ಸತೀಶ ಶುಗರ್ಸ ಕಾರ್ಖಾನೆಯ ಬಾಯ್ಲರ್ ಪ್ರದೀಪನ ಪೂಜೆ
ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ ಶುಗರ್ಸ್ ಕಾರ್ಖಾನೆಯಲ್ಲಿ ಮಂಗಳವಾರ ಪ್ರಸಕ್ತ 2023-24 ಹಂಗಾಮಿನ ಬಾಯ್ಲರ್ ಪ್ರದೀಪನ ಪೂಜಾ ಕಾರ್ಯಕ್ರಮ ಕಾರ್ಖಾನೆಯ ಚೇರಮನ್ ಮತ್ತು ಮುಖ್ಯ ಹಣಕಾಸಿನ ಅಧಿಕಾರಿ ಪ್ರದೀಪಕುಮಾರ ಇಂಡಿ ಅವರು ಮಹಾಲಕ್ಷೀ ಮತ್ತು ಅಗ್ನಿಪೂಜೆ ಮಾಡುವ ಮೂಲಕ ಬಾಯ್ಲರ್ ಪ್ರದೀಪನ ಕಾರ್ಯಕ್ರಮವನ್ನು ನೆರವೇರಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷರುಗಳಾದ ಎಲ್.ಆರ್.ಕಾರಗಿ, ಪಿ.ಡಿ.ಹಿರೇಮಠ ಉಪಾಧ್ಯಕ್ಷರುಗಳಾದ ವೀರು ತಳವಾರ, ಅಜೀಬಸಿಂಗ್ ರಾಣಾ ಹಾಗೂ ದೀಲಿಪ ಪವಾರ ಮತ್ತು ವಿವಿಧ ವಿಭಾಗಗಳ ಮೇಲಾಧಿಕಾರಿಗಳು ಕಾರ್ಮಿಕ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
IN MUDALGI Latest Kannada News