Breaking News
Home / ಬೆಳಗಾವಿ / ದಾಲ್ಮಿಯ ಕಾರ್ಖಾನೆಯಿಂದ ಹೊಲಿಗೆ ಯಂತ್ರಗಳ ವಿತರಣೆ

ದಾಲ್ಮಿಯ ಕಾರ್ಖಾನೆಯಿಂದ ಹೊಲಿಗೆ ಯಂತ್ರಗಳ ವಿತರಣೆ

Spread the love

ದಾಲ್ಮಿಯ ಕಾರ್ಖಾನೆಯಿಂದ ಹೊಲಿಗೆ ಯಂತ್ರಗಳ ವಿತರಣೆ

ಮೂಡಲಗಿ: ಯಾದವಾಡ ದಾಲ್ಮಿಯ ಕಾರ್ಖಾನೆಯು ಸಿ. ಎಸ್. ಆರ್ ಅಡಿಯಲ್ಲಿ ರೈತರಿಗೆ, ಮಹಿಳೆಯರಿಗೆ ಹಾಗೂ ಯುವಕರಿಗೆ ಸುತ್ತಮುತ್ತಲಿನ ಗ್ರಾಮದ ಜನರ ಜೀವನೋಪಾಯವನ್ನು ಅಭಿವೃದ್ಧಿಪಡಿಸಲು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿರುವುದನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದರು ದಾಲ್ಮಿಯ ಸಿಮೆಂಟ್ ಕಾರ್ಖಾನೆ ಬೆಳಗಾವಿ ವಿಭಾಗದ ಮುಖ್ಯಸ್ಥ ಪ್ರಭಾತ್‍ಕುಮಾರ್ ಸಿಂಗ್ ಹೇಳಿದರು.
ಅವರು ತಾಲೂಕಿನ ಯಾದವಾಡ ಗ್ರಾಮದ ದಾಲ್ಮಿಯ ಸಿಮೆಂಟ್ ಕಾರ್ಖಾನೆ ವತಿಯಿಂದ ಸ್ವ-ಸಹಾಯ ಸಂಘದ ಸದಸ್ಯರಿಗೆ ರೀಯಾಯಿತಿ ದರದಲ್ಲಿ ಸೂಮಾರು 70 ಹೊಲಿಗೆ ಯಂತ್ರಗಳ ವಿತರಣೆ ಹಾಗೂ ಕಾಮನಕಟ್ಟಿ ಗ್ರಾಮ ಪರಿವರ್ತನಾ ಸ್ವಸಹಾಯ ಸಂಘಗಳ ಒಕ್ಕೂಟಕ್ಕೆ ಧನ ಸಹಾಯದ 4 ಲಕ್ಷ ರೂಪಾಯಿಗಳ ಚೆಕ್ ವಿತರಣೆರಣಾ ಸಮಾರಂಭದಲ್ಲಿ ಮಾತನಾಡಿ, ದಾಲ್ಮೀಯಾ ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮಗಳಾದ ಯಾದವಾಡ, ಕಾಮನಕಟ್ಟಿ, ಕೊಪದಟ್ಟಿ, ಗುಲಗಂಜಿಕೊಪ್ಪ, ಬುದ್ನಿಖುರ್ದ, ತೊಂಡಿಕಟ್ಟಿ ಮತ್ತು ಕುನ್ನಾಳ ಗ್ರಾಮದ ಮಹಿಳೆಯರು ಮಹಿಳೆಯರು ಸ್ವಂತ ಉದ್ಯೋಗ ಮಾಡಲು ಕಾರ್ಖಾನೆಯ ಸಿಎಸ್‍ಆರ್ ಅಡಿಯಲ್ಲಿ 70 ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ಹಾಗೂ ಆರ್ಥಿಕ ನೆರವಿಗಾಗಿ ಕಾಮನಕಟ್ಟಿ ಗ್ರಾಮ ಪರಿವರ್ತನಾ ಸ್ವ-ಸಹಾಯ ಸಂಘಗಳ ಒಕ್ಕೂಟಕ್ಕೆ 4 ಲಕ್ಷ ರೂಪಾಯಿಗಳ ಧನಸಹಾಯವನ್ನು ಎಲ್ಲ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕೆಂದರು ಬೆಳಗಾವಿಯ ಸ್ಪೂರ್ತಿ ಮಹಿಳಾ ಮಂಡಳದ ಅಧ್ಯಕ್ಷೆ ವಂದನಾಸಿಂಗ್ ಮಾತನಾಡಿ, ಮಹಿಳೆಯರ ಜೀವನೋಪಾಯವನ್ನು ಅಭಿವೃದ್ಧಿಪಡಿಸಲು ಸಿ. ಎಸ್. ಆರ್ ಅಡಿಯಲ್ಲಿ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ, ಸ್ವ ಉದ್ಯೋಗಕ್ಕೆ, ಸ್ವ ಸಹಾಯ ಸಂಘಗಳ ಮೂಲಕ ಸಹಾಯ ಹಾಗೂ ಸ್ವಂತ ಉದ್ಯೋಗ ಮಾಡಲು ಸಹಾಯ ಮಾಡಲಾಗುತ್ತಿದೆ. ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದರು.

ಮೂಡಲಗಿ: ಯಾದವಾಡ ದಾಲ್ಮಿಯ ಸಿಮೆಂಟ್ ಕಾರ್ಖಾನೆಯಿಂದ ಕಾಮನಕಟ್ಟಿ ಗ್ರಾಮ ಪರಿವರ್ತನಾ ಸ್ವಸಹಾಯ ಸಂಘಗಳ ಒಕ್ಕೂಟಕ್ಕೆ ಐದು ಲಕ್ಷ ರೂಗಳ ಧನ ಸಹಾಯದ ಚೆಕ್‍ನ್ನು ದಾಲ್ಮಿಯ ಸಿಮೆಂಟ್ ಕಾರ್ಖಾನೆ ಬೆಳಗಾವಿ ವಿಭಾಗದ ಮುಖ್ಯಸ್ಥ ಪ್ರಭಾತ್‍ಕುಮಾರ್ ಸಿಂಗ್ ವಿತರಿಸಿದರು.

ಈ ಸಮಯದಲ್ಲಿ ಕಾರ್ಖಾನೆಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಮನೀಶ್‍ಕುಮಾರ್ ಮಹೇಶ್ವ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರಾದ ಅವದೆಶ್‍ಕುಮಾರ್, ಜಯಶಂಕರ್ ತಿವಾರಿ, ಅರವಿಂದ್‍ಕುಮಾರ್ ಸಿಂಗ್, ಗೋಲಪನಾಥ್, ಸಮೀರ್‍ಕುಮಾರ್ ಅಗರ್ವಾಲ್, ಹಾಗೂ ಕಾರ್ಖಾನೆಯ ಅಧಿಕಾರಿಗಳಾದ ಕಾಚಿರಾಮ್ ದಯಾಲ್, ಅಜಿತ್‍ಸಿಂಗ್ ರಾಯ್, ವಿಜಯ್ Àುಮಾರ್ ತಿವಾರಿ, ಈರಸಂಗಯ್ಯ ಬಾಗೋಜಿಮಠ, ಶಶಿಕಾಂತ್ ಹಿರೇಕೊಡಿ, ಲೋಕಣ್ಣ ನಂದಗಾವ್ ಹಾಗೂ ಸ್ಪೂರ್ತಿ ಲೇಡಿಸ್ ಕ್ಲಬ್ ನ ಸದಸ್ಯರು ಸಿ.ಎಸ್.ಆರ್ ವಿಭಾಗದ ಅಧಿಕಾರಿಗಳು ಸುತ್ತಮುತ್ತಲಿನ ಗ್ರಾಮದ ಸ್ವ-ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
ಡಾ. ನೀಲಕಂಠಗೌಡ ಅವರು ಸ್ವಾಗತಿಸಿ ನಿರೂಪಿಸಿದರು, ರಾಮಣ್ಣಗೌಡ ಬಿರಾದರ ವಂದಿಸಿದರು.

 


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ