
ಮೂಡಲಗಿ : ಇಲ್ಲಿನ ಪ್ರತಿಷ್ಠಿತ ವಿ. ಬಿ. ಸೋನ್ವಾಲ್ಕರ್ ಮೆಮೋರಿಯಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ಬಿ. ವಿ. ಸೋನ್ವಾಲ್ಕರ್ ಪಬ್ಲಿಕ್ ಸ್ಕೂಲ್‍ನ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಜರುಗಿತು.
ತಹಶಿಲ್ದಾರರ ಶ್ರೀಶೈಲ ಗುಡಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ. ಪಾಲಕರು ನಿರಂತರವಾಗಿ ಮಕ್ಕಳನ್ನು ನಿಭಾಯಿಸಬೇಕಾಗಿದೆ ಕಾರಣ ಇಂದಿನ ಮೊಬೈಲ ಎಂಬ ಮೋಹದ ಬಲೆಯಲ್ಲಿ ಮಕ್ಕಳು ಸಿಲುಕಬಾರದು. ಮಕ್ಕಳ ಭವಿಷ್ಯದ ಅಡಿಪಾಯ ಭದ್ರವಾಗಬೇಕಾದರೆ ತಂದೆ ತಾಯಿ ಟಿ ವ್ಹಿ ಹಾಗೂ ಮೊಬೈಲಗಳ ಹಿಡಿತದಿಂದ ಮುಕ್ತರಾಗಬೇಕು. ಈ ತಪ್ಪು ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತದೆ. ಮಕ್ಕಳನ್ನು ಪ್ರೀತಿಸುವ ಜೊತೆಗೆ ತಂದೆ ತಾಯಿಗಳು ದಂಡಿಸುತ್ತಾರೆ ಎಂಬ ಹೆದರಿಕೆಯು ಇರಬೇಕು ಎಂದರು.
ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ, ಜಾನಪದ ಹಾಡುಗಳ ಮೂಲಕ ಮಕ್ಕಳಲ್ಲಿ ಸಂಸ್ಕಾರ ಮೂಡಿಸುತ್ತಿದ್ದ ಹಳೆಯ ಕಾಲವನ್ನು ನೆನದು ಇಂದು ಪಾಲಕರು ಶಿಕ್ಷಣ ನೀಡಬೇಕಾಗಿದೆ. ನಿತ್ಯ ಒಂದು ಗಂಟೆ ಮಕ್ಕಳ ಜೊತೆಗೆ ಪಾಲಕರು ಶಿಕ್ಷಣದ ಕಡೆ ಒಲವು ತೋರಿದಾಗ ಮಾತ್ರ ಶಿಕ್ಷಣಕ್ಕೆ ಮಹತ್ವ ಬರುತ್ತದೆ ಎಂದರು
ಮುಖ್ಯ ಅತಿಥಿಗಳಾದ ಮಾಜಿ ಜಿ.ಪಿ ಸದಸ್ಯರಾದ ಪರಮೇಶ್ವರ ಹೊಸಮನಿ, ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಗುರಿಯ ಮಹತ್ವವನ್ನು ತಿಳಿಸಿಕೊಟ್ಟರು.
ಶಿಕ್ಷಣ ತಜ್ಞ ಚೇತನ್ ಜೋಗಣ್ಣವರ ಮಾತನಾಡಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಮಕ್ಕಳ ಸವಾರ್ಂಗೀಣ ಅಭಿವೃದ್ಧಿಗೆ ಅಗತ್ಯ ಶಾಲೆಗಳು ಅವೆರಡರ್ಲಿ ಸಮತೋಲನವನ್ನು ಸಾಧಿಸಿ ಶಿಕ್ಷಕ ನೀಡಿದಾಗ ಶಿಕ್ಷನದ ಗುರಿ ಸಾಕಾರಗೊಳಿಸಲು ಸಾಧ್ಯ ಎಂದರು
ಲಯನ್ಸ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷೆ ಸುನೀತಾ ಹೊಸೂರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಕಾರ್ಯದರ್ಶಿ ಡಾ. ಶಿವಾ ಹೊಸೂರು ಕೆ ಎಲ್ ಇ ಆಸ್ಪತ್ರೆಯ ಆಡಳಿತಾಧಿಕಾರಿ ಡಾ ಅಲ್ಲಮ್ಮಪ್ರಭು ಕುಡಚಿ. ಡಾ ಮಹೇಶ ಹಳ್ಳೂರ. ಬಿಜೆಪಿ ಮುಖಂಡ ಮಹಾಂತೇಶ ಕುಡಚಿ. ಪುರಸಭೆ ಸದಸ್ಯ ಶಿವು ಚಂಡಕಿ. ಪತ್ರಕರ್ತ ಶಿವಾನಂದ ಮುಧೋಳ. ಸದಾಶಿವ ಮಾರಾಪೂರ. ಬಸವರಾಜ ಕರಣಿ. ಜೀನಪ್ಪ ಸಪ್ತಸಾಗರ. ಗುರುಸಿದ್ದಪ್ಪ ಕರ್ಕಿ.ಸುನೀಲ ಪತ್ತಾರ ವೇದಿಕೆಯ ಮೇಲಿದ್ದರು
ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜಾನಪದ ನೃತ್ಯ, ಭಕ್ತಿ ಗೀತೆ ನೃತ್ಯ, ದೇಶಭಕ್ತಿ ಗೀತೆಗಳ ನೃತ್ಯ ಹಾಗೂ ಕಿರು ನಾಟಕಗಳು ಪ್ರೇಕ್ಷಕರ ಮನಸೂರೆಗೊಂಡವು. ಪಾಲಕರು, ಶಿಕ್ಷಕ ವೃಂದ ಹಾಗೂ ಸಾರ್ವಜನಿಕರು ಇದ್ದರು
IN MUDALGI Latest Kannada News