Breaking News
Home / ಬೆಳಗಾವಿ / ಶಾಲಾ ಆಸ್ತಿಯನ್ನು ಹಾಳು ಮಾಡಿದರೆ ಕಠಿಣ ಕ್ರಮ : ಪಿಎಸ್.ಐ. ಮುರನಾಳ

ಶಾಲಾ ಆಸ್ತಿಯನ್ನು ಹಾಳು ಮಾಡಿದರೆ ಕಠಿಣ ಕ್ರಮ : ಪಿಎಸ್.ಐ. ಮುರನಾಳ

Spread the love

ಶಾಲಾ ಆಸ್ತಿಯನ್ನು ಹಾಳು ಮಾಡಿದರೆ ಕಠಿಣ ಕ್ರಮ : ಪಿಎಸ್.ಐ. ಮುರನಾಳ

ಮೂಡಲಗಿ 17: ಸಾರ್ವಜನಿಕ ಆಸ್ತ ಪಾಸ್ತಿಗಳನ್ನು ಅದರಲ್ಲೂ ಶಾಲಾ ಕಾಲೇಜುಗಳ ಆಸ್ತಿಯನ್ನು ಹಾಳು ಮಾಡಿದರೆ ಅಂತವರ ಮೇಲೆ ಕಾನೂನು ಕ್ರಮ ಕೈಕೊಳ್ಳಲಾಗುವದು ಎಂದು ಘಟಪ್ರಭಾ ಪೋಲಿಸ್ ಸ್ಟೇಷನ್ ಸಬ್‍ಇನ್ಸಪೆಕ್ಟರ್ ಎಮ್.ವಿ. ಮುರನಾಳ ಹೇಳಿದರು. ಅವರು ತುಕ್ಕಾನಟ್ಟಿಯ ಸರಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆÉದ ವಾರದ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಶಾಲಾ ಅವಧಿಯಲ್ಲಿ ಹಾಗೂ ಶಾಲಾ ಅವಧಿಯ ನಂತರ ಅನುಮತಿಯಿಲ್ಲದೇ ಅನಾವಷ್ಯಕವಾಗಿ ಯಾರೂ ಶಾಲಾ ಆವರಣದಲ್ಲಿ ಹೋಗುವಂತಿಲ್ಲ. ಹಾಗೂ ಸ್ಟಾರ್ ಗುಟಕಾ ತಿಂದು ಉಗುಳುವದಾಗಲಿ ಮದ್ಯ ಕುಡಿಯುವದಾಗಲಿ ಖಾಲಿ ಬಾಟಲಿಗಳನ್ನು ಒಗೆಯುವದಾಗಲಿ ಮಾಡಿದರೆ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವದು. ವಿದ್ಯಾರ್ಥಿಗಳು ಸರಕಾರದ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು. ದೇಶ ಪ್ರೇಮ ದೇಶಭಕ್ತಿ ಬೆಳೆಸಿಕೊಂಡು ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕೆಂದರು. ಈ ಶಾಲೆಯ ವಾರದ ಅತಿಥಿ ಎಂಬ ವಿಶಿಷ್ಟ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದರು. ವಿದ್ಯಾರ್ಥಿಗಳು ಸಾಮಾಜಿಕವಾಗಿ ಏನಾದರೂ ತೊಂದರೆಯಾದಾಗ 112 ನಂಬರಗೆ ಡಯಲ್ ಮಾಡಲು ಕರೆ ನೀಡಿದರು.
ಇನ್ನೋರ್ವ ಆರಕ್ಷಕರಾದ ರಾಮಕೃಷ್ಣ ಗಿಡ್ಡಪ್ಪಗೋಳ ಮಾತನಾಡಿ ಯಾವುದೇ ವಿದ್ಯಾರ್ಥಿನಿಯರು ಪೇಸ್ಬುಕ್, ಇನಸ್ಟಾಗ್ರಾಮ್, ವಾಟ್ಸಪ್ ಸಮಾಜಿಕ ಜಾಲತಾಣಗಳನ್ನು ಬಳಸುವಾಗ ತುಂಬಾ ಜಾಗೂರಕರಾಗಿರಬೇಕು ಎಂದರು. ಅದರಲ್ಲಿ ನಿಮ್ಮ ಮೂಲ ಭಾವಚಿತ್ರ ಪೋನ್ ನಂಬರ ಹಾಕಬೇಡಿ ಅವು ದುರುಪಯೋಗವಾಗಿ ನಿಮ್ಮ ಅಭ್ಯಾಸಕ್ಕೆ ಭವಿಷ್ಯಕ್ಕೆ ಕಂಟಕವಾಗಬಹುದು. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವದರ ಮುಖಾಂತರ ನಿಮ್ಮ ಭವಿಷ್ಯ ಕಟ್ಟಿಕೊಳ್ಳಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಶಾಲೆಯವತಿಯಿಂದ ಪೊಲೀಸ್ ಅಧಿಕಾರಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾನ ಗುರುಗಳಾದ ಎ.ವ್ಹಿ ಗಿರೆಣ್ಣವರ ಅದ್ಯಕ್ಷತೆ ವಹಿಸಿದ್ದರು.
ಶಿಕ್ಷಕ ಎಮ್.ಡಿ. ಗೋಮಾಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರದಲ್ಲಿ ಶಿಕ್ಷಕರಾದ ವಿಮಲಾಕ್ಷಿ ತೋರಗಲ್, ಲಕ್ಷ್ಮೀ ಹೆಬ್ಬಾಳ, ಪುಷ್ಪಾ ಭರಮಧೆ, ರೂಪಾ ಹೂಲಿಕಟ್ಟಿ, ಪ್ರ್ರಿಯಾಂಕಾ.ಡಿ.ಕೆ. ಸುಜಾತ ಕೋಳಿ, ಭಾಗೀರಥಿ ಕಳ್ಳಿಗುದ್ದಿ, ವಾಸಂತಿ ಬೋರಗುಂಡಿ, ಎಮ್.ಡಿ.ಗೋಮಾಡಿ. ಬಿ.ಎನ್. ನಾಯ್ಕ, ಸೋವಶೇಖರ ವಾಯ್ ಆರ್., ಸಿ.ಎಸ್. ಸೀರಿ. ಹೊಳೆಪ್ಪಾ ಗದಾಡಿ, ಯಮುನಾ ಹಮ್ಮನವರ, ಶಿವಲೀಲಾ ಹಣಮನ್ನವರ, ಅನ್ನಪೂರ್ಣಾ ಹುಲಕುಂದ, ಖಾತೂನಬಿ ನದಾಫ, ಪವಿತ್ರಾ ಬಡಿದೇರ ಉಪಸ್ಥಿತರಿದ್ದರು.


Spread the love

About inmudalgi

Check Also

ಹೆಲ್ಮೆಟ್ ಧರಿಸದೆ ಬೈಕ್ ಮುಟ್ಟಬೇಡಿ ಪಿ.ಎಸ್ ಐ ಆನಂದ ಬಿ.

Spread the love ಹೆಲ್ಮೆಟ್ ಧರಿಸದೆ ಬೈಕ್ ಮುಟ್ಟಬೇಡಿ ಪಿ.ಎಸ್ ಐ ಆನಂದ ಬಿ. ಕುಲಗೋಡ: ಜೀವ ಅಮುಲ್ಯ ನಿರ್ಲಕ್ಷತನಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ