Breaking News
Home / Recent Posts / ಯಾದವಾಡ: ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ರಥೋತ್ಸವ

ಯಾದವಾಡ: ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ರಥೋತ್ಸವ

Spread the love

ಯಾದವಾಡ: ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ರಥೋತ್ಸವ

ಮೂಡಲಗಿ: ತಾಲೂಕಿನ ಯಾದವಾಡದಲ್ಲಿ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರಾ ಮಹೋತ್ಸವು ಈ ವರ್ಷ ಏ.2 ರಿಂದ 12 ರವರಿಗೆ ಜರುಗುತ್ತಿರುವ ನಿಮಿತ್ಯ ಗುರುವಾರದಂದು ಚೌಕಿಮಠದ ಪ.ಪೂ ಶ್ರೀ ಶಿವಯೋಗಿ ದೇವರು ಸಾನಿಧ್ಯದಲ್ಲಿ ಹಾಗೂ ಶ್ರೀ ಘಟಗಿ ಬಸವೇಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ಆಶ್ರಯದಲ್ಲಿ ಸಡಗರ ಸಂಭ್ರಮದಿಂದ ಅಪಾರ ಜನಸ್ತೋಮದ ಜಯಘೋಷಣೆಯಲ್ಲಿ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ರಥೋತ್ಸವ ಜರುಗಿತು.
ಗುರುವಾರದಂದು ಯಾದವಾಡ ಕ್ಷೇತ್ರಾಧಿಪತಿ ಶ್ರೀ ಚೌಕೇಶ್ವರ ಹಾಗೂ ಶ್ರೀ ಘಟ್ಟಗಿ ಬಸವೇಶ್ವರ ಮೂರ್ತಿಗಳಿಗೆ ವಿಷೇಶ ಅಭಿಷೇಕ ಮತ್ತು ಪೂಜೆ ಹಾಗೂ ಹೂ ಪುಷ್ಪಗಳಿಂದ ಶೃಂಗರಿಸಾಲ್ಲಾಗಿತು.
ಸಂಜೆ ಯಾದವಾಡ ಗ್ರಾಮದ ಚೌಕೇಶ್ವರ ಮಂದಿರದಿಂದ ಬಸ್ ನಿಲ್ದಾನ ಹತ್ತಿರದ ಹೊನ್ನಮ್ಮ ಪಾದಗಟ್ಟೆಯವರಿಗೆ ಮತ್ತು ಬಸವೇಶ್ವರ ದೇವಸ್ಥಾನದವರಿಗೆ ಶ್ರೀ ಚೌಕೇಶ್ವರ ರಥೋತ್ಸವ ಜರುಗಿತು ನಂತರ ಘಟಗಿ ಬಸವೇಶ್ವರ ದೇವಸ್ಥಾನ ಹತ್ತಿರ ತಳಿಲು ತೋರಣ, ಬೃಹತ್ತಕಾರ ರುದ್ರಾಕ್ಷಿ ಹಾಗೂ ಹೂ ಮಾಲೆಗಳಿಂದ ಶೃಂಗರಿಸಿದ ಶ್ರೀ ಘಟಗಿ ಬಸವೇಶ್ವರ ರಥೋತ್ಸವಕ್ಕೆ ಶ್ರೀಗಳು ಪೂಜೆ ಸಲ್ಲಿಸಿದ ನಂತರ ಅಪಾರ ಜನಸ್ತೋಮದ ಜಯಘೋಷಣೆ ಮಧ್ಯೆದಲ್ಲಿ ಶ್ರೀ ಘಟಗಿ ಬಸವೇಶ್ವರ ರಥೋತ್ಸವ ಬಸವನ ಕಟ್ಟೆ ವರಿಗೆ ಸಾಗಿ ಮರಳಿ ದೇವಸ್ಥಾನಕ್ಕೆ ಆಗಮಿಸಿತ್ತು.
ಭಕ್ತರು ರಥೋತ್ಸವಕ್ಕೆ ಬಾಳೆ ಹಣ್ಣು, ಬೆಂಡು-ಬೆತ್ತಾಸು, ಕಾರಿಕು, ತೆಂಗಿನಕಾಯಿ ಹಾರಿಸಿ ತಮ್ಮ ಹರಕೆಯನ್ನು ತಿರಿಸಿ ಪುನಿತರಾದರು. ರಥೋತ್ಸವದಲ್ಲಿ ಝಾಂಜ ಪಥಕ, ಕರಡಿ ಮೇಳಗಳು ಮೇರಗು ನೀಡಿದವು.
ಈ ಸಂಧರ್ಭದಲ್ಲಿ ಜಾತ್ರಾ ಕಮೀಟಿ ಪದಾಧಿಕಾರಿಗಳು ಹಾಗೂ ಯಾದವಾಡ, ಕೊಪ್ಪದಟ್ಟಿ, ಕಾಮನಕಟ್ಟಿ, ಗಿರಿಸಾಗರ, ಗುಲಗೋಜಿಕೊಪ್ಪ, ಕುರಬಟ್ಟಿ, ಮಾನೋಮ್ಮಿ ಸೇರಿದಂತೆ ವಿವಿಧ ಜಿಲ್ಲೆಗಳ ಭಕ್ತರು ಪಾಲ್ಗೊಂಡಿದರು.


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ