ಮೂಡಲಗಿ: ತಾಲೂಕಿನ ಶಿವಾಪುರ(ಹ) ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಯೋನಜನೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷೆ ಶಿವಲೀಲಾ ಗಾಣಿಗೇರ ಮಾತನಾಡಿ, ಮಕ್ಕಳು ಯಾವದೇ ರೀತಿಯ ದುಶ್ಚಟಕ್ಕೆ ಬಲಿಯಾಗದೆ ತಮ್ಮ ಶರೀರವನ್ನು ಸದೃಢ ಇಟ್ಟುಕೊಳ್ಳಬೇಕು, ತಂಬಾಕು ಸೇವನೆಯಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಗೋಪಾಲ ಭಸ್ಮೆ, ಸಹ ಶಿಕ್ಷಕರಾದ ಕೆ.ಎಚ್ ಪಾಟೀಲ, ಬಿ.ಟಿ.ಹಳ್ಳಿ, ಅಶೋಕ ಸುನಧೋಳಿ, ಎ.ಡಿ.ಅಗೇರ ಯೋಜನೆಯ ರಾಮ್, ಸೇವಾ ಪ್ರತಿನಿದಿಗಳು,
ಒಕ್ಕೂಟದ ಪದಾಧಿಕಾರಿಗಳು ಮತ್ತಿತರು ಉಪಸ್ಥಿತರಿದ್ದರು.