Breaking News
Home / ಬೆಳಗಾವಿ / ತೊಂಡಿಕಟ್ಟಿ: ಅವಧೂತೈಕ್ಯ ಪುಂಡಲೀಕ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ

ತೊಂಡಿಕಟ್ಟಿ: ಅವಧೂತೈಕ್ಯ ಪುಂಡಲೀಕ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ

Spread the love

ತೊಂಡಿಕಟ್ಟಿ: ಅವಧೂತೈಕ್ಯ ಪುಂಡಲೀಕ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ

ತೊಂಡಿಕಟ್ಟಿ: ಎಲ್ಲಕ್ಕಿಂತಲೂ ಗುರುವಿನ ಋಣ ತೀರಿಸ ಬೇಕು, ಗಾಳೇಶ್ವರ ಮಠದ ಪೀಠಾಧಿಪತಿ ವೆಂಕಟೇಶ್ವರ ಮಹಾರಾಜರು ಶ್ರೀಮಠ ಪೀಠಾಧಿಪತಿಗಳಾಗಿ ಅವಧೂತೈಕ್ಯ ಪುಂಡಲೀಕ ಮಹಾರಾಜರ ಶಿಲಾಮಂದಿರವನ್ನು ಭಕ್ತ ಸಮೂಹ ಸಹಕಾರದಿಂದ ಕೇವಲ ಒಂದೆ ತಿಂಗಳಲ್ಲಿ ಸುಂದರವಾದ ಮಂದಿರವನ್ನು ನಿರ್ಮಿಸಿ ಗುರುಗಳ ಋಣವನ್ನು ತೀರಿಸಲು ಪ್ರಯತ್ನಿಸಿರುವುದು ಶ್ಲಾಘನಿಯವಾದದ್ದು ಎಂದು ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಅವರು ರಾಮದುರ್ಗ ತಾಲೂಕಿನ ತೊಂಡಿಕಟ್ಟಿ ಗ್ರಾಮದಲ್ಲಿ ರವಿವಾರದಂದು ಅವಧೂತೈಕ್ಯ ಪುಂಡಲೀಕ ಮಹಾರಾಜರ ನೂತನ ಶಿಲಾಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ ಹಾಗೂ ಗಾಳೇಶ್ವರ ಮಹಾರಜರ 80ನೇ ಪುಣ್ಯಾರಾಧನೆಯ ನಿಮಿಯ್ಯ ಹಮ್ಮಿಕೊಂಡ “ಇಂದುನಾಳೇನ್ನದಲೆ” ಎಂಬ ಸುವಿಚಾರ ಚಿಂತನೆ ಗೋಷ್ಠಿಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮನುಷ್ಯ ಜೀವಿ ತಮ್ಮ ಶಕ್ತಿ ಅನುಸಾರ ದಾನ ಮತ್ತು ಒಳ್ಳೆಯ ಮಾತಗಳ್ನಾಡಿ ಪ್ರತಿಕ್ಷಣವು ಪುಣ್ಯದ ಕಾರ್ಯದಲ್ಲಿ ತೋಡಗಿ ಜೀವನ್ನು ಪಾವನ ಮಾಡಿಕೊಳ್ಳಬೇಕು ಎಂದು ಅವರು ಗಾಳೇಶ್ವರ ಮಠದ ಶಕ್ತಿ ಅಪಾರವಾದದ್ದು ಎಂದರು.
ಸುಣಧೋಳಿ ಜಡಿಸಿದ್ಧೇಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಮಹಾತ್ಮರ ದರ್ಶನದಿಂದ ಸ್ವರ್ಗದ ಬಾಗಿಲು ತಟ್ಟುವ ಕೆಲಸ ಮಾಡಬೇಕು ಎಂದರು.

ತೊಂಡಿಕಟ್ಟಿ: ಇಲ್ಲಿಯ ಶ್ರೀ ಗಾಳೇಶ್ವರ ಮಹಾರಜರ 80ನೇ ಪುಣ್ಯಾರಾಧನೆಯ ಮತ್ತು ಪುಂಡಲೀಕ ಮಹಾರಾಜರ ಮೂರ್ತಿ ಪ್ರತಿಷ್ಠಾಪಣಾ ಹಾಗೂ ಚಿಂತನೆ ಗೋಷ್ಠಿಯ ಸಮಾರಂಭದಲ್ಲಿ ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿದರು. 

ಚಿಕ್ಕೋಡಿಯ ಸಂಪಾದನ ಮಹಾಸ್ವಾಮಿಗಳು ಮಾತನಾಡಿ, ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ, ನಮ್ಮ ಜೀವ ನಮ್ಮ ಕೈಯಲ್ಲಿದೆ, ಪಾಪ ಕಾರ್ಯಮಾಡದೆ ಪುಣ್ಯದ ಕಾರ್ಯವನ್ನು ಮತ್ತು ದಾನ ಧರ್ಮಗಖನ್ನು ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು, ಮಠಮಂದಿರ ಇಲ್ಲದಿದ್ದರೆ ಮನುಷ್ಯನಿಗೆ ನೆಮ್ಮದಿ ಇಲ್ಲ ಎಂದರು.

ಅರಳಕಟ್ಟಿಯ ರೇವಣಸಿದ್ಧೇಶ್ವರ ಶ್ರೀಗಳು ಮಾತನಾಡಿ, ಭವಿಷ್ಯದಲ್ಲಿ ಆಶಾವಾದಿಗಳು ಇರಬೇಕು ಒಳ್ಳೇಯ ಕಾರ್ಯಗಳ ತೊಡಗುವವದರಿಂದ ಪಣ್ಯಪ್ರಾಪ್ತಿಯಾಗುತ್ತದೆ ಎಂದವರು ಗಾಳೇಶ್ವರ ಮಠದ ವೆಂಕಟೇಶ ಮಹಾರಾಜರು ಪ್ರಭಾವ ಮತ್ತು ಸ್ವಭಾವ ಹೊಂದಿದ್ದ ಶ್ರೀಗಳು ಎಂದು ಬಣ್ಣಿಸಿದರು.

ಶಿವಾಪೂರ(ಹ)ದ ಅಡವಿಸಿದ್ಧರಾಮ್ ಶ್ರೀಗಳು ಮಾತನಾಡಿ, ಮಾನವ ಜನ್ಮ ಬಹಳ ದೊಡ್ಡದಾಗಿದು, ಗಳಿಸಿದ ಸಂಪತ್ತಿನಲ್ಲಿ ಸ್ವಲ್ಪವಾದರು ಸತ್ಕಾರ್ಯಗಳಿಗೆ ತೊಡಗಿಸಿದರೆ ಪುಣ್ಯದೊರೆಯುವದು ಎಂದರು.
ಪಂಚಾಯನಕಟ್ಟಿಯ ಶ್ರೀ ಕೇಶವಾನಂದ ಶ್ರೀಗಳು ಮತ್ತು ಅನಗವಾಡಿಯ ಮಾತೋಶ್ರೀ ಅನೂಸೂಯಾ ತಾಯಿ ಅವರು ಮಾತನಾಡಿದರು.
ಸಮಾರಂಭದ ವೇದಿಕೆಯಲ್ಲಿ ಗಾಳೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ವೆಂಕಟೇಶ್ವರ ಮಹಾರಾಜರು, ಹುಣಶ್ಯಾಳ ಪಿಜಿಯ ನಿಜಗುಣ ದೇವರು, ಕಪರಟ್ಟಿ ಮಹಾದೇವಾಶ್ರಮದ ಶ್ರೀ ಬಸವರಾಜ ಹಿರೇಮಠ ಶ್ರೀಗಳು ವಿವಿಧ ಮಠಗಳ ಮಠಾಧೀಶರು ಉಪಸ್ಥಿತರಿದ್ದರು.


Spread the love

About inmudalgi

Check Also

ಆಭರಣ ಕಳ್ಳರ ಬಂಧನ 9.60 ಲಕ್ಷ ರೂ ಮೊತ್ತದ ಆಭರಣ ವಶ

Spread the love   ಆಭರಣ ಕಳ್ಳರ ಬಂಧನ 9.60 ಲಕ್ಷ ರೂ ಮೊತ್ತದ ಆಭರಣ ವಶ ಕುಲಗೋಡ: ಮನೆ ಕಳ್ಳತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ