ಮೂಡಲಗಿ : ಶ್ರೀಗಂಧ ಕದಿಯುತ್ತಿರುವ ಕದಿಮರು ಅಂಧರ
ಮೂಡಲಗಿ : ತಾಲೂಕಿನ ಮುನ್ಯಾಳ ಗ್ರಾಮದ ಹಳ್ಳದ ದಂಡೆಯ ಮೇಲೆ ಇರುವ ಶ್ರೀಗಂಧದ ಕಟ್ಟಿಗೆ ತುಂಡುಗಳನ್ನು ಕಡಿಯುತ್ತಿರುವ ಖಚಿತ ಮಾಹಿತಿ ಮೇರಿಗೆ ಮೂಡಲಗಿ ಪಿಎಸ್‌ಐ ಎಮ್.ಎನ್ ಸಿಂಧೂರ, ಸಿಬ್ಬಂದಿಗಳಾದ ಆರ್. ಎಸ್ ಪೂಜೇರಿ, ಐ.ಎ ಸೌದಾಗರ, ಎಲ್.ಪಿ ಹಂಪಿಹೋಳಿ, ಡಿ.ಜಿ ಕೋಣ್ಣೂರ, ಬಿ.ಆರ್ ಪಾಟೀಲ್, ಜಿ.ಎನ್ ಕಾಗವಾಡ, ಎಸ್.ಜಿ ಉಜ್ಜಿನಕೋಪ ಆಧಿಕಾರಿಗಳು ದಾಳಿ ನಡೆಸಿ ರಾಯಬಾಗ ತಾಲೂಕಿನ ಮೂಗಳಖೋಡ ಗ್ರಾಮದ ಗೋಪಾಲ ನಾಮದೇವ ಕದಮ(50), ಮಚ್ಚೇಂದ್ರ ದತ್ತು ಕದಮ(55), ಪಾಲಭಾಂವಿ ಗ್ರಾಮದ ರಫೀಕ್ ಅಪ್ಪಾಸಾಬ ನಾಯಿಕವಾಡಿ(35) ಎನ್ನಲಾದ ಮೂರು ಆರೋಪಿಗಳನ್ನು ಬಂದಿಸಿದ್ದಾರೆ
ಇವರು 3.38.355 ರೂ ಕಿಮ್ಮತ್ತಿನ 112 ಕೆಜಿ ತೂಕದ ಶ್ರೀಗಂಧ ಮರದ ತುಕ್ಕಡಿಗಳನ್ನು ಹಾಗೂ ಸಾಗಾಟ ಮಾಡಲು ಬಳಸುತ್ತಿದ್ದ ಮೋಟರ್ ಸೈಕಲ್ ಮತ್ತು ಮರವನ್ನು ಕಡಿಯಲು ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂಡಲಗಿ ಪೋಲಿಸ್ ಠಾಣೆಯ ಅಪರಾಧ ಸಂಖ್ಯೆ 44/2020 ಕಲಂ : 379 ಐಪಿಸಿ, 86 87 ಕರ್ನಟಕ ಅರಣ್ಯ ಕಾಯ್ದೆ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿ ಮೂರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.