ಸಾವಳಗಿಯ ದಸರಾ ಉತ್ಸವ-2023
ಅಜ್ಞಾನವನ್ನು ಬಿಟ್ಟು ಸುಜ್ಞಾನದತ್ತ ಸಾಗುವುದೇ ದಸರಾ
ಗೋಕಾಕ: ‘ಸತ್ಯ, ಪ್ರಾಮಾಣಿಕತೆ, ನಂಬಿಕೆ, ವಿಶ್ವಾಸ ಮತ್ತು ಸದ್ಗುಣಗಳನ್ನು ಬೆಳೆಸಿಕೊಂಡು ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು’ ಎಂದು ಜಗದ್ಗುರು ಶ್ರೀಶಿವಲಿಂಗೇಶ್ವರ ಕುಮಾರೇಂದ್ರÀ್ಸ ಮಹಾಸನ್ನಿಧಿಯವರು ನುಡಿದರು.
ಹಿಂದು ಮುಸ್ಲಿಂ ಸೌಹಾರ್ದತೆಯ ಸುಕ್ಷೇತ್ರ ಸಾವಳಗಿಯ ಸಿದ್ಧ ಸಂಸ್ಥಾನ ಪೀಠದಲಿ ದಸರಾ-2023 ಸಮಾರಂಭದಲ್ಲಿ ಮಾತನಾಡಿದ ಅವರು ಅವರು ಮನುಷ್ಯ ಅಜ್ಞಾನವನ್ನು ಬಿಟ್ಟು ಸುಜ್ಞಾನದತ್ತ ಸಾಗಬೇಕು ಎಂದರು.
ಮನುಷ್ಯ ತಾನು ನೋಡುವ ದೃಷಿಯಂತೆ ಜಗತ್ತು ಕಾಣುತ್ತದೆ. ನುಡಿದಂತೆ ನಡೆಯಬೇಕು. ಪರಮಾತ್ಮನನ್ನು ನಿಜಭಕ್ತಿಯಿಂದ ಧ್ಯಾನಿಸುವ ಮೂಲಕ ಜೀವನದಲ್ಲಿ ಶಾಂತಿ, ನೆಮ್ಮದಿಯನ್ನ ಪ್ರಾಪ್ತಿಗೊಳಿಸಿಕೊಳ್ಳಬೇಕು ಎಂದರು.
ಜಿನದಾಳದ ಡಾ. ಶ್ರೀಶೈಲ್ ಮಠಪತಿ ಅವರು ‘ಜಾನಪದ ಮತ್ತು ಗ್ರಾಮೀಣ ಸಂಸ್ಕøತಿ’ ಕುರಿತು, ಬೆಳಗಾವಿಯ ಮನರಸ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ನಿರ್ಮಲಾ ಬಟ್ಟಲ್ ‘ಹಬ್ಬಗಳು ಮತ್ತು ದೇವಿ ಪರಂಪರೆ’ ಕುರಿತು ಮತ್ತು ಡಾ. ಸಿದ್ದಣ್ಣ ವಾಲಿಶಟ್ಟಿ ‘ವಚನಗಳು ಮತ್ತು ಜೀನವ ಮೌಲ್ಯ’ ಕುರಿತು ಉಪನ್ಯಾಸ ನೀಡಿದರು.
ರಾಚಯ್ಯ ಹಿರೇಮಠ ಮದರಿ ದೇವಿ ಪುರಾಣವನ್ನು ಸಂಗೀತದೊಂದಿಗೆ ನಡೆಸಿಕೊಟ್ಟರು.ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.
ಬೆಳಗಾವಿಯ ರೋಹಿಣಿ ಬಂಗಾರಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು.