ಅಜ್ಞಾನವನ್ನು ಬಿಟ್ಟು ಸುಜ್ಞಾನದತ್ತ ಸಾಗಬೇಕು
ಗೋಕಾಕ: ‘ಸತ್ಯ, ಪ್ರಾಮಾಣಿಕತೆ, ನಂಬಿಕೆ, ವಿಶ್ವಾಸ ಮತ್ತು ಸದ್ಗುಣಗಳನ್ನು ಬೆಳೆಸಿಕೊಂಡು ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು’ ಎಂದು ಜಗದ್ಗುರು ಶ್ರೀಶಿವಲಿಂಗೇಶ್ವರ ಕುಮಾರೇಂದ್ರÀ್ಸ ಮಹಾಸನ್ನಿಧಿಯವರು ನುಡಿದರು.
ಹಿಂದು ಮುಸ್ಲಿಂ ಸೌಹಾರ್ದತೆಯ ಸುಕ್ಷೇತ್ರ ಸಾವಳಗಿಯ ಸಿದ್ಧ ಸಂಸ್ಥಾನ ಪೀಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶ್ರೀ ಶಿವಲಿಂಗೇಶ್ವರ ಪುರಾಣ ಕಾರ್ಯಕ್ರಮ ಮತ್ತು ಸಾಹಿತ್ಯ, ಸಂಸ್ಕøತಿ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯ ತನ್ನ ಕರ್ಮ ಮತ್ತು ಅಜ್ಞಾನವನ್ನು ಬಿಟ್ಟು ಸುಜ್ಞಾನದತ್ತ ಸಾಗಬೇಕು ಎಂದರು.
ನುಡಿದಂತೆ ನಡೆಯಬೇಕು. ಪರಮಾತ್ಮನನ್ನು ನಿಜಭಕ್ತಿಯಿಂದ ಧ್ಯಾನಿಸುವ ಮೂಲಕ ಜೀವನದಲ್ಲಿ ಶಾಂತಿ, ನೆಮ್ಮದಿಯನ್ನ ಪ್ರಾಪ್ತಿಗೊಳಿಸಿಕೊಳ್ಳಬೇಕು ಎಂದರು.
ಗದಗದ ವೇದಮೂರ್ತಿ ಚನ್ನವೀರಯ್ಯಸ್ವಾಮಿ ಅವರು ಶ್ರೀ ಶಿವಲಿಂಗೇಶ್ವರ ಪುರಾಣವನ್ನು ಹೇಳಿದರು.
ವೀರೇಶ ಕಿತ್ತೂರ ಭಕ್ತಿಯ ಗಾಯನ ಮಾಡಿದರು. ಮಲ್ಲಿಕಾರ್ಜುನ ಹರತಿ ಶಹನಾಯಿ, ರಾಘವೇಂದ್ರ ಕೃಷ್ಣಾ ಕೊಳಲು ನುಡಿಸಿದರು. ಗದಗದ ಶಾಮರಾವ ಪುಲಾರೆ ಮತ್ತು ಗೋಕಾಕದ ವಿಜಯ ದೊಡ್ಡಣ್ಣವರ ತಬಲಾ ಸಾಥ ನೀಡಿದರು.
ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.