ಮೂಡಲಗಿ : ಮೂಡಲಗಿ ತಾಲೂಕಿನ ಶಿವಾಪೂರ ಹ ಗ್ರಾಮದ ಶ್ರೀ ಬಸವ ಆಶ್ರಮ ಹೂಲಿಕಟ್ಟಿ-ಶಿವಾಪೂರ ಹ ದಲ್ಲಿ ನವರಾತ್ರಿ ಉತ್ಸವದ ಸತ್ಸಂಗ ಕಾರ್ಯಕ್ರಮ ನಡೆಯಿತು.
ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಮಮದಾಪೂರದ ಶ್ರೀ ಚರಮೂರ್ತೇಶ್ವರ ಮಠದ ಡಾ. ವೇ. ಮೂ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳವರು ವರಗುಣವಾವುದೆಂದರೆ ಉದಾರ. ಪ್ರಪಂಚ ಜೀವನದ ಜೊತೆಗೆ ಪಾರಮಾರ್ಥಿಕ ಚಿಂತನೆ ಅವಶ್ಯಕವಾಗಿದ್ದು ಉದಾರವಾದಿ ಯಾಗಿ ಬದುಕಬೇಕು ಎಂದು ಹೇಳಿದರು.
ಸಾನಿಧ್ಯದಲ್ಲಿರುವ ರನ್ನ ತಿಮ್ಮಾಪೂರದ ಶ್ರೋ. ಬ್ರ ಬಸವರಾಜ ಮಹಾಸ್ವಾಮಿಗಳವರು ಮಾತನಾಡಿ ದೇವಿಯ ಪುರಾಣದಲ್ಲಿ ಬರುವಂತೆ ನಮ್ಮಲ್ಲಿರುವ ಅಸುರಿ ಶಕ್ತಿಗಳನ್ನು ನಾಶಮಾಡಿಕೊಂಡು ದಾನ ಧರ್ಮಾಧಿಗಳನ್ನು ಮಾಡುವ ಮೂಲಕ ಉದಾರ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಅಧಿಕರಣ ವಿಷಯವಾಗಿ ಖಾನಟ್ಟಿಯ ಶ್ರೋ. ಬ್ರ. ಶ್ರೀ ಬಸವಾನಂದ ಮಹಾಸ್ವಾಮಿಗಳು, ರನ್ನ ತಿಮ್ಮಾಪೂರದ ಮಾತೋಶ್ರೀ ಮುಕ್ತಾ ತಾಯಿಯವರು, ಕಲ್ಲೋಳಿಯ ಶ್ರೋ. ಬ್ರ. ಶ್ರೀ ಚನ್ನಬಸವ ಮಹಾಸ್ವಾಮಿಗಳು, ಮಾರಾಪೂರದ ಶ್ರೋ. ಬ್ರ. ಶ್ರೀ ವೀರೇಶ್ವರ ಮಹಾಸ್ವಾಮಿಗಳು,ಕಂಕಣವಾಡಿಯ ಪೂಜ್ಯ ಮಾರುತಿ ಶರಣರು,ಕಟಕೋಳದ ಶ್ರೀ ಬಿ. ಎಂ. ಸ್ವರಮಂಡಲ ಗುರುಗಳು,ವೇ.ಮೂ.ಈರಯ್ಯಾ ದುಂ ಹಿರೇಮಠ ಸ್ವಾಮಿಗಳು, ಶ್ರೀ ಲಕ್ಷ್ಮಣ ಪೂಜಾರಿ ಉಪದೇಶ ನೀಡಿದರು.
ಶ್ರೀ ಅಡವಿಸಿದ್ದೇಶ್ವರ ಭಜನಾ ಮಂಡಳಿ ಹಾಗೂ ಶ್ರೀ ದುರ್ಗಾದೇವಿ ಭಜನಾ ಮಂಡಳಿಯವರಿಂದ ಭಜನೆಗಳು ನಡೆದವು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಶರಣ ಶ್ರೀ ಜಗದೀಶ ಹೂಗಾರ ಸ್ವಾಗತಿಸಿದರು, ವಿವೇಕಾನಂದ ಹೂಗಾರ ವಂದಿಸಿದರು, ಚಿದಾನಂದ ಹೂಗಾರ ಕಾರ್ಯಕ್ರಮ ನಿರೂಪಿಸಿದರು.