Breaking News
Home / Recent Posts / ಸೆ.6ರಿಂದ ಶಿವಾಪೂರದಲ್ಲಿ ಶ್ರೀಅಡಿವಿಸಿದ್ಧೆಶ್ವರ ಜಾತ್ರಾ ಮಹೋತ್ಸವ

ಸೆ.6ರಿಂದ ಶಿವಾಪೂರದಲ್ಲಿ ಶ್ರೀಅಡಿವಿಸಿದ್ಧೆಶ್ವರ ಜಾತ್ರಾ ಮಹೋತ್ಸವ

Spread the love

ಸೆ.6ರಿಂದ ಶಿವಾಪೂರದಲ್ಲಿ ಶ್ರೀಅಡಿವಿಸಿದ್ಧೆಶ್ವರ ಜಾತ್ರಾ ಮಹೋತ್ಸವ

ಮೂಡಲಗಿ: ತಾಲೂಕಿನ ಶಿವಾಪೂರ(ಹ) ಗ್ರಾಮದಲ್ಲಿ ಅಂಬಲಿ ಒಡೆಯ ಶ್ರೀ ಅಡವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಹಾಗೂ ಶ್ರೀಅಡಿವಿಸಿದ್ಧೇಶ್ವರ ನೂತನ ಮೂರ್ತಿ ಹಾಗೂ ಪಲ್ಲಕ್ಕಿ ಉತ್ಸವ ಸಮಾರಂಭ ಶುಕ್ರವಾರ ಸೆ.6 ರಿಂದ ಸೋಮವಾರ ಸೆ.9 ರವರಿಗೆ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಕಾರ್ಯಕ್ರಮದ ನೇತೃತ್ವ ವಹಿಸಿರುವ ಹಾಗೂ ಶ್ರೀಮಠದ ಪೀಠಾಧಿಪತಿ ಪೂಜ್ಯ ಶ್ರೀ ಅಡವಿಸಿದ್ಧರಾಮ ಮಹಾಸ್ವಾಮಿಜಿÀ ಶ್ರೀಮಠದ ಆವರಣದಲ್ಲಿ ಜಾತ್ರಾಮಹೋತ್ಸವ ಆಂತ್ರಣ ಪತ್ರಿಕೆಯನ್ನು ಬಿಡುಗಡೆಗೋಳಿಸಿ ಹೇಳಿದರು.
ಶುಕ್ರವಾರ ಸೆ.6ರಂದು ಮುಂಜಾನೆ 8ಗಂಟೆಗೆ ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮ ದಿವ್ಯ ಸಾನ್ನಿಧ್ಯವನ್ನು ನಿಡಗುಂದಿಕೊಪ್ಪದ ಶ್ರೀ ಅಭಿನವ ಚನ್ನಬಸವ ಶ್ರೀಗಳು ವಹಿಸುವರು, ಮುಖ್ಯ ಅತಿಥಿಗಳಾಗಿ ಗೋಕಾಕದ ಅಶೋಕ ಪೂಜೇರಿ, ಮೂಡಲಗಿ ಭೀಮಪ್ಪ ಗಡಾದ, ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಭಾಗವಹಿಸುವರು. 10 ಗಂಟೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗುವುದು. ಸಂಜೆ 4 ಗಂಟೆಗೆ ಗ್ರಾಮದ ಶರಣೆ ತಾಯಂದಿರಿಂದ “ಬಸವ ಬುತ್ತಿ” ಕಾರ್ಯಕ್ರಮ ಹಾಗೂ 6-30ಕ್ಕೆ ಜರುಗುವ ಬಸವ ದರ್ಶನ ಪ್ರವಚನ ಮಹಾಮಂಗಲ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕೂಡಲಸಂಗಮದ ಶ್ರೀ ಬಸವ ಜಯ ಮೃತ್ಯಂಜಯ ಶ್ರೀಗಳು ವಹಿಸುವರು, ಮೂಡಲಗಿಯ ಶ್ರೀ ದತ್ತಾತ್ರೇಯಬೋಧ ಶ್ರೀಗಳು ದಿವ್ಯ ಸಮ್ಮಖವಹಿಸುವರು.ಮುಖ್ಯ ಅತಿಥಿಗಳಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಅರವಿಂದ ದಳವಾಯಿ, ಬಾಲಚಂದ್ರ ಭಕ್ಷಿ ಮತ್ತಿತರರು ಭಾಗವಹಿಸುವರು, ಪ್ರವಚನಕಾರ ಶ್ರೀ ಪಂಚಾಕ್ಷರಿ ಶಾಸ್ತ್ರೀಗಳು ಮಂಗಲ ನುಡಿಗಳ್ನಾಡುವರು.
ಶನಿವಾರ ಸೆ.7ರಂದು ಮುಂಜಾನೆ 7 ಗಂಟೆಗೆ ಶ್ರೀ ಮಠದ ಪೂಜ್ಯರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ರುದ್ರಾಕ್ಷಿಧಾರಣೆ ಕಾರ್ಯಕ್ರಮ ಜರುಗುವುದು. 10 ಗಂಟೆಗೆ ರಕ್ತದಾನ ಶಿಬಿರ ಜರುಗುವುದು. ಸಂಜೆ 5 ಗಂಟೆಗೆ ಜರುಗುವ ಮುತ್ತೈದೆಯರಿಗೆ ಉಡಿ ತುಂಬುವ ಹಾಗೂ ಧರ್ಮಸಭೆಯ ದಿವ್ಯ ಸಾನ್ನಿಧ್ಯವನ್ನು ಹೊಸೂರದ ಶ್ರೀ ಗಂಗಾಧರ ಶ್ರೀಗಳು ಮತ್ತು ಸಾನ್ನಿಧ್ಯವನ್ನು ಬೈಲಹೊಂಗಲದ ಶ್ರೀ ನೀಲಕಂಠ ಶ್ರೀಗಳು ವಹಿಸುವರು, ದೇವರಶಿಗಿಹಳ್ಳಿಯ ಶ್ರೀ ವಿರೇಶ್ವರ ಶ್ರೀಗಳು, ಕಂಕಣವಾಡಿಯ ಶ್ರೀ ಮಾರುತಿ ಶರಣರು ಸಮ್ಮುಖ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಜಗದೀಶ ಶೆಟ್ಟರ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ದುರ್ಯೋಧನ ಐಹೊಳೆ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಭಾಗವಹಿಸುವರು.
ರವಿವಾರ ಸೆ.8ರಂದು ಮುಂಜಾನೆ 7ಗಂಟೆಗೆ ಶ್ರೀ ಕರ್ತೃ ಗದ್ದುಗೆಗೆ ತರಕಾರಿ ಅಲಂಕಾರ ಮತ್ತು ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮ ಮುನ್ಯಾಳ-ರಂಗಾಪೂರದ ಡಾ.ಮುರುಘರಾಜೇಂದ್ರ ಶಿವಾಚಾರ್ಯ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಜರುಗುವುದು. ಮುಂಜಾನೆ 10ಗಂಟೆಗೆ ರಂಗೋಲಿ ಸ್ಪರ್ಧೆಜರುಗುವುದು. ಸಾಯಂಕಾಲ 5ಗಂಟೆಗೆ ಶ್ರೀಮಠದಲ್ಲಿ ಮಕ್ಕಳಿಂದ ತಂದೆ-ತಾಯಿಗಳ ಪಾದ ಪೂಜೆ ಕಾರ್ಯಕ್ರಮ 6ಗಂಟೆಗೆ ಜರುಗುವ ಧರ್ಮ ಸಭೆಯ ದಿವ್ಯ ಸಾನ್ನಿಧ್ಯವನ್ನು ಭೆಂಡವಾಡದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಮತ್ತು ಸಾನ್ನಿಧ್ಯವನ್ನು ಘೋಡಗೇರಿಯ ಶ್ರೀ ಕಾಶಿನಾಥ ಶ್ರೀಗಳು, ಸುಣಧೋಳಿಯ ಶ್ರೀ ಶಿವಾನಂದ ಶ್ರೀಗಳು, ಬೆಳಗಾವಿಯ ಶ್ರೀ ನಿಶ್ಚಲ ಸ್ವರೂಪ ಶ್ರೀಗಳು, ಬಬಲಾದಿಯ ಶ್ರೀ ಸಿದ್ದರಾಮಯ್ಯ ಶ್ರೀಗಳು, ಘಟಪ್ರಭಾದ ಶ್ರೀಭಿಮಾನಂದ ಶ್ರೀಗಳು ವಹಿಸುವರು. 7 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮ, ರಾತ್ರಿ 10 ಗಂಟೆಯಿಂದ ವಿವಿಧ ಭಜನಾ ಮಂಡಳಿಯಿಂದ ಶಿವ ಜಾಗರಣೆ ಜರುಗುವುದು.
ಸೋಮವಾರ ಸೆ.9ರಂದು ಮುಂಜಾನೆ 6 ಗಂಟೆಗೆ ಶ್ರೀ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಮತ್ತು ಪುಷ್ಪಲಂಕಾರ ನಂತರ ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ದೀಕ್ಷಾ ಕಾರ್ಯಕ್ರಮ ಗುಡ್ಡಾಪೂರದ ಶ್ರೀ ಗುರುಪಾದ ಶಿವಾಚಾರ್ಯ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಮತ್ತು ಮೂಡಲಗಿಯ ವೇದಮೂರ್ತಿ ಶಂಕರಯ್ಯಾ ಹಿರೇಮಠ ಸಮ್ಮುಖದಲ್ಲಿ ಜರುಗುವುದು. ಮುಂಜಾಣೆ 8 ಗಂಟೆಗೆ ಶ್ರೀ ಅಡಿವಿಸಿದ್ಧೇಶ್ವರ ನೂತನ ಪಲ್ಲಕ್ಕಿ ಮಹೋತ್ಸವ ನಂತರ ಧರ್ಮಸಭೆಯ ದಿವ್ಯ ಸಾನ್ನಿಧ್ಯವನ್ನು ಗೋಕಾಕದ ಶ್ರೀ ಮುರುಘೇಂದ್ರ ಶ್ರೀಗಳ ವಹಿಸುವರು. ಮಮದಾಪೂರದ ಶ್ರೀ ಮೌನ ಮಲ್ಲಿಕಾರ್ಜುನ ಶ್ರೀಗಳು, ಬಟಕುರ್ಕಿಯ ಬಸವಲಿಂಗ ಶ್ರೀಗಳು, ಕಬ್ಬೂರದ ಶ್ರೀ ರೇವಣಸಿದ್ಧ ಶಿವಾಚಾರ್ಯ ಶ್ರೀಗಳು, ಹುಲಿಕಟ್ಟಿಯ ಶ್ರೀ ಕುಮಾರ ಶ್ರೀಗಳು, ಕಮತೆನಹಟ್ಟಿಯ ಶ್ರೀ ಶಿವಪ್ರಭು ಶ್ರೀಗಳು, ಲಿಂಗನಾಯಕನಹಳ್ಳಿಯ ಶ್ರೀ ನಿರಂಜನ ಶ್ರೀಗಳು, ಗದಗದ ಚಂದ್ರಶೇಖರ ದೇವರು ಸಮ್ಮುಖ ವಹಿಸುವರು. ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಅತಿಥಿಗಳಾಗಿ ಮತ್ತಿತರರು ಭಾಗವಹಿಸುವರು ಎಂದು ಅಡವಿಸಿದ್ಧರಾಮ ಮಹಾಸ್ವಾಮಿಜಿ ಹೇಳಿದರು.


Spread the love

About inmudalgi

Check Also

ಸಾಹಿತಿ ಚಿದಾನಂದ ಹೂಗಾರ ರವರ ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ

Spread the loveಮೂಡಲಗಿಯ ಚೈತನ್ಯ ಸೊಸೈಟಿಯಲ್ಲಿ ಮೂಡಲಗಿ ತಾಲ್ಲೂಕು ಚುಸಾಪ ಮತ್ತು ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ ಚಿದಾನಂದ ಹೂಗಾರ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ