ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ರವಿವಾರದಂದು ಜರುಗಿದ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಜೋಡೆತ್ತುಗಳು ಚಿನ್ನಾಟವಾಡುತ್ತಾ ಮಿಂಚಿನತೆ ಓಡಿದ್ದೇ ಓಡಿದ್ದು, ಅಕ್ಕಪಕ್ಕಪದಲ್ಲಿ ನಿಂತಿದ್ದವರು ಹರ್ಷೋದ್ವಾರದೊಂದಿಗೆ ಮನ ರಂಜಿಸಿತು.
ಸ್ಪರ್ಧೆಯಲ್ಲಿ 40-50 ಜೋಡೆತ್ತುಗಳು ಭಾಗವಹಿಸಿದವು. ಸುತ್ತಲಿನ ಗ್ರಾಮಗಳಷ್ಟೇ ಅಲ್ಲದೆ ವಿವಿಧ ಜಿಲ್ಲೆಗಳಿಂದ ಸುಮಾರು 35ಕ್ಕೂ ಜೋಡೆತ್ತುಗಳ ಜೊತೆಗೆ ರೈತರು ಭಾಗವಹಿಸಿದರು. ಎಲ್ಲೆಡೆ ಹಿಜಾಬ್ ಮತ್ತು ಹಿಲಾಲ ವಿವಾದದ ನಡುವೆ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮಾಜದಿಂದ ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ತಂಪು ಪಾನಿ ನೀಡುವ ಮೂಲಕ ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದ್ದು ನಿಜಕ್ಕೂ ಎಲ್ಲರ ಕಣ್ಣು ತೆರೆಸುವಂತಾಗಿತ್ತು. ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರಾ ಮಹೋತ್ಸವುದಲ್ಲಿ ಹಿಂದೂಗಳು ಅಷ್ಟೇ ಅಲ್ಲದೆ ಮುಸ್ಲಿಂ ಸಮಾಜದ ಜನರು ಸೇರಿಕೊಂಡಿದ್ದು ವಿಶೇಷವಾಗಿತ್ತು.
ರವಿವಾರ ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲೂ ಜಾತಿ, ಧರ್ಮ ಭೇದ ಮರೆತು ಸಾವಿರಾರು ಜನರು ಪಾಲ್ಗೊಂಡು ಭಾವೈಕ್ಯತೆ ಮೆರೆದರು. ಹಿಂದೂ ಮುಸ್ಲಿಂ ಎಂಬ ಭೇದ ಭಾವ ಸೃಷ್ಟಿಯಾಗಿರುವ ಇತ್ತೀಚಿನ ದಿನಗಳಲ್ಲಿ ಯಾದವಾಡ ಗ್ರಾಮದಲ್ಲಿ ಜರುಗಿದ ಜಾತ್ರಾ ಮಹೋತ್ಸ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯ ಮಾಡಿದೆ. ಧರ್ಮ ಧರ್ಮಗಳಿಗಾಗಿ ಬಡಿದಾಡುವ ಈ ಕಾಲದಲ್ಲೂ ಇಲ್ಲಿನ ಹಿಂದೂಗಳು ಸೌಹಾರ್ದಯುತವಾಗಿ ಮುಸ್ಲಿಂ ಜನರನ್ನು ಸೇರಿಸಿಕೊಂಡು, ಮುಸ್ಲಿಂ ಜನರು ಕೂಡ ಹಿಂದೂಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವನೊಬ್ಬನಾದರೂ ನಾಮ ಹಲವು ಎಂಬುದನ್ನು ತೋರಿಸಿಕೊಟ್ಟರು.
ಜಾತ್ರೆಯಲ್ಲಿ ವಿವಿಧ ತಳಿಗಳ ಎತ್ತುಗಳನ್ನು ಮಾರಾಟ ಮಾಡಲು ಪರಸ್ಥಳಗಳಿಂದ ರೈತರು ಆಗಮಿಸಿದರು. ಚೌಕಿಮಠದ ಪ.ಪೂ ಶ್ರೀ ಶಿವಯೋಗಿ ದೇವರು ಅವರು ಅನ್ನಪೂರ್ಣೇಶ್ವರಿಗೆ ಪೂಜೆ ಸಲ್ಲಿಸಿ ಅನ್ನದಾನಕ್ಕೆ ಚಾಲನೆ ನೀಡದರು.
ಈ ಸಂದರ್ಭದಲ್ಲಿ ಜಾತ್ರಾ ಕಮೀಟಿಯ ಅಧ್ಯಕ್ಷ ಶಿವಗೌಡ ನ್ಯಾಮಗೌಡರ್, ಯಲ್ಲಪ್ಪಗೌಡ ನ್ಯಾಮಗೌಡರ್, ಚೆನ್ನಪ್ಪ ಕೆಜೋಳ, ಚರಂತಯ್ಯ ಮಳ್ಳಿಮಠ, ತುಳಜಪ್ಪ ಜಾಧವ್, ಕಲ್ಮೇಶ ಗಾಣಗಿ, ಸುನೀಲ ನ್ಯಾಮಗೌಡರ್, ಮೋಲಾನಮಲಿಕ್ ಜಮಾದರ, ಮೈಬುಬ ಮುಲ್ತಾನಿ, ಹಾದಿಶಿಂಧೆ ಮೋಮಿನ, ರಾಜೇಸಾಬ ಕೇಮಲಾಪೂರ, ದುಂಡಪ್ಪ ಕಂಕನೋಡಿ, ಅಸ್ಲಂ ಜಾರೆ, ವೀರಪಾಕ್ಷ ಕಟ್ಟಿ, ಪಕೀರಪ್ಪ ಡೊಮಾಳೆ, ರಮೇಶ ಸಾವಳಿ, ವೆಂಕಟೇಶ ಕೆರಿ, ಗೋಪಾಲ ಕಾಗವಾಡ, ಹಣಮಂತ ಚಿಕ್ಕೆಗೌಡ, ಸುನೀಲ ಕೆಜೋಳ, ಗುರುನಾಥ ರಾಮರ್ದುಗ, ಹಣಮಂತ ಬಿಲಕುಂದಿ ಹಾಗೂ ಸಾವರ್ಜನಿಕರು ಉಪಸ್ಥಿತರಿದ್ದರು.