Breaking News
Home / Recent Posts / ಸಾವಳಗಿಯ ಲಿಂ. ಸಿದ್ಧರಾಮೇಶ್ವರ ಜಗದ್ಗುರುಗಳು ಶಿವಯೋಗ ತತ್ವ ಬೆಳೆಸಿದರು

ಸಾವಳಗಿಯ ಲಿಂ. ಸಿದ್ಧರಾಮೇಶ್ವರ ಜಗದ್ಗುರುಗಳು ಶಿವಯೋಗ ತತ್ವ ಬೆಳೆಸಿದರು

Spread the love

 

ಸಾವಳಗಿಯ ಲಿಂ. ಸಿದ್ಧರಾಮೇಶ್ವರ ಜಗದ್ಗುರುಗಳು ಶಿವಯೋಗ ತತ್ವ ಬೆಳೆಸಿದರು

ಸಾವಳಗಿ : ‘ಸಾವಳಗಿಯ ಲಿಂಗೈಕ್ಯ ಸಿದ್ಧರಾಮೇಶ್ವರ ಜಗದ್ಗುರುಗಳು ಶಿಕ್ಷಣ ಮತ್ತು ಸಂಸ್ಕøತಿಯ ಆರಾಧಕರಾಗಿದ್ದು, ಶಿವಯೋಗ ತತ್ವ, ಪರಂಪರೆಯನ್ನು ಬೆಳೆಸಿದ ಮಹಾ ಮಹಿಮಾ ಸತ್ಪುರುಷರು’ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹೇಳಿದರು.
ಗೋಕಾಕ ತಾಲ್ಲೂಕಿನ ಸಾವಳಗಿಯ ಜಗದ್ಗುರ ಶಿವಲಿಂಗೇಶ್ವರ ಪೀಠದಲ್ಲಿ ಜರುಗಿದ ಲಿಂಗೈಕ್ಯ ಸಿದ್ಧರಾಮೇಶ್ವರ ಜಗದ್ಗುರುಗಳ 44ನೇ ಪುಣ್ಯಾರಾಧನೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಶ್ರೀಗಳು ಧಾರ್ಮಿಕ, ಸಾಮಾಜಿಕ ಹಾಗೂ ದಾರ್ಶನಿಕರಾಗಿ ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.
1940ರ ದಶಕದಲ್ಲಿ ಹುಕ್ಕೇರಿ, ಗೋಕಾಕ ತಾಲ್ಲೂಕಿನ ಗ್ರಾಮಗಳಿಂದ ಮುಲ್ಕಿ ಕಲಿಯಲು ಮತ್ತು ಪರೀಕ್ಷೆ ಬರೆಯಲು ಗೋಕಾಕಗೆ ಬರುತ್ತಿದ್ದ ಮಕ್ಕಳಿಗೆಲ್ಲ ಸಾವಳಗಿಯ ಮಠದಲ್ಲಿ ಅನ್ನಪ್ರಸಾದ ವ್ಯವಸ್ಥೆ ಇರುತಿತ್ತು. ಅದರಲ್ಲಿ ನಾನು ಒಬ್ಬ ವಿದ್ಯಾರ್ಥಿಯಾಗಿದ್ದೆ. ನನ್ನ ಏಳ್ಗೆಗೆ ಸಾವಳಗಿಯ ಶಿವಲಿಂಗೇಶ್ವರರ ಕೃಪೆ ದೊಡ್ಡದಿದೆ ಎಂದು ಕಂಬಾರ ಅವರು ನೆನಪಿಸಿಕೊಂಡು ಕಣ್ಣಿರಾದರು.
ಈಗಿರುವ ಪೀಠದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಶಿವಯೋಗ ಪರಂಪರೆಯನ್ನು ಕಟ್ಟು ನಿಟ್ಟಿನಿಂದ ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದ್ದಾರೆ. ಸಾವಳಗಿಯ ಮಠವು ಹಿಂದೂ ಮುಸ್ಲಿಂ ಸಮಾರಸ್ಯತೆಯನ್ನು ಬೆಳೆಸುವ ಅತ್ಯಂತ ಜಾಗೃತ ಮಠವಾಗಿದೆ ಎಂದರು.
ಪ್ರಸಕ್ತ 2023ಕ್ಕೆ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ ಸನ್ನಿಧಿಯವರಿಗೆ 75 ವಸಂತಗಳನ್ನು ಪೂರೈಸಿದ್ದು, ಈ ಸಂದರ್ಭದಲ್ಲಿ ಶ್ರೀಗಳಿಗೆ ಭಕ್ತರಿಂದ ಅಭಿನಂದನೆಯ ಗ್ರಂಥವನ್ನು ಸಮರ್ಪಿಸುವ ಸಂಕಲ್ಪ ಮಾಡಲಾಗಿದ್ದು, ಎಲ್ಲ ಭಕ್ತರು ಸೇರಿ ಅದನ್ನು ಈಡೇರಿಸೋಣ ಎಂದರು.
ಅತಿಥಿ ಬೆಳಗಾವಿಯ ವಕೀಲ, ಸಾಹಿತಿ ರವೀಂದ್ರ ತೋಟಿಗೇರ ಮಾತನಾಡಿ ‘ಧರ್ಮ ಸಂಹಿಷ್ಣುತೆಯ ಸಾವಳಗಿಯ ಪೀಠವು ಸಮಾಜದಲ್ಲಿ ಸಾಮರಸ್ಯತೆ ಮತ್ತು ಸಂಸ್ಕøತಿಯನ್ನು ಬೆಳೆಸುತ್ತಲಿದೆ ಎಂದರು.
ಸಾನ್ನಿಧ್ಯವಹಿಸಿದ್ದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಡಣಿಯ ವೇದಮೂರ್ತಿ ಚನ್ನವೀರಸ್ವಾಮಿ ಹಿರೇಮಠ ಅವರು ಕೀರ್ತನೆ ಮಾಡಿದರು.
ಶಿವಕುಮಾರ ಗವಾಯಿಗಳು, ಗಾನಭೂಷಣ ವೀರೇಶ ಕಿತ್ತೂರ ಅವರಿಂದ ಸಂಗೀತ ಗೋಷ್ಠಿ ಜರುಗಿತು. ನಾಡಿನ ವಿವಿಧೆಡೆಯಿಂದ ಭಕ್ತರು ಭಾಗವಹಿಸಿದರು.
ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.
ಬೆಳಗಾವಿಯ ರೋಹಿಣಿ ಬಂಗಾರಿ ನಿರೂಪಿಸಿದರು.
ಬೆಳಿಗ್ಗೆ ಸಿದ್ದರಾಮೇಶ್ವರ ಗದ್ದುಗೆಗೆ ವಿಶೇಷ ಪೂಜೆ, ಮೂಲ ಸನ್ನಿಧಿಗೆ ಅಭಿಷೇಕ ಜರುಗಿತು. ಬೆಳಿಗ್ಗೆಯಿಂದ ಭಕ್ತರಿಗೆ ದಾಸೋಹ ಜರುಗಿತು.
‘ಸಾಹಿತ್ಯದ ಶುದ್ಧತೆ ಇರಲಿ’
‘ತಂತ್ರಜ್ಞಾನ ಬೆಳವಣಿಗೆಯಿಂದ ಸಾಹಿತ್ಯವು ಕಲಬೆರಕೆಯಾಗುತ್ತಲಿದೆ. ಶಾಶ್ವತವಾಗಿ ಉಳಿಯುವ ಗುಣಧರ್ಮವನ್ನು ಹೊಂದಿರುವ ಸಾಹಿತ್ಯವನ್ನು ಇತರೆ ತಂತ್ರಜ್ಞಾನ ಪೂರಕವಾದ ಮಾಧ್ಯಮಗಳೊಂದಿಗೆ ಕಲಬೆರಕೆಯಾಗಬಾರದು. ಸಾಹಿತ್ಯ ರಚನೆಯು ಮುದ್ರಣ ರೂಪದಲ್ಲಿಯೇ ತನ್ನ ಪಾವಿತ್ರ್ಯವನ್ನು ಉಳಿಸಿಕೊಂಡು ಹೋಗುವುದಕ್ಕೆ ಇಂದಿನ ಯುವ ಪೀಳೆಗೆಯ ಮೇಲಿದೆ’
ಡಾ. ಚಂದ್ರಶೇಖರ ಕಂಬಾರ


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ