Breaking News
Home / Recent Posts / ಸಾವಳಗಿಯ ದಸರಾ ಉತ್ಸದಲ್ಲಿ ವೈವಿದ್ಯಮಯವಾದ ಉಪನ್ಯಾಸಗಳು

ಸಾವಳಗಿಯ ದಸರಾ ಉತ್ಸದಲ್ಲಿ ವೈವಿದ್ಯಮಯವಾದ ಉಪನ್ಯಾಸಗಳು

Spread the love

ಸಾವಳಗಿಯ ದಸರಾ ಉತ್ಸದಲ್ಲಿ ವೈವಿದ್ಯಮಯವಾದ ಉಪನ್ಯಾಸಗಳು

ಗೋಕಾಕ: ತಾಲ್ಲೂಕಿನ ಸುಕ್ಷೇತ್ರ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಪೀಠದಲ್ಲಿ ಅ.15ರಂದು ಭಾನುವಾರ ಬೆಳಿಗ್ಗೆ ದಸರಾ ಉತ್ಸವವಕ್ಕೆ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಚಾಲನೆ ನೀಡಿದರು.
ಅ.16ರಿಂದ ಸಂಜೆ 7.30ಕ್ಕೆ ದಸರಾ ಉತ್ಸವದಲ್ಲಿ ಜಗದ್ಗುರುಗಳ ಸನ್ನಿಧಿಯಲ್ಲಿ ವಿವಿಧ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಿರುವರು.
ಅ.16ರಂದು ಜಿನರಾಳದ ಡಾ. ಶ್ರೀಶೈಲ್ ಮಠಪತಿ ಅವರು ‘ಜಾನಪದ ಮತ್ತು ಗ್ರಾಮೀಣ ಸಂಸ್ಕøತಿ’ ವಿಷಯ, ಅ. 17ರಂದು ಬೆಳಗಾವಿಯ ಮ.ನ.ರ.ಸ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ನಿರ್ಮಲಾ ಬಟ್ಟಲ್ ಅವರು ‘ಹಬ್ಬಗಳು ಮತ್ತು ದೇವಿ ಪರಂಪರೆ’ ಕುರಿತು ಉಪನ್ಯಾಸ ನೀಡುವರು. ಅ. 18ರಂದು ಬೆಳಗಾವಿಯ ಮ.ನ.ರ.ಸ. ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ದಣ್ಣ ವಾಲಿಶೆಟ್ಟಿ ಅವರು ‘ವಚನಗಳು ಮತ್ತು ಜೀವನ ಮೌಲ್ಯ’ ವಿಷಯ ಕುರಿತು, ಅ.19ರಂದು ಗೋಕಾಕ-ಮೂಡಲಗಿ ತಾಲ್ಲೂಕಾ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮೋಹನ ಕಮತ ಅವರು ‘ಜಾನುವಾರು ಆರೋಗ್ಯ ಮತ್ತು ಸಂರಕ್ಷಣೆ’ ಕುರಿತು, ಅ. 20ರಂದು ಗೋಕಾಕದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢ ಶಾಲಾ ವಿಭಾಗದ ಸಹಾಯಕ ಶಿಕ್ಷಕ ರಾಮಪ್ಪ ಮಿರ್ಜಿ ಅವರು ‘ಸತ್ಕಾರ್ಯದಿಂದ ಸಾರ್ಥಕ ಬದುಕು’ ವಿಷಯ ಕುರಿತು ಮಾತನಾಡುವರು. ಮುಖ್ಯ ಅತಿಥಿಯಾಗಿ ಚಿಕ್ಕೋಡಿಯ ವರ್ತಕರಾದ ಚಿದಾನಂದ ಸಮತಶೆಟ್ಟಿ ಭಾಗವಹಿಸುವರು. ಅ.21ರಂದು ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಎಂ.ಜಿ. ಕೆರುಟಗಿ ಅವರ ಅಧ್ಯಕ್ಷತೆಯಲ್ಲಿ, ಡಾ. ಕಾಂತರಾಜು ವಿ. ಅವರು ‘ತೋಟಗಾರಿಕೆ ಬೆಳೆಗಳಲ್ಲಿ ರೈತರ ಆರ್ಥಿಕ ಸಬಲತೆ’ ವಿಷಯ ಕುರಿತು ಉಪನ್ಯಾಸ ನೀಡುವರು. ಅ. 22ರಂದು ರಬಕವಿಯ ಕಾಲೇಜು ಉಪನ್ಯಾಸಕ ಹಾಗೂ ಜಾನಾಪದ ಸಾಹಿತಿ ಶ್ರೀಕಾಂತ ಕೆಂಧೂಳಿ ಅವರು ‘ಸಂಸ್ಕಾರ ಮತ್ತು ಸಂಸ್ಕøತಿ’ ಕುರಿತು ಉಪನ್ಯಾಸ ಹಾಗೂ ಗಾಯನ ಇರುವುದು. ಮುಖ್ಯ ಅತಿಥಿಯಾಗಿ ಸಾವಳಗಿಯ ಉದ್ಯಮಿ ಕೆಂಚಪ್ಪ ಭರಮನ್ನವರ ಭಾಗವಹಿಸುವರು. ಅ. 23ರಂದು ‘ಉತ್ತಮ ಆರೋಗ್ಯಕ್ಕಾಗಿ ಮುಂಜಾಗೃತ ಕ್ರಮಗಳು’ ವಿಷಯ ಕುರಿತು ಹೃದಯರೋಗ ತಜ್ಞ ಗೋಕಾಕದ ಡಾ. ಶಿವಾನಂದ ಬೂದಿಹಾಳ, ಗೋಕಾಕದ ಎಲವು ಕೀಲುಗಳ ಶಸ್ತ್ರಚಿಕಿತ್ಸ ತಜ್ಞ ಡಾ. ಮಲ್ಲಿಕಾರ್ಜುನ ಬೀರನಗಡ್ಡಿ, ಗೋಕಾಕದ ಡಯಾಬಿಟೀಸ್, ಥೈರಾಯ್ಡ್, ಎಂಡೋಕೈನ್ ತಜ್ಞರಾದ ಡಾ. ಮಂಜುನಾಥ ಗೋರೋಶಿ, ಗೋಕಾಕದ ಹೃದಯರೋಗ ತಜ್ಞ ಡಾ. ತೇಜಸ್ ಹೊಸಮನಿ, ಸಾವಳಗಿಯ ವೈದ್ಯ ಡಾ. ಸಂತೋಷ ಚಿಕ್ಕೋರ್ಡೆ ಭಾಗವಹಿಸುವರು ಎಂದು ಸಂಚಾಲಕ ಬಾಲಶೇಖರ ಬಂದಿ ತಿಳಿಸಿದ್ದಾರೆ.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ