ಸಂಸ್ಕøತಿಯ ಮೂಲ ಬೇರು ಗ್ರಾಮೀಣ ಬದುಕಿನಲ್ಲಿದೆ
ಗೋಕಾಕ: ‘ಭಾರತ ಸಂಸ್ಕøತಿಯ ಮೂಲಕ ಬೇರು ಗ್ರಾಮೀಣ ಬದುಕಿನಲ್ಲಿದ್ದು, ಗ್ರಾಮೀಣ ಆಚರಣೆ ಮತ್ತು ಸಂಸ್ಕøತಿಯನ್ನು ಉಳಿಸಿಕೊಳ್ಳುವುದು ಇಂದಿನ ಅವಶ್ಯಕತೆ ಇದೆ’ ಎಂದು ಸಾಹಿತಿ ಡಾ. ಬಸವರಾಜ ಜಗಜಂಪಿ ಅವರು ಹೇಳಿದರು.
ತಾಲ್ಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಜಾತ್ರಾ ಮಹೋತ್ಸವದ ಸಾಹಿತ್ಯ, ಸಾಂಸ್ಕøತಿಕ ಸೌರಭ ಕಾರ್ಯಕ್ರಮದಲ್ಲಿ ‘ಗ್ರಾಮಿಣ ಸಂಸ್ಕøತಿ’ ಕುರಿತು ಉಪನ್ಯಾಸ ನೀಡಿದ ಅವರು ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಸಂಸ್ಕøತಿಗೆ ಧಕ್ಕೆಯಾಗುತ್ತಲಿದೆ ಎಂದರು.
ಎಲ್ಲಿಯವರೆಗೆ ಹಳ್ಳಿಯ ಸಂಸ್ಕøತಿ ಉಳಿಯುತ್ತದೆ ಅಲ್ಲಿಯವರೆಗೆ ಸಮಾಜದ ಸ್ವಾಸ್ಥ್ಯ ಗಟ್ಟಿಯಾಗಿರುತ್ತದೆ. ಆಧುನಿಕತೆಯ ಒತ್ತಡಕ್ಕೆ ಮೂಲ ಸಂಸ್ಕøತಿಯನ್ನು ಹಾಳು ಮಾಡುವುದಕ್ಕೆ ಅವಕಾಶ ನೀಡಬಾರದು. ಟಿವಿ, ಮೊಬೈಲ್‍ಗಳಿಂದ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದು, ಇಂಥದ್ದು ಘಟಿಸದಂತೆ ಗಂಭೀರ ಚಿಂತನೆ ಮಾಡಬೇಕು ಎಂದರು.
ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿ ಅವರು ಸಾನ್ನಿಧ್ಯವಹಿಸಿದ್ದರು.
ಕಡಣಿ ಶಾಂತವೀರಸ್ವಾಮಿ ಅವರು ಜಗದ್ಗುರು ಸಿದ್ದಲಿಂಗೇಶ್ವರ ಪುರಾಣವನ್ನು ಹೇಳಿದರು.
ಗಾನಭೂಷಣ ವೀರೇಶ ಕಿತ್ತೂರ, ಮಲ್ಲಿಕಾರ್ಜುನ ಹರತಿ, ರಾಘವೇಂದ್ರ ಕೃಷ್ಣಾ, ಶಾಮರಾವ ಪುಲಾರೆ, ವಿಜಯ ದೊಡ್ಡಣ್ಣವರ ಅವರಿಂದ ಜರುಗಿದ ಸಂಗೀತ ಗೋಷ್ಠಿ ಜರುಗಿತು.
ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.