Breaking News
Home / Recent Posts / ಫೆ. 18ರಂದು ಸಾವಳಗಿಯಲ್ಲಿ ಮಹಾಶಿವರಾತ್ರಿ ಆಚರಣೆ

ಫೆ. 18ರಂದು ಸಾವಳಗಿಯಲ್ಲಿ ಮಹಾಶಿವರಾತ್ರಿ ಆಚರಣೆ

Spread the love

ಸಾವಳಗಿ: ಫೆ. 18ರಂದು ಮಹಾಶಿವರಾತ್ರಿ ಆಚರಣೆ

ಗೋಕಾಕ: ತಾಲ್ಲೂಕಿನ ಸಾವಳಗಿ ಸಿದ್ದ ಸಂಸ್ಥಾನ ಪೀಠದಲ್ಲಿ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿಧಿಯವರ ಸಾನ್ನಿಧ್ಯದಲ್ಲಿ ಫೆ. 18ರಿಂದ ಫೆ.20ರ ವರೆಗೆ ಮಹಾಶಿವರಾತ್ರಿ ಕಾರ್ಯಕ್ರಮಗಳು ಜರುಗಲಿವೆ.
ಫೆ. 18ರಂದು ರಾತ್ರಿ 8 ಗಂಟೆಗೆ ಜಗದ್ಗುರುಗಳ ಸನ್ನಿಧಿಯಲ್ಲಿ ಶಿವರಾತ್ರಿಯ ಮಹಿಮೆ ಕುರಿತು ಪ್ರವಚನ ಹಾಗು ಸಂಗೀತ ಸುಧೆ ಅಹೋರಾತ್ರಿ ಜರುಗುವುದು.
ಹಾವೇರಿ ಜಿಲ್ಲೆಯ ಹಾಲಗಿಮರೋಳಾದ ವೇದಮೂರ್ತಿ ಸದಾಶಿವ ಶಾಸ್ತ್ರೀಗಳು ಪ್ರವಚನ ನೀಡುವರು.
ರಾಜ್ಯೋತ್ಸವ ಪುರಸ್ಕøತ ಗಾನಭೂಷಣ ಗದಗದ ವೀರೇಶ ಕಿತ್ತೂರ ಅವರಿಂದ ಸಂಗೀತ ಕಾರ್ಯಕ್ರಮ ಇರುವುದು. ಬೆಂಗಳೂರಿನ ನಾಗಲಿಂಗಯ್ಯಸ್ವಾಮಿ ವಸ್ತ್ರದಮಠ ಅವರ ಹಾರ್ಮೋನಿಯಂ ವಾದನ ಹಾಗೂ ಗೋಕಾಕದ ವಿಜಯ ದೊಡ್ಡಣ್ಣವರ ಅವರ ತಬಲಾ ವಾದನ ಇರುವುದು.
ಶಿವರಾತ್ರಿ ದಿನ ಫೆ. 18ರಂದು ಮಧ್ಯಾಹ್ನ 3ರಿಂದ ಸಂಜೆ 7ರ ವರೆಗೆ ಶ್ರೀಪೀಠದಿಂದ ಸದ್ಭಕ್ತರಿಗೆ ಶಿವರಾತ್ರಿಯ ಹಣ್ಣು ಹಂಪಲ, ಸಾತ್ವಿಕ ಫಲಹಾರ ಇರುವುದು.
ರುದ್ರಾಭಿಷೇಕ: ಫೆ. 18ರಂದು ಸಂಜೆ 5ರಿಂದ ರಾತ್ರಿ 8ರವರೆಗೆ ಮತ್ತು ರಾತ್ರಿ 11ರಿಂದ ಮಧ್ಯರಾತ್ರಿ 1ರ ವರೆಗೆ ಹಾಗೂ ಫೆ. 20 ಅಮವಾಸೆ ದಿನ ನಸುಕಿನ 4ರಿಂದ ಬೆಳಿಗ್ಗೆ 8ರ ವರೆಗೆ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಹಾಗೂ ರುದ್ರಾಭಿಷೇಕವು ಪರಿಣಿತ ವೈದಿಕರಿಂದ ಜರುಗುವುದು ಎಂದು ಪೀಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ