ಯಾದವಾಡದಲ್ಲಿ ಶ್ರೀ ದ್ಯಾಮವ್ವ ಮತ್ತು ಶ್ರೀ ದುರ್ಗಮ್ಮದೇವಿಯರ ಜಾತ್ರೆ ಆರಂಭ
inmudalgi
ಅಕ್ಟೋಬರ್ 11, 2023
Recent Posts, ತಾಲ್ಲೂಕು, ಬೆಳಗಾವಿ
ಯಾದವಾಡದಲ್ಲಿ ಶ್ರೀ ದ್ಯಾಮವ್ವ ಮತ್ತು ಶ್ರೀ ದುರ್ಗಮ್ಮದೇವಿಯರ ಜಾತ್ರೆ ಆರಂಭ
ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದಲ್ಲಿ ಹಲವು ವರ್ಷಗಳಿಂದ ನಡಯದೇ ಇರುವ ಶ್ರೀ ದ್ಯಾಮವ್ವದೇವಿ ಮತ್ತು ಶ್ರೀ ದುರ್ಗಮ್ಮದೇವಿಯರ ಅ.11ರಿಂದ 13ರವರೆಗೆ ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಪ್ರಥಮ ದಿನವಾದ ಬುಧವಾರದಂದು ಯುವಕರು ಮತ್ತು ಭಕ್ತರು ಬಂಡಾರದಲ್ಲಿ ಮಿಂದದ್ದೆರು.
ಬುಧವಾರದಂದು ಯಾದವಾಡ ಗ್ರಾಮದ ಸೀಮೆಯಲ್ಲಿ ದೇವಸ್ಥಾನದ ಅರ್ಚಕರು ಶ್ರೀ ದ್ಯಾಮವ್ವದೇವಿ ಮತ್ತು ಶ್ರೀ ದುರ್ಗಮ್ಮದೇವಿಯರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ನಂತರ ಗ್ರಾಮದ ಬಸವೇಶ್ವರ ವೃತ್ತದಿಂದ ಮಹಿಳೆಯರ ಕುಂಭ ಮೇಳ ಸಕಲ ವಾದ್ಯ ಮೇಳದೊಂದಿಗೆ ಶ್ರೀ ಬವೇಶ್ವರ ದೇವಸ್ಥಾನ ಮಾರ್ಗವಾಗಿ ಪೇಟೆ ರಸ್ತೆಯ ಮೂಲಕ ದೇವಸ್ಥಾನದವರಿಗೆ ಮೇರವಣಿಗೆಯೊಂದಿಗೆ ಅಪಾರ ಜನಸ್ತೋಮ ಮಧ್ಯೆ ದೇವರಗಳನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು.
ಮೇರವಣಿಗೆಯಲ್ಲಿ ಯುವಕರು ಶ್ರೀ ದ್ಯಾಮವ್ವದೇವಿ ಮತ್ತು ಶ್ರೀ ದುರ್ಗಮ್ಮದೇವಿ ಮೂರ್ತಿಗಳಿಗೆ ಬಂಡಾರ ಏರಚುತ್ತಾ ಡಿಜೆ ಧ್ವಣಿವರ್ಧಕಕ್ಕೆ ಕುಣಿದು ಕುಪ್ಪಳಿಸಿದರು.
ಮೇರವಣಿಗೆಯಲ್ಲಿ ದುರ್ಗಮುರಗಿಯರು ಲಡ್ಡು ಕಟೆದುಕೊಂಡು ಭಕ್ತಿ ಸೇವೆ ಸಲ್ಲಿಸಿದರು. ಗ್ರಾಮದ ತುಂಬೆಲ್ಲ ಬಂಡಾರಮಯವಾಗಿತು. ಮೇರವಣಿಗೆಯಲ್ಲಿ ಗ್ರಾ.ಪಂ ಜನಪ್ರತಿನಿಧಿಗಳು, ಗಣ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದರು.