Breaking News
Home / Uncategorized / ನ.28ಕ್ಕೆ ಸರ್ಕಾರಿ ನೌಕರರ ಸಂಘದ ತಾಲೂಕಾ ಘಟಕದ ಚುನಾವಣೆ

ನ.28ಕ್ಕೆ ಸರ್ಕಾರಿ ನೌಕರರ ಸಂಘದ ತಾಲೂಕಾ ಘಟಕದ ಚುನಾವಣೆ

Spread the love

 

ಮೂಡಲಗಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮೂಡಲಗಿ ತಾಲೂಕಾ ಘಟಕದ 2024- 29ನೇ ಅವಧಿಗೆ ವಿವಿಧ ಇಲಾಖೆಯ ಒಟ್ಟು 24 ಸದಸ್ಯರ ಆಯ್ಕೆಗೆ ಚುನಾವಣಾ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ವಡೇರಟ್ಟಿ ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಶಿವಾನಂದ ಗುಡಸಿ ಪತ್ರಿಕಾ ಪ್ರಕಣೆಯ ಮೂಲಕ ತಿಳಿಸಿದ್ದಾರೆ.
ರಾಜ್ಯ ಚುನಾವಣಾಧಿಕಾರಿಗಳ ಅಧಿಸೂಚನೆ ಅನ್ವಯ ಚುನಾವಣಾ ವೇಳಾಪಟ್ಟಿ ನಿಗದಿಪಡಿಸಲಾಗಿದೆ. ತಾಲೂಕು
ಶಾಖೆಯ ನಿರ್ದೇಶಕರ ಸ್ಥಾನದ ಚುನಾವಣೆಗಳು 2024ರ ಅಕ್ಟೋಬರ್ 9 ರಿಂದ 28ರ ವರೆಗೆ ನಿಗದಿಪಡಿಸಲಾಗಿದ್ದು, ತಾಲೂಕು ನಿರ್ದೇಶಕರ ಸ್ನಾನಕ್ಕೆ ಅ. 9ರಿಂದ 18ರ ವರೆಗೆ ನಾಮಪತ್ರ ಸಲ್ಲಿಸಲು ನಿಗದಿಪಡಿಸಲಾಗಿದೆ.
ಅ.19 ರಂದು ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನೆ ಹೆಸರುಗಳನ್ನು ಪ್ರಕಟಿಸಲಾಗುವುದು. ಉಮೇದುವಾರಿಕೆ ಹಿಂಪಡೆಯಲು ಅ.21ಕೊನೆಯ ದಿನವಾಗಿದು. ಅವಶ್ಯಕತೆ ಬಂದಲ್ಲಿ ದಿನಾಂಕ : 28/10/2024 ರಂದು ಮುಂಜಾನೆ 9-00 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ಮತದಾನ ನಡೆಸಲಾಗುವುದು ಹಾಗೂ ಅಂದು ಸಂಜೆ ಮತಗಳ ಎಣಿಕೆ ನಡೆಸಿ ಅಂತಿಮ ಫಲಿತಾಂಶವನ್ನು ಪಕಟಿಸಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.


Spread the love

About inmudalgi

Check Also

L

Spread the love(I Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ