ಜು.31 ರಿಂದ ಸತೀಶ ಶುಗರದಿಂದ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಣೆ*
ಮೂಡಲಗಿ: ಹುಣಶ್ಯಾಳ ಪಿ. ಜಿ ಬಳಿಯ ಸತೀಶ ಶುಗರ್ ಕಾರ್ಖಾನೆಗೆ ಸನ್ 2022-23 ರ ಹಂಗಾಮಿನಲ್ಲಿ ಕಬ್ಬು ಪೂರೈಸಿದ ಎಲ್ಲ ರೈತ ಬಾಂದವರೈತರಿಗೆ ರಿಯಾಯಿತಿ ದರದಲ್ಲಿ
ಪೂರೈಸಿದ ಪ್ರತಿ ಟನ್ ಕಬ್ಬಿಗೆ 500 ಗ್ರಾಂ (ಅರ್ಧ ಕೆ.ಜಿ) ದಂತೆ ಸಕ್ಕರೆಯನ್ನು ಪ್ರತಿ ಕಿ. ಗ್ರಾಂ. ಗೆ 20 ರೂ ರಿಯಾಯಿತಿ ದರದಲ್ಲಿ ವಿತರಿಸುವ ಕುರಿತು ಕಾರ್ಖಾನೆಯ ಆಡಳಿತ ಮಂಡಳಿಯಲ್ಲಿ ನಿರ್ಧರಿಸಲಾಗಿದೆ ಎಂದು ಕಾರ್ಖಾನೆಯ ಚೇರಮನ್ ಮತ್ತು ಸಿ. ಎಫ್. ಓ ಪ್ರದೀಪಕುಮಾರ ಇಂಡಿ ಅವರ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಸನ್ 2022-23 ರ ಹಂಗಾಮಿನಲ್ಲಿ ಕಬ್ಬು ಪೂರೈಸಿದ ಎಲ್ಲ ರೈತ ಬಾಂಧವರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಕ್ಕರೆಯನ್ನು ದಿ.31.07.2023 ರಿಂದ ರವಿವಾರದ ಹೊರತುಪಡಿಸಿ
ಸತೀಶ ಶುಗರ ಕಾರ್ಖಾನೆಯ ಆವರಣದಲ್ಲಿ ವಿತರಿಸಲಾಗುವುದು.
ಕಾರಣ, ಕಬ್ಬು ಪೂರೈಸಿದ ಎಲ್ಲ ರೈತ ಬಾಂಧವರು ಖುದ್ದಾಗಿ ಅಥವಾ ತಮ್ಮ ಪ್ರತಿನಿಧಿಯ ಮೂಲಕ
ಕಾರ್ಖಾನೆಯ ಆವರಣದ ಸಕ್ಕರೆ ವಿತರಣಾ ಕೇಂದ್ರದಲ್ಲಿ ಕಬ್ಬಿನ ತೂಕದ ಪಾವತಿ, ಗುರುತಿನ ಚೀಟಿ ಹಾಗೂ ಪ್ರತಿನಿಧಿಯಾಗಿದ್ದಲ್ಲಿ ಸಂಬಂಧಪಟ್ಟ ವಲಯ ಕಚೇರಿಗಳಿಂದ ಅನುಮೋದಿಸಲ್ಪಟ್ಟ ಸಮ್ಮತಿ ಪತ್ರಗಳನ್ನು
ಕಡ್ಡಾಯವಾಗಿ ಕಚೇರಿ ವೇಳೆಯಲ್ಲಿ ಹಾಜರು ಪಡಿಸಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಕಾರ್ಖಾನೆಯ ಚೇರಮನ್ ಮತ್ತು ಸಿ.ಎಫ್.ಓ ಪ್ರದೀಪಕುಮಾರ ಇಂಡಿ ಅವರು ತಿಳಿಸಿದ್ದಾರೆ