Breaking News
Home / Recent Posts / ಸಂಭ್ರಮದಲ್ಲಿ ಜರುಗಿದ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಪಲ್ಲಕ್ಕಿ ಉತ್ಸವ

ಸಂಭ್ರಮದಲ್ಲಿ ಜರುಗಿದ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಪಲ್ಲಕ್ಕಿ ಉತ್ಸವ

Spread the love

 

ಸಂಭ್ರಮದಲ್ಲಿ ಜರುಗಿದ ಸಾವಳಗಿಯ ಜಗದ್ಗುರು
ಶಿವಲಿಗೇಶ್ವರ ಪಲ್ಲಕ್ಕಿ ಉತ್ಸವ

ಗೋಕಾಕ: ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವ ತಾಲ್ಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರರ ಜಾತ್ರೆಯ ಪಲ್ಲಕ್ಕಿ ಮಹೋತ್ಸವವು ಸಹಸ್ರಾರು ಭಕ್ತರ ಸಂಗಮದಲ್ಲಿ ಸಂಭ್ರಮ, ಸಡಗರದಿಂದ ಜರುಗಿತು.

ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಹಸಿರು ರಾಜಪೋಷಾಕಿನೊಡನೆ ಸಕಲ ರಾಜಮರ್ಯಾದೆ, ಬಿರುದಾವಳಿಗಳಿಂದ ಅಲಂಕೃತರಾಗಿ, ಮಂಗಳವಾದ್ಯ, ಭಜನೆ, ಡೊಳ್ಳು, ಮುತ್ಯೈದಿಯರ ಆರತಿ, ಕಳಶ, ಕನ್ನಡಿಗಳೊಂದಿಗೆ ಸಾವಳಗಿ, ಮುತ್ನಾಳ, ನಂದಗಾಂವ, ಖಾನಾಪುರ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವು ಭಕ್ತಿಭಾವದಲ್ಲಿ ಜರುಗಿತು. ಪಲ್ಲಕ್ಕಿ ಬರುವ ದಾರಿಯುದ್ದಕ್ಕೂ ಭಕ್ತರು ನೀರು ಹಾಕಿ, ಪುಷ್ಪಗಳ ಮಳೆಗೈದರು.

ವೇದಿಕೆಯಲ್ಲಿ ಸಂಜೆ ಜರುಗಿದ ದರ್ಬಾರ ಸಮಾರಂಭದಲ್ಲಿ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಮಾತನಾಡಿ ‘ನಂಬಿಕೆ, ನಿಜ ಭಕ್ತಿಯಲ್ಲಿ ದೇವರಿದ್ದು, ಅಂತರಂಗದಿಂದ ದೇವರನ್ನು ಸ್ಮರಿಸುವ ಮೂಲಕ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು’ ಎಂದರು.
.ಎಲ್ಲ ಧರ್ಮಶಾಸ್ತ್ರಗಳು ಮನುಕುಲದ ಹಿತವನ್ನು, ಏಳ್ಗೆಯನ್ನು ಬಯಸುತ್ತಿದ್ದು, ಪ್ರತಿ ವ್ಯಕ್ತಿಯು ನಡೆ, ನುಡಿಗಳಲ್ಲಿ ಸದ್ಭಾವ ರೂಢಿಸಿಕೊಂಡು ಬದುಕನ್ನು ಸುಂದರವಾಗಿಸಿಕೊಳ್ಳಬೇಕು ಎಂದರು.
ಚನ್ನವೀರಸ್ವಾಮಿ ಹಿರೇಮಠ ಕಡಣಿ ಅವರು ಜಗದ್ಗರು ಶಿವಲಿಂಗೇಶ್ವರ ಪುರಾಣವನ್ನು ಮಂಗಲ ಮಾಡಿದರು.
ಗಾನಭೂಷಣ ವೀರೇಶ ಕಿತ್ತೂರ ಅವರ ಗಾಯನ, ಶ್ವೇತಾ ಬಡಿಗೇರ, ಧನ್ಯಾ ಪಾಟೀಲ ಅವರ ಭರತನಾಟ್ಯ ಮತ್ತು ಚಿತ್ರದುರ್ಗದ ಸುಶೀಲಮ್ಮ ಅವರ ಏಕಪಾತ್ರಾಭಿನಯವು ಎಲ್ಲರ ಗಮನಸಳೆಯಿತು.
ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು, ರೋಹಿಣಿ ಹಾಗೂ ಶಿಕ್ಷಕ ಎಂ.ಎಸ್. ತೋಡಕರ ನಿರೂಪಿಸಿದರು.


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ