ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿಗಳಿಂದ
ಕೊರೊನಾ ಸೋಂಕು ಭೀತಿಯಲ್ಲಿ ನೀಡಿರುವ ಸಂದೇಶ
ಮನುಷ್ಯತ್ವದ ಮೌಲ್ಯದಲ್ಲಿ ಸಾಗೋಣ……..
ಗೋಕಾಕ: ವಿಶ್ವವು ಉಚ್ಛಸ್ಥಿತಿಯನ್ನು ಕಳೆದುಕೊಂಡು ಅದೋಗತಿಯ ಕೊರೊನಾ ಉಲ್ಭನದಿಂದಾಗಿ ಜಗತ್ತಿನಾದ್ಯಂತ ವಿಕೃತಿಯ ಸಂಗತಿಗಳು ನಡೆದಿವೆ. ಇದರಿಂದ ಸಂಸ್ಕøತಿ ನಶೀಸಿ ಆಘಾತಕಾರಿಕ, ಅನೀರಿಕ್ಷಿತ ದುರ್ಘಟನೆ, ಸಾವು, ನೋವುಗಳ ಉಲ್ಬಣಗೊಂಡಿದೆ.
ಇಂದು ಮನುಷ್ಯನಲ್ಲಿ ದೈವೋಪಕಾರ ಸ್ಮರಣೆ ಇಲ್ಲವಾಗಿದೆ. ಅಧಿಕಾರ, ಹಣದಾಸೆ, ಕರುಣೆ ಇಲ್ಲದಿರುವುದು, ಸ್ವಯಂ ವಿಕೃತಿ, ವಿಕಾರಗಳ ಅಲೆಗಳಿಂದ ಸನಾತನ ನೀತಿ, ಧರ್ಮವನ್ನು ಸೃಷ್ಟಿ ಮೂಲವನ್ನು ಅಲ್ಲಗಳೆದು, ಎಲ್ಲದಕ್ಕೂ ನಾನೇ, ನನ್ನದೇ ಶ್ರೇಷ್ಠ, ತನ್ನ ಇಚ್ಛೆ ಪೂರೈಸುವುದು ಸರ್ವಾತ್ಮ ಸ್ವಾತಂತ್ರ್ಯವೆಂದು ಭಾವಿಸುವುದಾಗಿದೆ. ಬದುಕು ಸರಳ, ಸಹಜವಾದದ್ದು ಎಂದು ತಿಳಿದರೂ ಹುಚ್ಚರಂತೆ ಅಲೆಯುವ ಚಮತ್ಕಾರ ಮನೋಭಾವನೆಗಳಿಂದ ಸಾವಿನ ಅಂಕಿತಕ್ಕಿಂತ ಮೊದಲೇ ಮರಣಗಳ ಸಂತೆಯಾಗಿ ಇಂದು ವಿಶ್ವವು ನಶೀಸುತ್ತಲಿದೆ.
ಜ್ಞಾನ, ವಿಜ್ಞಾನಕ್ಕೆ ದೇವನು ಒಬ್ಬನೆ. ಅದನ್ನು ಪ್ರಕೃತಿಯೆಂದು ಭಾವಿಸುತ್ತೇವೆ. ಸಂಸ್ಕøತಿಯನ್ನು ದೈವ ಕೊಡುಗೆಯೆಂದು ದೇವರನ್ನು ಸ್ಮರಿಸಿ ಜಗತ್ತಿನ ಎಲ್ಲ ಸಂಪತ್ತುಗಳನ್ನು ಎಲ್ಲರ ಸುಖಕ್ಕಾಗಿ ಬಳಸಿ, ಸಮಸ್ತ ಸತ್ಯದಿಂದ ಸಾಗುವುದೇ ಸರಳ ಜೀವನ. ಇಲ್ಲಸಲ್ಲದಂತ ಕ್ಷಣಿಕ ಸುಖಕ್ಕಾಗಿ ನಮ್ಮ ಚಮತ್ಕಾರವೇ ಶ್ರೇಷ್ಠವೆಂದು ನಂಬಿಕೆ ಮೆರೆದು, ಸಂಕುಚಿತ ಗುಣಗಳಿಂದ ಇಂದಿನ ದು:ಖಸ್ಥಿತಿಗೆ ಕಾರಣವಾಗಿದ್ದೇವೆ.
ಈಗಲಾದರೂ ಎಚ್ಚರಗೊಂಡು ಮನುಷ್ಯತ್ವದ ಮೌಲ್ಯಗಳಲ್ಲಿ ಸಕ್ರಮಣ ಪ್ರಮಾಣಗಳಿಂದ ಸಾಗಿದಾಗ ಮೌಲ್ಯಮರಣದಿಂದ ತೃಪ್ತರಾಗುತ್ತೇವೆ. ಅಪಮೌಲ್ಯ ಮರಣದಿಂದ ಅತೃಪ್ತರಾಗಿ ಸಾಯುವುದು ಶ್ರೇಷ್ಠವಲ್ಲವೆಂದು ಸಮಸ್ತ ಶಾಸ್ತ್ರ, ನೀತಿ, ಸರ್ವ ಧರ್ಮಗಳ ಅನುಭವಾದಿ ಬೋಧನೆಯಾಗಿದೆ. ಇದನ್ನು ಅರಿತು ಬದುಕುವುದೇ ವಿಶ್ವ ಮೌಲ್ಯ ಮರಣ ಒಡಂಬಡಿಕೆಯ ನೀತಿಯಾಗಿದೆ.