ಮೂಡಲಗಿ ತಾಲ್ಲೂಕಿನ ಶಿವಾಪುರ(ಹ) ಗ್ರಾಮದ ಬಸವ ಆಶ್ರಮದಲ್ಲಿ ತಾಲ್ಲೂಕಾ ಚುಸಾಪದಿಂದ ಜರುಗಿದ ದಸರಾ ಕವಿಗೋಷ್ಠಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಉದ್ಘಾಟಿಸಿದರು.
ಮೂಡಲಗಿ: ‘ಭಾವನೆಗಳಿಂದ ಹುಟ್ಟಿದ ಕವಿತೆಯನ್ನು ಪದಪುಂಜಗಳ ಮೂಲಕ ಅರ್ಥವತ್ತಾಗಿ ಸೃಜನಾತ್ಮಕವಾಗಿ ಕಟ್ಟಿಕೊಡುವ ಕಲೆಯನ್ನು ಕವಿಯು ಸಿದ್ಧಿಸಿಕೊಳ್ಳಬೇಕು’ ಎಂದು ಸಾಹಿತಿ ಸಿದ್ರಾಮ್ ದ್ಯಾಗಾನಟ್ಟಿ ಹೇಳಿದರು.
ತಾಲ್ಲೂಕಿನ ಶಿವಾಪುರ (ಹ) ಗ್ರಾಮದ ಬಸವ ಆಶ್ರಮದಲ್ಲಿ ಮೂಡಲಗಿ ತಾಲ್ಲೂಕಾ ಚುಟುಕು ಸಾಹಿತ್ಯ ಪರಿಷತ್ತಿನಿಂದ ಏರ್ಪಡಿಸಿದ್ದ ದಸರಾ ಕವಿಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಅಧ್ಯಯನಶೀಲರಾಗುವುದರ ಮೂಲಕ ಕವಿಯು ಉತ್ತಮ ಕವಿತೆಗಳನ್ನು ಸೃಷಿಸಲು ಸಾಧ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ ಸಾಹಿತ್ಯದಿಂದ ಕನ್ನಡ ನಾಡು ಸಾಂಸ್ಕøತಿಕವಾಗಿ ಸಮೃದ್ಧಿಯಾಗಿದೆ. ಸಾಹಿತ್ಯ ರಚನೆ ನಿಲ್ಲಬಾರದು ಅದು ನಿರಂತರವಾಗಿ ಚಲನಶೀಲವಾಗಿರಬೇಕು ಎಂದರು.
ಮುಖ್ಯ ಅತಿಥಿಯಾಗಿ ಹಳ್ಳೂರ ಎಸ್.ಆರ್. ಸಂತಿ ಕಾಲೇಜು ಪ್ರಾಚಾರ್ಯ ವೈ.ಬಿ. ಕಳ್ಳಿಗುದ್ದಿ, ಬಿ.ವೈ. ಶಿವಾಪುರ, ಬಾಲಶೇಖರ ಬಂದಿ ಮಾತನಾಡಿದರು.
ಡಾ. ಎಸ್.ಎಸ್. ಪಾಟೀಲ, ಕಡಕೋಳದ ಬಿ.ಎಂ. ಸ್ವರಮಂಡಲ ಅತಿಥಿಯಾಗಿ ಭಾಗವಹಿಸಿದ್ದರು.
ಕವಿಗೋಷ್ಠಿಯಲ್ಲಿ ಬಸಪ್ಪ ಇಟ್ಟನ್ನವರ, ನಿಂಗಪ್ಪ ಸಂಗ್ರಜಿಕೊಪ್ಪ, ಶಿವಲಿಂಗಯ್ಯ ಗುರುಸ್ವಾಮಿ, ಸಿದ್ದಪ್ಪ ಆಡಿನ, ಮಹಾದೇವ ಪೋತರಾಜ, ಶಿವಕುಮಾರ ಕೋಡಿಹಾಳ, ದುರ್ಗಪ್ಪ ದಾಸನ್ನವರ, ದುಂಡಪ್ಪ ಕಮತಿ, ಕಲ್ಲಪ್ಪ ಡೋಣಿ, ಬಾಳೇಶ ತುಬಾಕಿ, ಸಾಗರ ಹುನಗುಂದ, ಶಶಿರೇಖಾ ಬೆಳ್ಳಕ್ಕಿ, ಶೈಲಜಾ ಬಡಿಗೇರ, ರೂಪಾ ಕೌಜಲಗಿ, ಭಾಗೀರತಿ ಕುಳಲಿ, ರಾಜೇಶ್ವರಿ ಹಳ್ಳೂರ, ಸರಸ್ವತಿ ಶೆಕ್ಕಿ, ಅಮರ ಕಾಂಬಳೆ ಸ್ವರಚಿತ ಕವಿತೆ ಓದಿದರು.
ಚುಸಾಪ ಅಧ್ಯಕ್ಷ ಚಿದಾನಂದ ಹೂಗಾರ ಪ್ರಾಸ್ತಾವಿಕ ಮಾತನಾಡಿ ಇದು ಮೂರನೇ ವರ್ಷ ಕವಿಗೋಷ್ಠಿ ಏರ್ಪಡಿಸುತ್ತಿದ್ದು, ತಂದೆಯವರ ಸಂಕಲ್ಪದಂತೆ ಕವಿಗೋಷ್ಠಿಯನ್ನು ಪ್ರತಿ ವರ್ಷವೂ ದಸರಾ ಸಂದರ್ಭದಲ್ಲಿ ಮಾಡುವುದಾಗಿ ಹೇಳಿದರು.
ಪ್ರಕಾಶ ಮೇತ್ರಿ, ಜಗದೀಶ ಹೂಗಾರ ನಿರೂಪಿಸಿದರು, ವಿವೇಕಾನಂದ ಹೂಗಾರ ವಂದಿಸಿದರು.