Breaking News
Home / Recent Posts / ಶಿವಬೋಧರಂಗ ಪಿಕೆಪಿಎಸ್‍ಗೆ 17.56ಲಕ್ಷ ರೂ ಲಾಭ-ವಿಜಯಕುಮಾರ ಸೋನವಾಲಕರ

ಶಿವಬೋಧರಂಗ ಪಿಕೆಪಿಎಸ್‍ಗೆ 17.56ಲಕ್ಷ ರೂ ಲಾಭ-ವಿಜಯಕುಮಾರ ಸೋನವಾಲಕರ

Spread the love

 

ಶಿವಬೋಧರಂಗ ಪಿಕೆಪಿಎಸ್‍ಗೆ 17.56ಲಕ್ಷ ರೂ ಲಾಭ-ವಿಜಯಕುಮಾರ ಸೋನವಾಲಕರ

ಮೂಡಲಗಿ: ಪಟ್ಟಣದ ಶ್ರೀ ಶಿವಬೋಧರಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕಳೆದ ಮಾರ್ಚ್ ಅಂತ್ಯಕ್ಕೆ 17.56 ಲಕ್ಷ ರೂಪಾಯಿ ಲಾಭಗಳಿಸಿ ಪ್ರಗತಿ ಪಥದತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಹೇಳಿದರು.
ಮಂಗಳವಾರದಂದು ಪಟ್ಟಣದ ಶಿವಬೋಧರಂಗ ಪಿಕೆಪಿಎಸ್ ಸಭಾ ಭವನದಲ್ಲಿ ಕರೆದ ಸಂಘದ 2022-23ನೇ ಸಾಲಿನ ಪ್ರಗತಿಯ ಬಗ್ಗೆ ಕರೆದ ಸಭೆಯಲ್ಲಿ ಮಾತನಾಡಿ, 13 ವರ್ಷಗಳ ಅವಧಿಯಲ್ಲಿ ಒಟ್ಟು 525 ಶೇರುದಾರಿಂದ 39.12 ಲಕ್ಷ ರೂ ಶೇರು ಹಣ ಸಂಗ್ರಹಿಸಿ, ಸಂಘದ 211 ರೈತ ಸದಸ್ಯರಗೆ ಬಿಡಿಸಿಸಿ
ಬ್ಯಾಂಕ ಮುಖಾಂತರ 2.20 ಕೋಟಿ ರೂ ಸಾಲ ವಿತರಿಸಿದು. ಸಾರ್ವಜನಿಕ ವಲಯದಿಂದ 3.10 ಕೋಟಿ ರೂಪಾಯಿ ಠೇವು ಸಂಗ್ರಹಿಸಿ ಸಂಘದ ಸದಸ್ಯರಿಗೆ ವಾಹನ ಸೇರಿದಂತೆ ವಿವಿಧತೇರನಾದ 2.34 ಕೋಟಿ ರೂ ಸಾಲ ವಿತರಿಸಿ ಒಟ್ಟು 6.41 ಕೋಟಿ ರೂ ದುಡಿಯುವ ಬಂಡವಾಳ ಹೊಂದಿದು. ಸಂಘದ ಸದಸ್ಯರಿಗೆ ಮತ್ತು ಪಟ್ಟಣದ ನಾಗರಿಕರಿಗೆ ಅನೂಕೂಲ ದೃಷ್ಟಿಯಿಂದ ಗ್ರಾಹಕರ ಆಹಾರ ಪಡಿತರ ನ್ಯಾಯ ಬೆಲೆ ಅಂಗಡಿ ಆರಂಭಿಸಲಾಗಿದೆ. ಶಿಘ್ರದಲ್ಲಿ ರೈತರ ಅನುಕೂಲತೆಗೆ ರಾಸಾಯಿನಿಕ ಗೊಬ್ಬರ ಅಂಗಡಿ ಪ್ರಾರಂಭಿಸಲಾಗುತ್ತದೆ. ಸಂಘದ ಪ್ರಗತಿ ಪಥದತ ಸಾಗಲು ಗ್ರಾಹಕರು ಸಮಯಕ್ಕೆ ಸರಿಯಾಗಿ ವ್ಯವಹಾರ
ನಡೆಸಿದರಿಂದ ಮತ್ತು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಪರಿಶ್ರಮದಿಂದ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹಾಗೂ ಕೆ.ಎಂ.ಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಸಹಕಾರ ದಿಂದ ಸಂಘವು ಪ್ರಗತಿ ಪಥದತ ಸಾಗುತ್ತಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ನಿರೀಕ್ಷ ಈರಣ್ಣ ಢವಳೇಶ್ವರ ಮಾತನಾಡಿ ಮೂಡಲಗಿ ವಲಯದಲ್ಲಿ ಶ್ರೀ ಶಿವಬೋಧರಂಗ ಪ್ರಾಥಮಿಕ ಕೃಷಿ ಪತ್ತಿನ ಸಂಘವು ಎಲ್ಲ ವ್ಯವಹಾರವನ್ನು ಬ್ಯಾಂಕ್ ಖಾತೆ ಮೂಲಕ ನಿರ್ವಹಿಸುತ್ತಿರುವವು ಒಳ್ಳೇಯ ಬೆಳವಣಿಗೆ ಎಂದ ಅವರು ರೈತರು ಪಿಕೆಪಿಎಸ್‍ದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸದಾಶಿವ ತಳವಾರ, ನಿರ್ದೇಶಕರಾದ ಬಸವರಾಜ ಕುರಬಗಟ್ಟಿ, ಸಚೀನ ಸೋನವಾಲಕರ, ವಿನೋಧ ಪಾಟೀಲ, ಸುಭಾಸ ಸಣ್ಣಕ್ಕಿ, ವೀರಣ್ಣಾ ಸೋನವಾಲಕರ, ರವೀಂದ್ರ ಶಾಬಣ್ಣವರ ಮತ್ತು ಸತೀಶ ಲಂಕೆಪ್ಪನವರ, ಮಾರುತ್ತಿ ಶಾಬನವರ, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಶೋಕ ಮಹಾರಡ್ಡಿ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ