ಸಮ್ಮೇದ ಶಿಖರಜಿ ಮತ್ತು ಪಾಲಿಟಾನ ರಕ್ಷಣೆಗಾಗಿ ಮೂಡಲಗಿ ಜೈನ್ ಸಮುದಾಯದಿಂದ ಪ್ರತಿಭಟನೆ
ಮೂಡಲಗಿ: ಗುಜರಾತ ರಾಜ್ಯದ ಪಾಲಿಟಾನ ಮತ್ತು ಜಾರ್ಖಂಡ ರಾಜ್ಯದಲ್ಲಿನ ಸಮ್ಮೇದ ಶಿಖರಜಿ ಕ್ಷೇತ್ರವನ್ನು ಸರಕಾರ ಪ್ರವಾಸೋದ್ಯಮ ತಾನ ಎಂದು ಹೊರಡಿಸಿರುವ ಅಧಿ ಸೂಚನೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಮೂಡಲಗಿ ಹಾಗೂ ಗೋಕಾಕ ತಾಲೂಕಿನ ಜೈನ ಸಮುದಾಯದವರು ಮೂಡಲಗಿ ಪಟ್ಟಣದಲ್ಲಿ ಬುಧವಾರದಂದು ಪ್ರತಿಭಟನಾ ರ್ಯಾಲಿ ನಡೆಸಿ ಮೂಡಲಗಿ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಜೈನ್ ಮಂದಿರದಲ್ಲಿ ಜಮಾವಣೆಗೊಂಡ ಜೈನ ಸಮುದಾಯದ ಭಾಂಧವರು ಜೈನ ಮಂದಿರದಿಂದ ಕಾಲೇಜ ರಸ್ತೆಯ ಮೂಲಕ ಕಲ್ಮೇಶ್ವರ ವೃತ್ತ, ಚನ್ನಮ್ಮ ವೃತ್ತ, ಕರೇಮ್ಮ ದೇವಿ ವೃತ್ತ, ಬಸವೇಶ್ವರ ವೃತ್ತ ಹಾಗೂ ಸಂಗಪ್ಪಣ್ಣ ವೃತ್ತದ ಮೂಲಕ ಕಲ್ಮೇಶ್ವರ ವೃತ್ತದವರಿಗೆ ಪ್ರತಿಭಟನಾ ರ್ಯಾರ್ಲಿ ನಡೆಸಿದರು. ಕಲ್ಮೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರಕಾರ ವಿರುದ್ದ ಘೋಷಣೆಕೂಗಿ ಕೇಂದ್ರ ಮತ್ತು ಆಯಾ ರಾಜ್ಯ ಸಕಾರಗಳು ಸಮ್ಮೇದ ಶಿಖರಜಿ ಮತ್ತು ಪಾಲಿಟಾನ ಅಧಿಸೂಚನೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗೋಕಾಕ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಜೈನ ಸಮಾಜಕ್ಕೆ ಇರುವ ಒಂದೆ ಒಂದು ತೀರ್ಥ ಕ್ಷೇತ್ರ ಇರುವ ಕ್ಷೇತ್ರದಲ್ಲಿ 24 ತೀರ್ಥಂಕರಲ್ಲಿ 20 ತೀರ್ಥಂಕರು ವೋಕ್ಷಕ್ಕೆ ಹೋದ ಕ್ಷೇತ್ರವಾಗಿದೆ, ಈ ಕ್ಷೇತ್ರ ಜೈನರಿಗೆ ಪೂಜ್ಯನಿಯ ಮತ್ತು ಪವಿತ್ರಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಪ್ರವಾಸೋದ್ಯಮ ಕ್ಷೇತ್ರ ಎಂದು ಮಾಡುವದರಿಂದ ಜೈನ್ ಸಮುದಾಯಕ್ಕೆ ದಕ್ಕೆ ಉಂಟಾಗುತ್ತದೆ. ಸರಕಾರ ಹೊರಡಿಸಿರುವ ಆದೇಶವನ್ನು ಕೂಡಲೇ ಸರಕಾರ ಹಿಂದೆ ಪಡೆಯಬೇಕೆಂದು ಸರಕಾರವನ್ನು ಆಗ್ರಹಿಸಿದ ಅವರು ಜಾರಕಿಹೊಳಿ ಕುಟುಂಬ ಜೈನ್ ಸಮುದಾಯದವರ ಜೊತೆ ಸದಾಕಾಲ ಬೆನ್ನೆಲುಬಾಗಿ ಇರುತ್ತವೆ ಎಂದರು.
ಪ್ರತಿಭಟನೆಯಲ್ಲಿ ಜೈನ ಸಮುದಾಯದ ಮುಖಂಡರಾದ ಉದಯಕುಮಾರ ಜೋಕಿ, ಶೀತಲ ಡೊಂಗರೆ, ಲಕ್ಷ್ಮಣ ಸಪ್ತಸಾಗರ, ಭರತೇಶ ಉಪಾಧ್ಯೆ, ವರ್ಧಮಾನ ಬೋಳಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಆದೇಶವನ್ನು ರದ್ದುಗೊಳಿಸ ಬೇಕು ಇಲ್ಲದಿದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಸರಕಾರಕ್ಕೆ ಎಚ್ಚರಕ್ಕೆ ನೀಡಿದರು.
ಪ್ರತಿಭಟನೆಯಲ್ಲಿ ಜೈನ ಸಮಾಜ ಮುಖಂಡರಾದ ಡಾ.ಬಿ.ಎಸ್.ಬಾಬಣ್ಣವರ, ನೇಮಣ್ಣಾ ಬೇವಿನಕಟ್ಟಿ, ಪಾಯಗೂಂಡ ಪಾಟೀಲ, ಭರಮಪ್ಪಾ. ಬಾಗೇವಾಡಿ, ನಂದಕುಮಾರ ಉಂದ್ರಿ, ಎಸ್.ಆರ್.ಉಪ್ಪಿನ, ಪಾರೀಶ ಹುಕ್ಕೇರಿ, ಅನ್ನಪ್ಪ ಅಕ್ಕನವರ, ಮಾನಿಕ ಬೋಳಿ, ಮಲ್ಲಪ್ಪಾ ಛಬ್ಭಿ, ವರ್ಧಮಾನ ಅಡಕೆ, ಮಲ್ಲಪ್ಪಾ ಉಂದ್ರಿ, ಜಂಬು ಚಿಕ್ಕೋಡಿ, ಭರತೇಶ ಉಪ್ಪಿನ್, ಸಾವಂತ ಹೊಸಮನಿ, ಜಯಪಾಲ ಪಟ್ಟಣಶೆಟ್ಟಿ, ಶಾಸಕ ಹಾಗೂ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಅಬ್ದುಲ್ ಮಿರ್ಜಾನಾಯಿಕ ಹಾಗೂ ಮೂಡಲಗಿ, ಪಟಗುಂದಿ, ಹಳ್ಳೂರ, ಭೈರನಟ್ಟಿ, ನಾಗನೂರ, ಹುಣಶ್ಯಾಳ ಪಿ.ವಾಯ್ ಗ್ರಾಮ ಸೇರಿದಂತೆ ಮೂಡಲಗಿ-ಗೋಕಾಕ ತಾಲೂಕಿನ ವಿವಿಧ ಗ್ರಾಮಗಳ ಜೈನ ಸಮಾಜದ ಭಾಂದವರು ಭಾಗವಹಿಸಿದರು.