Breaking News
Home / Recent Posts / ಬಡ್ರ್ಸ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸಿಗೆ ನೀರು ಉಣಿಸುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ

ಬಡ್ರ್ಸ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸಿಗೆ ನೀರು ಉಣಿಸುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ

Spread the love

 

ಮೂಡಲಗಿ: ರೈತರು ತಮ್ಮ ಹೊಲದ ಬದುಗಳಲ್ಲಿ ಗಿಡಗಳನ್ನು ನೆಡವ ಮೂಲಕ ನೀರು ಹಾಗೂ ಮಣ್ಣಿನ ಸಂರಕ್ಷಣಾ ಕಾರ್ಯಗಳನ್ನು ಮಾಡಿ ಪರಿಸರವನ್ನು ರಕ್ಷಿಸಬೇಕೆಂದು ಮಾಜಿ ಸಚಿವ ಹಾಗೂ ಬಡ್ರ್ಸ ಸಂಸ್ಥೆಯ ಅಧ್ಯಕ್ಷ ಆರ್.ಎಮ್. ಪಾಟೀಲ ಕರೆ ನೀಡಿದರು.
ಅವರು ತಾಲೂಕಿನ ತುಕ್ಕಾನಟ್ಟಿ ಬಡ್ರ್ಸ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆವರಣದಲ್ಲಿ ಗೋಕಾಕ ಸಮಾಜಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಜರುಗಿದ ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ವನಮೋಹೊತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೋಕಾಕ ವಲಯ ಅರಣ್ಯ ವಿಭಾಗದಿಂದ ನಿರ್ವಹಿಸಲಾದ ಮಣ್ಣು ಮತ್ತು ನೀರು ಸಂರಕ್ಷಣಾ ಕಾರ್ಯವನ್ನು ಶ್ಲಾಘಿಸಿದರು.
ಗೋಕಾಕ ವಲಯ ಅರಣ್ಯ ಅಧಿಕಾರಿ ಆನಂದ ಹೆಗ್ಡೆ ಮಾತನಾಡಿ, ಪ್ಲಾಸ್ಟಿಕ್‍ನ ಸೂಕ್ತ ವಿಲೇವಾರಿಯ ಅವಶ್ಯಕತೆಯ ಬಗ್ಗೆ ತಿಳಿಸಿದ ಅವರು ಪ್ರತಿಯೊಬ್ಬರು ತಮ್ಮ ಹುಟ್ಟುಹಬ್ಬದ ದಿನದಂದು ಒಂದೊಂದು ಗಿಡ ನೆಟ್ಟು ಒಂದು ವರ್ಷಗಳ ಕಾಲ ಆರೈಕೆ ಮಾಡಿದಲ್ಲಿ, ಪರಿಸರವು ಪುನಶ್ಚೇತನಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು.
ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಡಿ.ಎ. ಮೆಹ್ತ್ರೆ ಮಾತನಾಡಿ, ಪರಿಸರದ ರಕ್ಷಣೆಗೆ ಪೂರಕವಾದ ಜೀವನಶೈಲಿ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗಂಗಾರಾಮ ಗುಡುಗುಡಿ, ಎಲ್. ಕೆ.ಬುದ್ಧನಗೋಳ, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಎಂ.ಬಿ. ಭಾಗವಾನ, ಶಿವಪ್ರಸಾದ, ರಮೇಶ್, ಕೃಷಿ ವಿಜ್ಞಾನ ಕೇಂದ್ರ ಮತ್ತು ನವಪ್ರಭಾ ಪ್ರೌಢ ಶಾಲೆ ಶಿಕ್ಷಕರು, ಶಾಲೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಹೊಂಗೆ ಬೀಜದ ಬಿತ್ತನಾ ಕಾರ್ಯವನ್ನು ಅರಣ್ಯ ವಲಯ ಸಿಬ್ಬಂದಿಯವರು ಶಾಲಾಮಕ್ಕಳ ಮೂಲಕ ಮಾಡಿಸಿ ಅರಳಿ ಗಿಡ, ಹೊಂಗೆ ಮತ್ತು ಬೇವಿನ ಗಿಡಗಳನ್ನು ನೆಡೆಲಾಯಿತು.
ಕೆ.ವಿ.ಕೆ ವಿಜ್ಞಾನಿ ಆದರ್ಶ್ ಹೆಚ್. ಎಸ್ ನಿರೂಪಿಸಿದರು, ಡಾ. ಸೂರಜ ಕೌಜಲಗಿ ವಂದಿಸಿದರು.

 


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ