ಶ್ರೀಸಾಯಿ ಸ್ಮರಣೆಯಿಂದ ಭಗವಂತನನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳಬೇಕು – ಶ್ರೀಬಸವಸಮರ್ಥ ಸ್ವಾಮೀಜಿ
ಮೂಡಲಗಿ : ದೇವ ನಿರ್ಮಿತ ದೀಪದಿಂದ ಆತ್ಮಸಾಕ್ಷಾತ್ಕಾರ ಕಾಣುವಂತೆ ಸಂತೋಷವನ್ನು ಪ್ರೀತಿಸುವ ಗುಣ ಮನುಷ್ಯ ಬೆಳಸಿಕೊಳ್ಳಬೇಕು ಮಾನವ ಭಗವಂತನನ್ನು ಪ್ರೀತಿಸಿದಾಗ ಜಗತ್ತನ್ನು ಜಯಸಿದಂತೆ. ಈ ಜಗತ್ತಿನಲ್ಲಿ ಮನುಷ್ಯನ ದುರಾಸೆಗಳೆ ಅವನ ಬದ್ದ ವೈರಿಗಳು ದುರಾಸೆ ಬಿಟ್ಟರೆ ಮನುಷ್ಯ ಮಹಾತ್ಮನಾಗುತ್ತಾನೆ ಹೂ. ಗಾಳಿ. ನೀರು ಬೆಳಕು ನೋಡಿ ಮನುಷ್ಯ ತನ್ನ ಜೀವನ ರೂಪಿಸಿಕೊಂಡರೆ ಭಂಗವಂತನಾದ ಶ್ರೀಸಾಯಿಯನ್ನು ಒಲಿಸಿಕೊಂಡಂತೆ ಎಂದು ಶಿರೂಂಜನ ಶ್ರೀ ಬಸವಸಮರ್ಥ ಸ್ವಾಮೀಜಿ ಹೇಳಿದರು.
ಅವರು ಸ್ಥಳಿಯ ಆರ್. ಡಿ. ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಶ್ರೀಸತ್ಯಸಾಯಿ ಸೇವಾ ಸಮಿತಿಯ 16ನೇಯ ವಾರ್ಷಿಕೋತ್ಸವ ಕಾರ್ಯಕ್ರಮದ ಅತಿಥ್ಯವನ್ನು ವಹಿಸಿಕೊಂಡು ಮಾತನಾಡಿದರು.
ಸುಣದೋಳಿಯ ಶ್ರೀಜಡಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ ಕಷ್ಟದಲ್ಲಿ ದುಖಃದಲ್ಲಿ ಇದ್ದ ವ್ಯಕ್ತಿಗೆ ಸಹಾಯ ಮಾಡುವ ಗುಣದಿಂದ ಪರಮಾತ್ಮನನ್ನು ಕಾಣಬಹುದು ಭಕ್ತಿಯ ಧ್ಯಾನದಿಂದ ಮಾಡುತ್ತಿರುವಾಗ ಮನಸ್ಸಿನಿಂದ ಮತ್ಸರ ಮತ್ತು ಲೋಬದ ಗುಣಗಳು ಮಾಯವಾಗುತ್ತವೆ ಶ್ರೆದ್ದೆ ಮತ್ತು ನಿಷ್ಠೆಯ ಕಾಯಕದಲ್ಲಿ ಸಾಯಿಬಾಬರನ್ನು ಕಾಣಬಹುದು ಎಂದರು.
ಸೇವಾ ವಿಭಾಗದ ಮುಖ್ಯಸ್ಥರಾದ ವಿನೋದಿನಿ ಕುರಡೆಕರ್ ಮಾತನಾಡಿ ಶ್ರೆದ್ದೆ ಮತ್ತು ನಿಷ್ಠೆಯ ಕಾಯಕದಲ್ಲಿ ಸಾಯಿಬಾಬಾರನ್ನು ಕಾಣಬಹುದು ಎಂದರು.
ಅಧ್ಯಕ್ಷತೆಯನ್ನು ಬೆಳಗಾವಿ ವಿಭಾಗದ ಸಂಪನ್ಮೂಲ ವ್ಯಕ್ತಿಗಳಾದ ಸುರೇಶ ಕಬ್ಬೂರ ವಹಿಸಿಕೊಂಡು ಮಾತನಾಡಿ ಶ್ರೀಸಾಯಿಬಾಬರ ದೈವಿಕ ಪವಾಡ ಪುರಷರಾಗಿದ್ದು ಯಾರು ಅವರನ್ನು ಪೂಜಿಸುತ್ತಾರೆ ಅವರಿಗೆ ಸಾಯಿಬಾಬ ಆತ್ಮ ಶಕ್ತಿಯನ್ನು ನೀಡುತ್ತಾನೆ ಮತ್ತು ಮೂಡಲಗಿಯಲ್ಲಿ ಸಾಯಿಬಾಬಾರ ಸೇವಾ ಕಾರ್ಯವನ್ನು ನಮ್ಮ ಸಮಿತಿಯವರು ಉತ್ತಮವಾಗಿ ಸಂಘಟಿಸುತ್ತಿರುವದು ಮತ್ತು ಸಾಯಿಬಾಬಾರ ಮಂದಿರ ನಿರ್ಮಿಸಿ ದೇವ ಕೃಪೆ ಪಾತ್ರರಾಗುತ್ತಿದ್ದಾರೆ ಎಂದರು.
ಮೂಡಲಗಿ ಸಿದ್ದಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀಶ್ರೀದತ್ತಾತ್ರೇಯಬೋಧ ಸ್ವಾಮೀಜಿಗಳು ಆರ್ಶೀವಚನ ನೀಡಿತ್ತಾ ಎಲ್ಲ ಜನರು ವೇದ ಪಠಣ ಮತ್ತು ಸೇವಾ ಕಾರ್ಯಗಳನ್ನು ಮಾಡುತ್ತಾ ಸಾಯಿಬಾಬಾರ ಸಿದ್ದಾಂತಗಳನ್ನು ಅಳವಡಿಸಿಕೊಂಡು ತಮ್ಮ ಕಾರ್ಯಗಳನ್ನು ಪರಮಾತ್ಮನಿಂದ ದೀವ್ಯ ಶಕ್ತಿ ಪಡೆಯಲು ಪ್ರಯತ್ನಿಸಬೇಕೆಂದರು.
ಕಾರ್ಯಕ್ರಮದಲ್ಲಿ ಆರ್.ಡಿ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ, ಪುರಸಭೆ ಅಧ್ಯಕ್ಷರಾದ ಹಣಮಂತ ಗುಡ್ಲಮನಿ, ಸದಸ್ಯರಾದ ಸಂತೋಷ ಸೋನವಾಲ್ಕರ ಜಯಾನಂದ ಪಾಟೀಲ, ಬಿಇಓ ಅಜೀತ್ ಮನ್ನಿಕೇರಿ, ಕಾಶೀಮ ಅಲಿ ಬ್ಯಾಂಕಿನ ಅಧ್ಯಕ್ಷರಾದ ಅನ್ವರ ನದಾಫ, ಹಿರಿಯರಾದ ಸುಭಾಸ ಆರ್ ಸೋನವಾಲ್ಕರ, ರವಿ ಆರ್. ಸೋನವಾಲ್ಕರ, ಮೂಡಲಗಿಯ ಶ್ರೀಸತ್ಯಸಾಯಿ ಸೇವಾ ಸಮಿತಿಯ ಸದಸ್ಯರು ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಾ ಶ್ರೀಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕರು ಸಾಯಿಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶ್ರೀಮತಿ ರೇಣುಕಾ ದೊಡ್ಡಮನಿ ಸ್ವಾಗತಿಸಿದರು ಕುಮಾರಿ ಲತಾ ಬುದ್ನಿ ನಿರೂಪಿಸಿದರು. ವೀಣಾ ಗಾಡವಿ ವಂದಿಸಿದರು.