ಸತೀಶ ಶುಗರ್ಸ್ ಕಾರ್ಖಾನೆಯಿಂದ ಪ್ರಗತಿ
ರೈತರಿಗೆ ಸತ್ಕಾರ
ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ ಶುಗರ್ಸ್ ಕಾರ್ಖಾನೆಯಲ್ಲಿ77 ನೇ ಗಣರಾಜ್ಯೋತ್ಸವದ ಅಂಗವಾಗಿ ಪ್ರಗತಿ ಪರ ರೈತಗೆ ಸತ್ಕಾರ ಸಮಾರಂಭ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸತೀಶ ಸಮೂಹ ಸಂಸ್ಥೆಗಳ
ಚೇರಮನ್ ಮತ್ತು ಸಿ.ಎಫ್.ಓ ಪ್ರದೀಪಕುಮಾರ ಇಂಡಿ ಮಾತನಾಡಿ,
ಸ್ವಾತಂತ್ರ್ಯದ ನಂತರ ದೇಶದ ಸುಭದ್ರ ಆಡಳಿತ ಮತ್ತು
ಅಭ್ಯುದಯಕ್ಕಾಗಿ ಜಗತ್ತಿನ ಹಲವಾರು ರಾಷ್ಟ್ರಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಡಾ.ಬಿ.ಆರ್.ಅಂಬೇಡ್ಕರರವರ ಅಧ್ಯಕ್ಷತೆಯಲ್ಲಿ ಕರಡು
ಸಮಿತಿಯು ತನ್ನದೆಯಾದ ಸಂವಿಧಾನವನ್ನು ರಚಿಸಿ ಜನೇವರಿ26, 1950ರಂದು ಭಾರತವುಗಣ ರಾಜ್ಯವೆಂದು ಘೋಸಿಸಲ್ಪಟ್ಟಿತು. ದೇಶದಲ್ಲಿ ಅನೇಕ ಜಾತಿ, ಮತ, ಪಂಥಗಳಿದ್ದರೂ ವಿವಿಧತೆಯಲ್ಲಿ ಏಕತೆಯಿಂದ ಬಾಳಲು
ಸಂವಿಧಾನವು ನಮ್ಮೆಲ್ಲರಿಗೂ ಮೂಲಭೂತ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ನೀಡಿದ್ದು, ಪ್ರತಿಯೊಬ್ಬ ಪ್ರಜೆಯುತನ್ನ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸುವುದರೊಂದಿU Éದೇಶದ
ಸಂವಿಧಾನವನ್ನು ಗೌರವಿಸಬೇಕು ಎಂದರು. ಸತೀಶಸಮೂಹ ಸಂಸ್ಥೆಯ ಸತೀಶ ಶುಗರ್ಸ್‍ನ ಬೆಳಗಾಂ ಶುಗರ್ಸ್ ಹುದಲಿ ಕಾರ್ಖಾನೆಗಳು ಕಡಿಮೆ ಅವಧಿಯಲ್ಲಿ ದಾಖಲೆಯ ಪ್ರಮಾಣದಲ್ಲಿ ಕಬ್ಬುನುರಿಸಿ ಹೆಚ್ಚಿನ ಸಾಧನೆಯತ್ತ
ಮುನ್ನಡೆಯುತ್ತಿರುವುದು ಸಂತೋಷದ ವಿಷಯವಾಗಿದೆ. ಪ್ರಸಕ್ತ
ಸಾಲಿನಲ್ಲಿ ಸತೀಶ ಶುಗರ್ಸ್ ಕಾರ್ಖಾನೆಯ ಕಬ್ಬು ನುರಿಸುವ ಸಾಮಥ್ರ್ಯವನ್ನು ಹೆಚ್ಚಿಸಲಾಗುತ್ತಿದ್ದು, ಮುಂದಿನ ವರ್ಷದಿಂದ ಹೆಚ್ಚುವರಿ ಸಾಮಥ್ರ್ಯಕ್ಕೆ ಅನುಗುಣವಾಗಿ ಕಬ್ಬುನುರಿಕೆಯು ಕಾರ್ಯಗತವಾಗುತ್ತದೆ. ಈ ಒಂದು ಸಾಧನೆಗೆಕಾರ್ಮಿಕ ವ ಸಿಬ್ಬಂದಿಯವರ ಮತ್ತು ರೈತಬಾಂಧವರ ನಿರಂತರ
ಸಹಕಾರವೇ ಕಾರಣವಾಗಿದ್ದು, ಕಾರ್ಖಾನೆಯ ಪ್ರಗತಿಗೆ ತಮ್ಮೆಲ್ಲರ ಸಹಕಾರ ಹೀಗೆ ನಿರಂತರವಾಗಿರಲಿ ಎಂದು ಆಶಿಸಿದರು.
ಸತ್ಕಾರ ಸ್ವೀಕರಿಸಿದ ಪ್ರಗತಿ ಪರ ರೈತರು ಮತ್ತು ಮೂಡಲಗಿಯ
ಶ್ರೀಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀದತ್ತಾತ್ರಯಬೋಧ ಸ್ವಾಮಿಗಳು ಮಾತನಾಡಿ, ರೈತಬಾಂಧವರು ಸ್ವಾಭಿಮಾನಿಗಳಾಗಿ ಬದುಕಬೇಕು, ನಿರಂತರವಾಗಿ ಒಂದೇ ಬೆಳೆಗೆ ಅಂಟಿಕೊಳ್ಳದೆ ಮಿಶ್ರ
ಬೆಳೆಗೆ ಪ್ರಾಮುಖ್ಯತೆ ನೀಡಬೇಕು, ಅದರೊಟ್ಟಿಗೆ ವಾಣಿಜ್ಯ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗ ಬೇಕು, ಸತೀಶ ಶುಗರ್ಸ ಕಾರ್ಖಾನೆಯು ಇಲ್ಲಿನ ರೈತ ಬಾಂಧವರು ಮತ್ತು ಯುವ ಸಮೂಹಕ್ಕೆ ಆಸರೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಸಂಸ್ಥೆಯು ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರಗತಿಯಾಗಲಿ ಎಂದು ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು
ಕಾರ್ಖಾನೆಯ ಹಿರಿಯ ಅಧಿಕಾರಿಗಳು ಸನ್ಮಾನಿಸಿದರು.
. ಶ್ರೀದತ್ತಾತ್ರಬೋಧ ಸ್ವಾಮಿ, ಬಸವರಾಜ ವಾಲಿ, ಸಾರಿಗೆ ಮುಕ್ತೆದಾರರಾದ ಕೆಂಚಪ್ಪಾ ಶಿಂತ್ರಿ, ಸಿದ್ದಪ್ಪಾ ಗದಾಡಿ ಪೂಜಾ ಹಾಗೂ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಪಿ. ಡಿ. ಹಿರೇಮಠ,
ಉಪಾಧ್ಯಕ್ಷರುಗಳಾz ವೀರು ತಳವಾರ, ದಿಲೀಪ ಪವಾರ, ಕಬ್ಬು ಅಭಿವೃದ್ದಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ ಸಸಾಲಟ್ಟಿ, ಸ್ಟೀಲ್ ಘಟಕದ ಉಪ ಪ್ರಧಾನ ವ್ಯವಸ್ಥಾಪಕ ಸಂಜಯ ಭಾವಿಸಕರ, ಸಹಾಯಕ ಪ್ರಧಾನ ವ್ಯವಸ್ಥಾಪಕರುಗಳಾದ ಅರುಣ ಚೌಗಲಾ, ಸುರೇಶ ಭೋಸಲೆ,
ಮೃತ್ಯುಂಜಯಕನಕೇರಿ, ವಿಜಯಕಟಾವಕರ, ಹಿರಿಯ
ವ್ಯವಸ್ಥಾಪಕರುಗಳು, ಅಧಿಕಾರಿ ವರ್ಗದವರು, ಕಾರ್ಮಿಕ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
IN MUDALGI Latest Kannada News