Breaking News
Home / Recent Posts / ಮ್ಯಾಜಿಕ್ ಬಾಕ್ಸ ವಿದ್ಯಾರ್ಥಿಗಳ ಹಾಜರಾತಿಗೆ ಪೂರಕ-ಗಿರೆಣ್ಣವರ

ಮ್ಯಾಜಿಕ್ ಬಾಕ್ಸ ವಿದ್ಯಾರ್ಥಿಗಳ ಹಾಜರಾತಿಗೆ ಪೂರಕ-ಗಿರೆಣ್ಣವರ

Spread the love

ಮ್ಯಾಜಿಕ್ ಬಾಕ್ಸ ವಿದ್ಯಾರ್ಥಿಗಳ ಹಾಜರಾತಿಗೆ ಪೂರಕ-ಗಿರೆಣ್ಣವರ

ಮೂಡಲಗಿ: ಶಾಲೆಯಲ್ಲಿ ಕೈಗೊಳ್ಳುವ ವಿಶೇಷ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಕಾರಣವಾಗುತ್ತವೆಯಲ್ಲದೆ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಳಕ್ಕೆ ಕಾರಣವಾಗುತ್ತವೆ ಎಂದು ತುಕ್ಕಾನಟ್ಟಿ ಸರ್ಕಾರಿ ಮಾದರಿ ಪ್ರಾಥÀಮಿಕ ಶಾಲೆಯ ಪ್ರಧಾನ ಗುರುಗಳಾದ ಎ.ವ್ಹಿ ಗಿರೆÀಣ್ಣವರ ಹೇಳಿದರು.
ಅವರು ತಾಲೂಕಿನ ತುಕ್ಕಾನಟ್ಟಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಮ್ಯಾಜಿಕ್ ಬಾಕ್ಸ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಶಾಲೆಯಲ್ಲಿ ಆರೇಳು ವರ್ಷಗಳ ಹಿಂದೆ ಜಾರಿಗೆ ತಂದಿರುವ ಮ್ಯಾಜಿಕ್ ಬಾಕ್ಸ ಎಂಬ ಯೋಜನೆಯು ವಿದ್ಯಾರ್ಥಿಗಳ ಹಾಜರಾತಿಯ ಹೆಚ್ಚಳಕ್ಕೆ ಕಾರಣವಾಗಿದೆ ದಿನನಿತ್ಯ ಪ್ರಾರ್ಥನಾ ಸಮಯದಲ್ಲಿ ಮ್ಯಾಜಿಕ್ ಬಾಕ್ಸ ಎಂಬ ಪೆಟ್ಟಿಗೆಯಿಂದ ವಿದ್ಯಾರ್ಥಿಗಳ ಹೆಸರಿನ ಚೀಟಿಯನ್ನು ತೆಗೆದು ಅದೃಷ್ಟಶಾಲಿ ವಿದ್ಯಾರ್ಥಿಗಳಿಗೆÀ ಶೈಕ್ಷಣಿಕ ಬಹುಮಾನಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಒಂದರಿಂದ ಐದು ಹಾಗೂ ಆರರಿಂದ ಎಂಟು ವಿಭಾಗಗಳನ್ನಾಗಿ ಮಾಡಿ ದಿನನಿತ್ಯ ಮ್ಯಾಜಿಕ ಬಾಕ್ಸನ ಅದೃಷ್ಟಶಾಲಿ ಇಬ್ಬರು ವಿದ್ಯಾರ್ಥಿಗಳಿಗೆ ಬಹುಮಾನ ಶಾಲೆಯಿಂದ ನೀಡಲಾಗುತ್ತದೆ. ಈ ಯೋಜನೆ ಕಳೆದ ಆರೇಳು ವರ್ಷದಿಂದ ಜಾರಿಯಲ್ಲಿರುವದರಿಂದ ಬಹುಮಾನ ಪಡೆಯುವ ಬಯಕೆಯಿಂದ ವಿದ್ಯಾರ್ರ್ಥಿಗಳ ಹಾಜರಾತಿ ಪ್ರಾರ್ಥನಾ ಸಮಯದಲ್ಲಿ ಹೆಚ್ಚ್ಚಾಗುತ್ತಿದೆ ಎಂದರು.

ದೈಹಿಕ ಶಿಕ್ಷಣ ಶಿಕ್ಷಕ ಕಿರಣ ಭಜಂತ್ರಿ ವಿದ್ಯಾರ್ಥಿಗಳಿಗೆ ಪ್ರತೀಜ್ಞಾ ವಿಧಿ ಭೋದಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಸಂಸತ್ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತೀಜ್ಞಾ ವಿಧಿ ಭೋದಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ವಿಮಲಾಕ್ಷಿ ತೋರಗಲ್, ಕುಸುಮಾ ಚಿಗರಿ, ಶೀಲಾ ಕುಲಕರ್ಣಿ, ಸಂಗೀತಾ ತಳವಾರ, ಪುಷ್ಪಾ ಭರಮದೆ, ಲಕ್ಷ್ಮೀ ಹೆಬ್ಬಾಳ, ಶಂಕರ ಲಮಾಣಿ, ಕೆ.ಆರ್. ಭಜಂತ್ರಿ, ಮಹಾದೇವ ಗೋಮಾಡಿ, ಅತಿಥಿ ಶಿಕ್ಷಕರಾದ ಶಿವಲೀಲಾ ಹಣಮನ್ನವರ, ಖಾತೂನ್ ನದಾಫ, ರೇಖಾ ಗದಾಡಿ, ಹೊಳೆಪ್ಪಾ ಗದಾಡಿ ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ