ಸುಣಧೋಳಿ: ₹35 ಲಕ್ಷ ವೆಚ್ಚದ ದ್ವಾರ ಬಾಗಿಲ ನಿರ್ಮಾಣಕ್ಕೆ ಭೂಮಿ ಪೂಜೆ
ಮೂಡಲಗಿ: ತಾಲ್ಲೂಕಿನ ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಮಹಾದ್ವಾರ ನಿರ್ಮಾಣಕ್ಕೆ ಶನಿವಾರ ಪೀಠಾಧಿಪತಿ ಶಿವಾನಂದ ಸ್ವಾಮಿಗಳ ಸಾನ್ನಿಧ್ಯದಲ್ಲಿ ಭೂಮಿ ಪೂಜೆ ಜರುಗಿತು.
ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ’ನಾಡಿನ ಮಠಮಾನ್ಯಗಳು ಭಕ್ತರಿಗೆ ಶಾಂತಿ, ನೆಮ್ಮದಿಯನ್ನು ನೀಡುವ ತಾಣಗಳಾಗಿವೆ. ಮಠಮಾನ್ಯಗಳು ಬೆಳೆಯಲು ಭಕ್ತರ ಭಕ್ತಿ ಮುಖ್ಯವಾಗಿದೆ’ ಎಂದರು.
ಮಠದ ಪೀಠಾಧಿಪತಿ ಶಿವಾನಂದ ಸ್ವಾಮಿಗಳು ಮಾತನಾಡಿ ‘ಅಂದಾಜು ₹35 ಲಕ್ಷ ವೆಚ್ಚದಲ್ಲಿ ಮಠದ ಮುಖ್ಯ ಮಹಾದ್ವಾರ ನಿರ್ಮಿಸುವ ಸಂಕಲ್ಪ ಮಾಡಲಾಗಿದೆ’ ಎಂದರು.
ರಾಜು ವಾಲಿ, ಬಸವರಾಜ ಪಾಟೀಲ, ಹಣಮಂತ ಪಾರ್ಶಿ, ಸಿದ್ಧಾರೂಢ ಕಮತಿ, ಮಹಾದೇವ ಪಾಟೀಲ, ಸಿದ್ದಪ್ಪ ದೇವರಮನಿ, ರುದ್ರಪ್ಪ ಹಲಸಗಿ, ಉದಯ ಜಿಡ್ಡಿಮನಿ, ಸಿದ್ದಗಿರೆಪ್ಪ ಪಾಟೀಲ, ರಾಮಣ್ಣ ಬೆಣ್ಣಿ, ಸೋಮಪ್ಪ ಹೊರಟ್ಟಿ, ಲಿಂಗಪ್ಪ ಅಡಿಬಿಟ್ಟಿ, ಶಿವಲಿಂಗಯ್ಯ ಹಿರೇಮಠ, ಮಹಾಲಿಂಗಯ್ಯ ಹಿರೇಮಠ ಮತ್ತಿತರರು ಇದ್ದರು.