Breaking News
Home / Recent Posts / ಜೈವಿಕ ರಸಗೊಬ್ಬರದ ಮಹತ್ವ ಕುರಿತು ರೈತರಿಗೆ ಮಾಹಿತಿ ಕಾರ್ಯಕ್ರಮ

ಜೈವಿಕ ರಸಗೊಬ್ಬರದ ಮಹತ್ವ ಕುರಿತು ರೈತರಿಗೆ ಮಾಹಿತಿ ಕಾರ್ಯಕ್ರಮ

Spread the love

 

ಮೂಡಲಗಿ ಆ.22 : ಮಣ್ಣಿನ ಫಲವತ್ತತೆ ಹೆಚ್ಚುವುದರಿಂದ, ಬೆಳೆಯ ಹೆಚ್ಚಿನ ಇಳುವರಿ ಪಡೆಯಬಹುದು. ರೈತರು ರಾಸಾಯನಿಕ ಗೊಬ್ಬರಗಳಿಗೆ ಮಾರುಹೋಗದೆ ಜೈವಿಕ ರಸಗೊಬ್ಬರಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕೆಂದು ಕೃಷಿ ಸಂಯೋಜಕರಾದಂತ ಸಚಿನ್ ಕಬ್ಬೂರ ರವರು ರೈತರಿಗೆ ಕಿವಿಮಾತು ಹೇಳಿದರು.


ರವಿವಾರದಂದು ತಾಲೂಕಿನ ಯಾದವಾಡ ಗ್ರಾಮದ ಮುಖಂಡರಾದ ಹಣಮಂತಗೌಡ ರಾಮನಗೌಡ ಪಾಟೀಲರ ತೋಟದಲ್ಲಿ ಜೈವಿಕ ರಸಗೊಬ್ಬರದ ಮಹತ್ವ ಕುರಿತು ರೈತರಿಗೆ ಮಾಹಿತಿ ಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಿನ ರೈತರು ತ್ವರಿತ ಇಳುವರಿಗೋಸ್ಕರ ಬೆಳೆಗಳಿಗೆ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿದ್ದು, ಮಣ್ಣಿನ ಫಲವತ್ತದೆ ಕಡೆಗೆ ಗಮನ ಹರಿಸುತ್ತಿಲ್ಲ.ಇದರಿಂದ ಬರುವ ದಿನಗಳಲ್ಲಿ ಭೂಮಿ ಬಹುಬೇಗ ಬರಡಾಗಲು ಕಾರಣವಾಗುತ್ತದೆ, ಅದೇ ಜೈವಿಕ ರಸಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನಲ್ಲಿ ಎರೆಹುಳು ಸಂಖ್ಯೆ ಹೆಚ್ಚಿ, ಬೆಳೆಗಳಿಗೆ ಯಾವುದೇ ರೋಗ ಭಾದಿಸದೆ ಇಳುವರಿ ಕೂಡ ದುಪ್ಪಟ್ಟು ಆಗುವುದು, ಇದಕ್ಕೆ ಹಣಮಂತಗೌಡ ಪಾಟೀಲರು ಎಲ್ಲ ರೈತರಿಗೆ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ಮಾಡಿದರು.
ಯಾದವಾಡ ಗ್ರಾಮದ ಮುಖಂಡರು ಹಾಗೂ ಯುವ ರೈತರಾದಂತ, ಹಣಮಂತಗೌಡ ಪಾಟೀಲರು ನೆರೆದಿದ್ದ ನೂರಾರು ರೈತರನ್ನು ಉದ್ದೇಶಿಸಿ ಮಾತನಾಡುತ್ತಾ, ನಾನು ಕೂಡ ಮೊದಲು ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಸುತ್ತಿದ್ದೆ ಆದರೆ ಕಳೆದ ಒಂದು ವರ್ಷದಿಂದ ಜೈವಿಕ ರಸಗೊಬ್ಬರದ ಮಹತ್ವ ಅರಿತು ಬಳಸುತ್ತಿದ್ದರಿಂದ, ಎಕರೆಗೆ ಮೊದಲಿಗಿಂತ ಇಳುವರಿ ದುಪ್ಪಟ್ಟುವಾಗಿದ್ದು ಕಬ್ಬು ಬೆಳೆಯ ತೂಕ ಹಾಗೂ ಎತ್ತರ ಹೆಚ್ಚಿದೆ ಎಂದರು. ಕೃಷಿ ಸಂಯೋಜಕರ ಮಾರ್ಗದರ್ಶನದಲ್ಲಿ ಜೀವಾಮೃತ,ಗೋಕೃಪಾಮೃತ,ಡಬ್ಲುಡಿಸಿ(ಡಿಕಾಂಪೋಸರ್) ದಂತಹ ಜೈವಿಕ ರಸ ಗೊಬ್ಬರಗಳನ್ನು ಸರಿ ಪ್ರಮಾಣದಲ್ಲಿ ನನ್ನ 40 ಎಕರೆ ಜಮೀನಿನಲ್ಲಿ ಬೆಳೆದ ಬೆಳೆಗಳಿಗೆ ಹಾಕಿದ್ದು, ಈಗ ಹೆಚ್ಚಿನ ಇಳುವರಿ ಬಂದಿದ್ದರಿಂದ ಸಂತೋಷವೆನಿಸುತ್ತಿದೆ, ರೈತರು ಹೆಚ್ಚಿನ ಮಾಹಿತಿಗಾಗಿ ನನ್ನ ಮೊಬೈಲ್ ಸಂಖ್ಯೆ 9741026662 ಸಂಪರ್ಕಿಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಸಂಯೋಜಕರಾದ ಪ್ರಸನ್ನ ಡಿ.ಎ, ಯತೀಶ್ ಡಿ.ಎ, ಶಾಮನೂರು ಸಕ್ಕರೆ ಕಾರ್ಖಾನೆ ಐಸಿಪಿಎಲ್ ನ ಎಜಿಎಂ ಆದ ಎಸ್.ಬಿ ಗುಣದಾಳ, ಕೇನ್ ಆಫೀಸರ್ ಜಿ.ಎಂ ಚಿಪ್ಪಲಕಟ್ಟಿ, ಸುಪರವೈಸರ್ ಎಂ.ಜಿ ಮಠಪತಿ, ಸುಪರವೈಸರ್ ನಾರಾಯಣ ಸಾರವಾಡ, ಕೇನ್ ಸರ್ವೇಯರ್ ಎನ್.ವಿ ಸರ್ವದ ಹಾಗೂ ಗ್ರಾಮದ ಹಿರಿಯ ರೈತರಾದ ರಾಮನಗೌಡ ಪಾಟೀಲ್ ಸೇರಿದಂತೆ ಸುತ್ತಮುತ್ತ ಗ್ರಾಮದ ನೂರಾರು ರೈತರು ಪಾಲ್ಗೊಂಡು ಮಾಹಿತಿ ಪಡೆದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ