*ಯಾದವಾಡದಲ್ಲಿ ಒಂದು ನಿಮಿಷದ ಬಂಡಿ ಸ್ಫರ್ಧೆ, ಹಲಗಲಿ ಬಂಡಿ ಪ್ರಥಮ*
ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರೆಯ ನಿಮಿತ್ಯವಾಗಿ ರವಿವಾರದಂದು ಜರುಗಿದ ಜೋಡೆತ್ತಿನ ಒಂದು ನಿಮಿಷ ಗಾಡಿ ಓಟದ ಸ್ಪರ್ಧೆಯಲ್ಲಿ ಜೋಡೆತ್ತುಗಳು ಚಿನ್ನಾಟವಾಡುತ್ತಾ ಮಿಂಚಿನತೆ ಓಡಿದ್ದೇ ಓಡಿದ್ದು ಕಂಡ ಜನರ ಹರ್ಷೋದ್ಗಾರದೊಂದಿಗೆ ಮನ ರಂಜಿಸಿತು.
ಒಂದು ನಿಮಿಷ ಗಾಡಿ ಓಟದ ಸ್ಪರ್ಧೆಯಲ್ಲಿ ಸುಮಾರು ೨೬ ಬಂಡಿಗಳು ಭಾಗಹಿಸಿದವು. ಸ್ಪರ್ಧೆಯಲ್ಲಿ ಹಲಗಲಿಯ ನಾಗಲಿಂಗೇಶ್ವರ ಪ್ರಸನ್ ಎತ್ತುಗಳು ಪ್ರಥಮ ಸ್ಥಾನ, ಮರಿಕಟ್ಟಿಯ ಜೈ ಹನುಮಾನ ಪ್ರಸನ್ ಎತ್ತುಗಳು ದ್ವಿತೀಯ ಸ್ಥಾನ, ನಾಗರಾಳದ ಜೈ ಹನುಮಾನ ಪ್ರಸನ್ ಎತ್ತುಗಳು ತೃತೀಯ ಸ್ಥಾನ, ಗೋರಬಾಳದ ಗ್ರಾಮದೇವಿ ಪ್ರಸನ್ ಎತ್ತುಗಳು ಚತುರ್ಥಸ್ಥಾನ, ಇಟ್ಟಾಳದ ಬೀರೇಶ್ವರ ಎತ್ತುಗಳು ಐದನೇ ಸ್ಥಾನ, ಉದಗಟ್ಟಿಯ ರಾಜು ಪೂಜೇರಿ ಎತ್ತುಗಳು ಆರನೇ ಸ್ಥಾನ ಮತ್ತು ಲಕ್ಷ್ಮೀ ದೇವಿ ಪ್ರಸನ್ ಎತ್ತುಗಳು ಏಳನೇ ಸ್ಥಾನ, ಹೂಲಿಕಟ್ಟಿಯ ಮಾರುತೇಶ್ವರ ಪ್ರಸನ್ ಎತ್ತುಗಳು ಎಂಟನೇ ಸ್ಥಾನ, ತೇರದಾಳದ ಪ್ರಭುಲಿಂಗೇಶ್ವರ ಪ್ರಸನ್ ಎತ್ತುಗಳು ಒಂಬತ್ತನೇ ಸ್ಥಾನ, ನೆಗನಾಳದ ಮಹಾಲಿಂಗೇಶ್ವರ ಪ್ರಸನ್ ಎತ್ತುಗಳು ಹತ್ತನೇ ಸ್ಥಾನ ಪಡೆದುಕೊಂಡವು.
ಬಾರಿ ಬಿಸಿಲಿನಲ್ಲಿ ಜೋಡೆತ್ತಿನ ಒಂದು ನಿಮಿಷ ಗಾಡಿ ಓಟದ ಸ್ಪರ್ಧೆಯನ್ನು ವೀಕ್ಷಿಸಲು ಆಗಮಿಸಿ ಜನರಿಗೆ ಯಾದವಾಡ ಗ್ರಾಮದ ಶ್ರೀ ಶ್ರೀಶೈಲ್ ಮಲ್ಲಿಕಾರ್ಜುನ ಪಾದಾಯಾತ್ರಾ ಸೇವಾ ಸಮಿತಿಯವರು ಸಾವಿರಾರು ಜನರಿಗೆ ತಾಂಪಾದ ಮೋಸರು-ಅವಲ್ಲಕ್ಕಿ ವಿತರಿಸಿದರು.
ಜಾತ್ರಾ ಕಮೀಟಿಯ ಪದಾಧಿಕಾರಿಗಳು ಮತ್ತು ಬಹುಮಾನ ನೀಡಿದವರು ಸ್ಪರ್ಧೆಗೆ ಚಾಲನೆ ನೀಡಿದರು.