ಯಾದವಾಡದಲ್ಲಿ ರಾಜ್ಯೋತ್ಸವ ನಿಮಿತ್ಯ ಸಾಂಸ್ಕøತಿಕ ಕಾರ್ಯಕ್ರಮ
ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಘಟಕ ಮತ್ತು ಮೂಡಲಗಿ ತಾಲೂಕಾ ಕನ್ನಡ ರಾಜ್ಯೋತ್ಸವ ಸಮೀತಿ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿವಿಧ ಕಲಾವಿದರಿಂದ ಸಾಂಸ್ಕøತಿ ಕಾರ್ಯಕ್ರಮ ನ.2 ರಂದು ಸಂಜೆ 5 ಗಂಟೆಗೆ ಯಾದವಾಡ ಗ್ರಾಮದ ಶ್ರೀ ಘಟಗಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಜರುಗಲಿದೆ ಎಂದು ಯಾದವಾಡ ಗ್ರಾ.ಪಂ ಸದಸ್ಯ ಹಾಗೂ ವೇದಿಕೆ ಜಿಲ್ಲಾ ಸಂಚಾಲಕ ಕಲ್ಮೇಶ ಗಾಣಿಗೇರ ತಿಳಿಸಿದಾರೆ.
ಸಮಾರಂಭದ ದಿವ್ಯ ಸಾನಿಧ್ಯವನ್ನು ಯಾದವಾಡ ಚೌಕಿಮಠದ ಶ್ರೀ ಶಿವಯೋಗಿ ದೇವರು, ಸಾನಿಧ್ಯವನ್ನು ಕೋಲಾರದ ಶ್ರೀ ಕಲ್ಲಿನಾಥ ದೇವರು, ಹುಲಜಂತಿ ಪೀಠದ ಶ್ರೀ ಮಾಳಿಂಗರಾಯ ಮಹಾರಾಜರು, ಯಾದವಾಡ ಪತ್ರಿಮಠದ ಶ್ರೀ ಶಿವಾನಂದ ಮಹಾರಾಜರು ವಹಿಸುವರು. ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸುವರು, ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಶಿವಪ್ಪಗೌಡ ನ್ಯಾಮಗೌಡ ಅಧ್ಯಕ್ಷತೆ ವಹಿಸುವರು, ಸಂಸದ ಈರಣ್ಣಾ ಕಡಾಡಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಾಂಗ್ರೇಸ್ ಮುಖಂಡ ಅರವಿಂದ ದಳವಾಯಿ, ಜೆಡಿಎಸ್ ಮುಖಂಡ ಭಿಮಪ್ಪ ಗಡಾದ ಜ್ಯೋತಿ ಬೆಳಗಿಸುವರು, ರಾಜಕುಮಾರ ಟೋಪನ್ನವರ, ಅನಂತರಾವ ಘೋರ್ಪಡೆ, ಶ್ರೀಶೈಲ್ ಭಜಂತ್ರಿ, ಡಾ.ಶಿವನಗೌಡ ಪಾಟೀಲ, ಬಸವರಾಜ ಭೂತಾಳಿ ಧ್ವಜಾರೋಹಣ ನೆರವೇರಿಸುವರು ಮತ್ತು ಮುಖ್ಯ ಅತಿಥಿಗಳಾಗಿ ವಿವಿಧ ಮುಖಂಡರ, ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತಿತರರು ಭಾಗವಹಿಸುವರು ಎಂದು ಸಂಘಟಕರು ತಿಳಿಸಿದಾರೆ.