ವೆಂಕಟಾಪುರದಲ್ಲಿ ಸರ್ವಧರ್ಮ ಸಂದೇಶ ಸಾರಿದ ಹೇಮರೆಡ್ಡಿ ಮಲ್ಲಮ್ಮ ಕುಂಭಮೇಳ
ಮೂಡಲಗಿ: ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಸಾದ್ವಿ ಶ್ರೀ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಉದ್ಘಾಟನೆ ಹಾಗೂ ಮೂತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭ ನಿಮಿತ್ಯವಾಗಿ ರವಿವಾರ ಜರುಗಿದ ಶ್ರೀ ಹೇಮರಡ್ಡಿ ಮಲ್ಲಮ್ಮ ಮೂರ್ತಿ ಮತ್ತು ದೇವಾಲಯದ ಕಳಸ ಮೇರವಣಿಗೆಯಲ್ಲಿ ಸರ್ವಧರ್ಮ ಸಂದೇಶ ಸಾರುವ ಶ್ರೀ ಹೇಮರಡ್ಡಿ ಮಲ್ಲಮ್ಮ ಬೃಹತ ಕುಂಭಮೇಳ ಜರುಗಿತು.
ರವಿವಾರ ಮುಂಜಾಣೆ ಶ್ರೀ ಹೇಮರಡ್ಡಿ ಮಲ್ಲಮ್ಮ ಮೂರ್ತಿ ಮತ್ತು ಕಳಸದ ಮೇರವಣಿಗೆ ನಿಮಿತ್ಯ ತಾಲೂಕಿನ ಯಾದವಾಡ ಗ್ರಾಮದಿಂದ ವೆಂಕಟಾಪೂರ ಗ್ರಾಮದವರಿಗೆ ಯುವಕರ ಬೃಹತ್ತ ಬೈಕ್ ಸವಾರಿ ನಡೆಯಿತು.
ನಂತರ ಗ್ರಾಮದಲ್ಲಿ ಶ್ರೀ ಹೇಮರಡ್ಡಿ ಮಲ್ಲಮ್ಮ ಮೂರ್ತಿ ಮತ್ತು ಕಳಸದ ಮೇರವಣಿಗೆಗೆ ನಾವಲಗಿಯ ಹಿರೇಮಠದ ಶ್ರೀವೇದಮೂರ್ತಿ ಶ್ರೀಶೈಲ್ ಮಹಾಸ್ವಾಮಿಜಿ ಪೂಜೆಸಲ್ಲಿಸಿ ಚಾಲನೆ ನೀಡಿದರು.
ಮೇರವಣಿಗೆಯು ಗ್ರಾಮದ ಸರ್ವಧರ್ಮದ ಮಹಿಳೆಯರ ಕುಂಭಮೇಳ, ಕರಡಿ ಮಜಲು, ಝಾಂಜಪಥಕ ಮತ್ತು ವಿವಿಧ ವಾಧ್ಯಮೇಳದೊಂದಿಗೆ ಗ್ರಾಮದ ವಿವಿಧ ರಸ್ತೆ ಮತ್ತು ಓಣಿಗಳ ಮುಖಾಂತ ದೇವಾಲಯದವರಿಗೆ ಸಡಗರ ಸಂಭ್ರಮದಿಂದ ಭವ್ಯ ನಡೆಯಿತು. ನಂತರ ಅನ್ನಪ್ರಸಾದ ಜರುಗಿತು.
ಮೇ.27 ರವರಿಗೆ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಅನ್ನ ಪ್ರಸಾದದೊಂದಿಗೆ ಸಂಜೆ 6 ಗಂಟೆಗೆ ವಿವಿಧ ಶ್ರೀಗಳ ಸಾನಿಧ್ಯದಲ್ಲಿ ಹೇಮರೆಡ್ಡಿ ಮಲ್ಲಮ್ಮ ಮತ್ತು ವೇಮನರ ಚರಿತ್ರೆ ಕುರಿತು ಪ್ರವಚನ ಜರುಗಲಿದೆ. ಮೇ.27ರಂದು ದೇವಾಲಯದ ಉದ್ಘಾಟನಾ ಸಮಾರಂಭ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಮತ್ತು ಗಣ್ಯ ಮಾನ್ಯರ ಉಪಸ್ಥಿತಿ ಜರುಗಲಿದೆ.
ಶ್ರೀ ಹೇಮರಡ್ಡಿ ಮಲ್ಲಮ್ಮ ಮೂರ್ತಿ ಮತ್ತು ದೇವಾಲಯದ ಕಳಸ ಮೇರವಣಿಗೆಯಲ್ಲಿ ಗ್ರಾಮದ ಶ್ರೀ ಹೇಮರೆಡ್ಡಿ ಮಲ್ಲಮ್ಮ ಸಮೀತಿ ಅಧ್ಯಕ್ಷ ಚಂದ್ರಶೇಖರ ಕೋಳಿಗುಡ್ಡ, ಉಪಾಧ್ಯಕ್ಷ ಸುಧಾಕರ ನಾಯಿಕ ಹಾಗೂ ಸಮಿತಿಯ ಸದಸ್ಯರು ಹಾಗೂ ಗ್ರಾಮದ ಸರ್ಮಧರ್ಮದ ಮುಖಂಡರು, ಗ್ರಾಮಸ್ಥರು ಭಾಗಿಯಾಗಿದರು