Breaking News
Home / ಬೆಳಗಾವಿ / *ಜಡಿಸಿದ್ಧೇಶ್ವರ ಸೊಸಾಯಿಟಿಗೆ ಎಲ್ಲ ನಿರ್ದೇಶಕರು ಅವಿರೋಧ ಆಯ್ಕೆ*

*ಜಡಿಸಿದ್ಧೇಶ್ವರ ಸೊಸಾಯಿಟಿಗೆ ಎಲ್ಲ ನಿರ್ದೇಶಕರು ಅವಿರೋಧ ಆಯ್ಕೆ*

Spread the love

*ಜಡಿಸಿದ್ಧೇಶ್ವರ ಸೊಸಾಯಿಟಿಗೆ ಎಲ್ಲ ನಿರ್ದೇಶಕರು ಅವಿರೋಧ ಆಯ್ಕೆ*

ಮೂಡಲಗಿ: ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ತಾಲೂಕಿನ ಸುಣಧೋಳಿ ಶ್ರೀ ಜಡಿಸಿದ್ಧೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ಮುಂದಿನ ಐದು ವರ್ಷಗಳ ಅವಧಿಗೆ 13 ಜನ ನಿರ್ದೇಶಕರ ಆಯ್ಕೆಗೆ ಜ.25 ರಂದು ನಡೆಯಬೇಕಿದ್ದ ಚುನಾವಣೆಯಲ್ಲಿ ಜ.19 ರಂದು ಅಭ್ಯರ್ಥಿಗಳ ನಾಮ ಪತ್ರ ವಾಪಸ ಪಡೆಯುವ ಕಡೆಯ ದಿನದಂದು 30 ಅಭ್ಯರ್ಥಿಗಳಲ್ಲಿ 17 ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ ಪಡೆದಿದರಿಂದ 13 ನಿರ್ದೇಶಕರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಚುನಾವಣಾಧಿಕಾರಿ ಆನಂದ ಹೇರೆಕರ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಸೊಸಾಯಿಟಿಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಬಕವಿ ಕಾರ್ಯ ನಿರ್ವಹಿಸಿದರು.
ನೂತನ ನಿರ್ದೇಶಕರಾಗಿ ಸಾಮಾನ್ಯ ಕ್ಷೇತ್ರದಿಂದ ಶಂಕರ ಕಾ.ಪತ್ತಾರ, ಚಂದ್ರಶೇಖರ ಅ.ಗಾಣಿಗೇರ, ಪ್ರಭಾಕರ ಬ.ನರಗುಂದ, ಮುರಿಗೆಪ್ಪ ಶಿ.ಪಾಟೀಲ, ಬಸವರಾಜ ಶಿ.ಮದಬಾವಿ, ಶಿವಾನಂದ ಶಿ.ವಾಲಿ, ಬಸವರಾಜ ಲಿಂ.ಪಾಟೀಲ, ಮಹಿಳಾ ಕ್ಷೇತ್ರದಿಂದ ಬಾಗವ್ವ ಮಾ.ದೇವನಗಳ, ಕೆಂಪವ್ವಾ ವಿ.ಬಾಗೋಜಿ, ಹಿದುಳಿದ ಅ ವರ್ಗದಿಂದ ರವೀಂದ್ರ ಕ.ಕಮತಿ,ಹಿದುಳಿದ ಬ ವರ್ಗದಿಂದ ಭಿಮಣ್ಣಾ ಬಾ.ಹೊಟ್ಟಿಹೊಳಿ, ಪ/ಜಾ ಕ್ಷೇತ್ರದಿಂದ ಮಾರುತಿ ಬಾ.ಭಜಂತ್ರಿ, ಪ/ಪಂ ಕ್ಷೇತ್ರದಿಂದ ನಾಗರಾಜ ಕಾ.ಮಾಳಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಚುನಾವಣೆಗೆ ನಾಮ ಪತ್ರಸಲ್ಲಿಸಿದ ಖಾನಗೌಡ ಪಾಟೀಲ, ರವಿ ಹೊಟ್ಟಿಹೊಳಿ, ಸುಲೋಚನಾ ಪತ್ತಾರ, ಮಾರುತಿ ದೇವನಗೋಳ, ವೀರಪಣ್ಣಾ ಬಾಗೋಜಿ, ಸೀಮಾ ವಾಲಿ, ಮಾರುತಿ ನಾಯಿಕ, ಮಾರುತಿ ಅರಬಿ, ನಿಂಗಪ್ಪ ಹುಂಡೇಕಾರ, ಶ್ರೀಶೈಲ ವಾಲಿ, ಶಾಂತವ್ವ ಈಟಿ, ಶಿವಲೀಲಾ ಗಾಣಿಗೇರ, ಕಲಾವತಿ ಪಾಟೀಲ, ತಾಯವ್ವ ಗುಂಡೊಳ್ಳಿ, ರೇಖಾ ಕಮತಿ, ಗದಿಗೆಪ್ಪ ಅಮಣಿ, ದ್ರಾಕ್ಷಾಯಣಿ ಚೌಗಲಾ ಇವರು ಗ್ರಾಮದ ಹಿರಿಯರಾದ ರಾಜು ವಾಲಿ, ಮಾರುತಿ ಹೊರಟ್ಟಿ, ಭೀಮಪ್ಪ ಹೂವನ್ನವರ, ಸಿದ್ಧಾರೂಡ ಕಮತಿ, ನಿಂಗಪ್ಪ ಕಮತಿ, ಗುರುರಾಜ ಪಾಟೀಲ ಮಧ್ಯಸ್ಥಿಕೆಯಲ್ಲಿ ತಮ್ಮ ನಾಮ ಪತ್ರವನ್ನು ಪಾಪಸಪಡೆದುಕೊಂಡಿದ್ದರಿಂದ 13 ನಿರ್ದೇಶಕರ ಆಯ್ಕೆ ಅವಿರೋಧವಾಗಿ ಜರುಗಿತು


Spread the love

About inmudalgi

Check Also

ನಾಡಿನ ಹಬ್ಬಗಳು ಸಂಸ್ಕøತಿಯ ಪ್ರತೀಕವಾಗಿವೆ

Spread the love ಮೂಡಲಗಿ: ನಾಡಿನ ಹಬ್ಬಗಳು ಸಂಸ್ಕøತಿಯ ಪ್ರತೀಕವಾಗಿವೆ, ನಾಡಿನ ಪ್ರತಿಯೊಂದು ಹಬ್ಬ ಹರಿದಿನಗಳಲ್ಲಿ ಆಚಾರ ವಿಚಾರಗಳು ಆಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ