ಎಂ. ಕಬ್ಬೂರ, ಎಸ್.ಎನ್. ಕುಂಬಾರ ಸಂಜೀವ ಮಂಟೂರ, ರಾಜು ಪತ್ತಾರ, ಸುನೀಲ ಸತ್ತಿ ಮತ್ತಿತರರು ಹಾಜರಿದ್ದರು.
ಕಾಲೇಜು ಪ್ರಾಚಾರ್ಯ ಸತೀಶ ಗೋಟೂರೆ ಸ್ವಾಗತಿಸಿದರು ಉಪನ್ಯಾಸಕಿ ಎಂ.ಬಿ.ಪರಮಶೆಟ್ಟಿ ನಿರೂಪಿಸಿದರು. ಉಪನ್ಯಾಸಕ ಡಾ.ಪ್ರಶಾಂತ ಮಾವರಕರ ವಂದಿಸಿದರು.