Breaking News
Home / ತಾಲ್ಲೂಕು / ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಯುವಕರಿಗೆ ಸುನೀಲ ವಂಟಗೋಡಿ ಕರೆ

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಯುವಕರಿಗೆ ಸುನೀಲ ವಂಟಗೋಡಿ ಕರೆ

Spread the love

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಯುವಕರಿಗೆ ಸುನೀಲ ವಂಟಗೋಡಿ ಕರೆ
ಮೂಡಲಗಿ :ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ಸವಾಲುಗಳನ್ನು ಎದುಸಿರಿ ಯಶಸ್ವಿಯಾಗಿ ಮುನ್ನಡೆದಾಗ ಮಾತ್ರ ನಾವು ಗ್ರಾಮದ ಅಭಿವೃದ್ದಿಯೊಂದಿಗೆ ಮುಂದೆ ಬರಲು ಸಾಧ್ಯ ಎಂದು ಸುನೀಲ ವಂಟಗೋಡಿ ಹೇಳಿದರು
ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಕೇಳಕರ ಪೌಢ ಶಾಲೆಯಲ್ಲಿ ಸಂಕಲ್ಪ ಪೌಂಡೇಶನ್ ಏರ್ಪಡಿಸಿದ ಕೆ ಎ ಎಸ್ ಹಾಗೂ ಪಿ.ಎಸ್.ಐ ಸ್ಪರ್ಧಾತ್ಮಕ ಪರೀಕ್ಷೆಯ ಉಚಿತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ ಕುಲಗೋಡ ಸುತ್ತಲಿನ ಗ್ರಾಮಗಳ ಯುವಕರಿಗಾಗಿ ನಿರಂತರ ತರಬೇತಿ ಶಿಬಿರ ನಡೆಸಲಾಗುವದು ಎಂದರು.
ಕೆ ಎ ಎಸ್ ಅಧಿಕಾರಿಯಾದ ಶಂಕರಾನಂದ ಬನಶಂಕರಿ ಮಾತನಾಡಿ ಯಾವುದೇ ಪರೀಕ್ಷೆಗೆ ಸಿದ್ದರಾಗಬೇಕಾದರೆ ತರಬೇತಿ ಅವಶ್ಯ. ವಿಷಯ ಪಾಂಡಿತ್ಯ ಉಳ್ಳವರಿಂದ ತರಬೇತಿ ಪಡೆದು ಅವರ ಮಾರ್ಗದರ್ಶನದ ಜೊತೆಗೆ ನಿಮ್ಮ ಪರಿಶ್ರಮ ಛಲ ಸವಾಲುಗಳನ್ನು ಬೇದಿಸುವ ಎದೇಗಾರಿಕೆ ಶೃದ್ಧೆ ಇದ್ದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.


ಧಾರವಾಡದ ಮಹಾತ್ಮ ಗಾಂಧಿ ಅಧ್ಯಯನ ಕೇಂದ್ರದ ವಿಷಯ ತಜ್ಞರಾದ ಚಿದಾನಂದ ಪಡದಾಳೆ.ಮಂಜುನಾಥ ಚಾಪೇಲ್ ಮಾರ್ಗದರ್ಶನ ನೀಡಿ ಉಚಿತವಾಗಿ ಪ್ರಚಲಿತ ಘಟನೆಗಳ ಪುಸ್ತಕ ನೀಡಿದರು.
ಕಾರ್ಯಗಾರದಲ್ಲಿ ಒಟ್ಟು 230ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಪುಟ್ಟು ಕೊಪ್ಪದ. ಗೋಪಾಲ ಕೇಳಕರ. ಚೇತನ ಯಕ್ಸಂಬಿ. ಭೀಮಶಿ ಕುರಬಚನ್ನಾಳ.ಬಸವರಾಜ ಮುನವಳ್ಳಿ. ಸುರೇಶ ತಳವಾರ ಶಂಕರ ಹಾದಿಮನಿ. ಹಣಮಂತ ಮಡಿವಾಳರ. ಮಲ್ಲು ಗೋಕಾವಿ. ಅನೀಲ ಹಾದಿಮನಿ. ಮಲ್ಲು ಮುರಕಟ್ನಾಳ. ಹಣಮಂತ ಗಣಿ ಚೇತನ ಮಿಕಲಿ, ಸಚಿನ ಮಾನಕೋಜಿ ಹಾಗೂ ಸಂಕಲ್ಪ ಪೌಂಡೇಶನ್ ಸರ್ವ ಸದಸ್ಯರು ಇದ್ದರು.

reporter-ಶಂಕರ ಹಾದಿಮನಿ


Spread the love

About inmudalgi

Check Also

ಲಿಂಗಾಯತ ಸಮಾಜದವರನ್ನೇ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಜಾರಕಿಹೊಳಿ ಕುಟುಂಬದಿಂದ ಅಧ್ಯಕ್ಷರಾಗುವ ಮಾತೇ ಇಲ್ಲ – ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love ಬೆಳಗಾವಿ: ಈಗ ಬಹಳ ಜನರ ಬಯಕೆ ಬಿಡಿಸಿಸಿ ಬ್ಯಾಂಕ್‌ಗೆ ಬರುವುದು. ಆದರೆ, ನಾನು ಬಿಡಿಸಿಸಿ ಬ್ಯಾಂಕ್‌ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ