ಜಾನಪದದಲ್ಲಿ ಬದುಕಿನ ನಿಜವಾದ ಮೌಲ್ಯಗಳಿವೆ
ಗೋಕಾಕ: ‘ಗ್ರಾಮೀಣ ಮೂಲ ಸಂಸ್ಕøತಿಯನ್ನು ಬಂಬಿಸುವ ಜಾನಪದಲ್ಲಿ ಬದುಕಿನ ನಿಜವಾದ ಮೌಲ್ಯಗಳು ಅಡಕವಾಗಿವೆ’ ಎಂದು ಶಿಂಧೋಳಿಯ ಸಾಹಿತಿ ಎ.ಎ. ಸನದಿ ಹೇಳಿದರು.
ತಾಲ್ಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಜಾತ್ರಾ ಮಹೋತ್ಸವದ ಸಾಹಿತ್ಯ, ಸಾಂಸ್ಕøತಿಕ ಸೌರಭ ಕಾರ್ಯಕ್ರಮದಲ್ಲಿ ‘ಜಾನಪದ ತ್ರಿಪದಿಯಲ್ಲಿ ಜೀವನ ದರ್ಶನ’ ಕುರಿತು ಉಪನ್ಯಾಸ ನೀಡಿದ ಅವರು ತ್ರಿಪದಿಗಳು ಜನಪದರು ಕನ್ನಡ ಸಾಹಿತ್ಯಕ್ಕೆ ನೀಡಿದ ಬಹುದೊಡ್ಡ ಕಾಣಿಕೆಯಾಗಿದೆ ಎಂದರು.
ಜನಪದರು ತಾವು ಅನುಭವಿಸಿದ ನೋವು, ನಲಿವು, ದು:ಖ, ದುಮ್ಮಾನ, ಅನುಭವ ಇವುಗಳನ್ನು ಹೃದಯದಿಂದ ಹಾಡಿದರು. ಅವು ಒಬ್ಬರಿಂದ ಒಬ್ಬರಿಗೆ ಸಾಗಿ ವ್ಯಾಪಕತೆಯನ್ನು ಪಡೆದುಕೊಂಡಿತು. ಗ್ರಾಮೀಣ ಜನರ ಬದುಕು, ಜೀವನ, ಸಂಸ್ಕøತಿ ಇವೆಲ್ಲವನ್ನು ಒಳಗೊಂಡಿರುವುದೇ ಜಾನಪದ ಸಾಹಿತ್ಯದ ವೈಶಿಷ್ಟ್ಯವಾಗಿದೆ ಎಂದರು.
ಜಾನಪದ ಸಾಹಿತ್ಯದಲ್ಲಿ ಮಹಿಳೆಗೆ ಪ್ರಮುಖ ಸ್ಥಾನವಿದೆ. ಗರತಿ, ಪತಿವ್ರತೆ, ತ್ಯಾಗಿ, ತಾಯಿ ಹೀಗೆ ಕುಟುಂಬ ವಿವಿಧ ಹಂತಗಳಲ್ಲಿ ಚಿತ್ರಿತಗೊಂಡಿರುವುದನ್ನ ಜಾನಪದವು ಹೇಳುತ್ತದೆ ಎಂದರು.
ಹಲವಾರು ಜನಪದ ತ್ರಿಪದಿಗಳ ಮೂಲಕ ಜಾನಪದ ಸಾಹಿತ್ಯದ ರಸದೌತಣವನ್ನು ಸೇರಿದ ಸಹಸ್ರಾರು ಜನರಿಗೆ ನೀಡಿದರು.
ಸಾನ್ನಿಧ್ಯವಹಿಸಿದ್ದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿ ಅವರು ಮಾತನಾಡಿ ದಾನ, ಧರ್ಮಗಳ ಮೂಲಕ ಜೀವನದ ಸಾರ್ಥಕತೆಯನ್ನು ಪ್ರಾಪ್ತಮಾಡಿಕೊಳ್ಳಬೇಕು. ನುಡಿದಂತೆ ನಡೆಯುವ ಮೂಲಕ ಸಸ್ಕಾರ್ಯಗಳಲ್ಲಿ ತೊಡಗಿಕೊಂಡು ಜೀವನದಲ್ಲಿ ಶಾಂತಿ, ನೆಮ್ಮದಿಯನ್ನು ಕಾಣಬೇಕು ಎಂದರು.
ಕಡನಿ ಶಾಂತವೀರಸ್ವಾಮಿ ಅವರು ಜಗದ್ಗುರು ಸಿದ್ದಲಿಂಗೇಶ್ವರ ಪುರಾರಣವನ್ನು ಹೇಳಿದರು.
ಗಾನಭೂಷಣ ವೀರೇಶ ಕಿತ್ತೂರ, ಮಲ್ಲಿಕಾರ್ಜುನ ಹರತಿ, ರಾಘವೇಂದ್ರ ಕೃಷ್ಣಾ, ಶಾಮರಾವ ಪುಲಾರೆ, ವಿಜಯ ದೊಡ್ಡಣ್ಣವರ ಅವರಿಂದ ಜರುಗಿದ ಸಂಗೀತ ಗೋಷ್ಠಿ ಜರುಗಿತು.
ಗೋಕಾಕದ ಧನ್ಯಾ ಪಾಟೀಲ ಭರತ ನಾಟ್ಯವು ಎಲ್ಲರ ಗಮನಸೆಳೆಯಿತು.
ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.