Breaking News
Home / ಬೆಳಗಾವಿ / ಸೆ.22 ರಂದು ಕಬ್ಬು ಬೆಳೆಗಾರರ ಸಂಘ ಸಭೆ

ಸೆ.22 ರಂದು ಕಬ್ಬು ಬೆಳೆಗಾರರ ಸಂಘ ಸಭೆ

Spread the love

ಮೂಡಲಗಿ:  ಸಮೀಪದ ಸಮೀರವಾಡಿ ಕಬ್ಬು ಬೆಳೆಗಾರರ ಸಂಘ  ವಾರ್ಷಿಕ ಸರ್ವ ಸಾಧಾರಣಾ ಸಭೆ ಸೆ.22 ರಂದು ಬೆಳಿಗ್ಗೆ 11 ಘಂಟೆಗೆ ಸಮೀರವಾಡಿ ಶುರ‍್ಸ್ ಕಾರ್ಖಾನೆ ವೃತ್ತದ ಬಳಿಯ ಕಬ್ಬು ಬೆಳೆಗಾರರ ಸಂಘದ ಸಭಾ ಭವನದಲ್ಲಿ ಸಂಘದ ರಾಮಣ್ಣಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಜರುಗಲಿದೆ.
  ಸಭೆಯಲ್ಲಿ 2024-25ನೇ ಸಾಲಿನ ಲೆಕ್ಕ ಪತ್ರ ಓದುವುದು,  2024-25ನೇ  ಸಾಲಿನ ೨ ಕಂತಿನ ಚರ್ಚೆ, 2022-23ನೇ  ಸಾಲಿನಲ್ಲಿ 1೦೦ ರೂಪಾಯಿ ಅಂದಿನ ಕರ್ನಾಟಕ ಘನ ಸರ್ಕಾರದ
ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದು, ಅಂದರೆ ಸರ್ಕಾರ 5೦
ರೂಪಾಯಿ ಹಾಗೂ ಕಾರ್ಖಾನೆಯವರು 5೦ ರೂ ಕೂಡಿ ಒಟ್ಟು 1೦೦ ರೂ ರೈತರಿಗೆ ಕೊಡುವುದಾಗಿ ಘೋಷಣೆ ಮಾಡಿದ್ದು ಇರುತ್ತದೆ ಅದರ ಬಗ್ಗೆ ಚರ್ಚೆ ಹಾಗೂ  ಅಧ್ಯಕ್ಷರ ಅಪ್ಪಣೆಯ ಮೇರೆಗೆ ಬಂದಂತಹ ವಿಷಯ ಚರ್ಚೆಗಳನ್ನು ಮಾಡಲಾಗುವುದು.
   ಸಮೀರವಾಡಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರು ಸಭೆಯಲ್ಲಿ ಭಾಘವಹಿಸಬೇಕೆಂದು ಸಂಘದ ಕಾರ್ಯದರ್ಶಿ ರಂಗನಗೌಡ ಪಾಟೀಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Spread the love

About inmudalgi

Check Also

ಗ್ರಾಮದೇವತೆ ಭಕ್ತರ ಇಷ್ಟಾರ್ಥ ಪೋರೈಸುವ ಶಕ್ತಿದೇವತೆಯಾಗಿದ್ದಾಳೆ:ಅನಂತಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ

Spread the loveಗ್ರಾಮದೇವತೆ ಭಕ್ತರ ಇಷ್ಟಾರ್ಥ ಪೋರೈಸುವ ಶಕ್ತಿದೇವತೆಯಾಗಿದ್ದಾಳೆ:ಅನಂತಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಬೆಟಗೇರಿ:ಗ್ರಾಮದೇವತೆ ದ್ಯಾಮವ್ವದೇವಿ ಮಹಾನ ಆದಿಶಕ್ತಿದೇವಿಯಾಗಿದ್ದಾಳೆ. ತನ್ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ