Breaking News
Home / Recent Posts / ಬೆಟಗೇರಿ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿಯ ಬಸವಶ್ರೀ ದಿನದರ್ಶಿಕೆ ಬಿಡುಗಡೆ

ಬೆಟಗೇರಿ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿಯ ಬಸವಶ್ರೀ ದಿನದರ್ಶಿಕೆ ಬಿಡುಗಡೆ

Spread the love

ಬೆಟಗೇರಿ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿಯ ಬಸವಶ್ರೀ ದಿನದರ್ಶಿಕೆ ಬಿಡುಗಡೆ

ಬೆಟಗೇರಿ:ಕನ್ನಡ ನಾಡಿನ ಎಲ್ಲಾ ಸಹಕಾರಿ ಸಂಘ ಸಂಸ್ಥೆಗಳು ಪ್ರತಿ ವರ್ಷ ಪ್ರಕಟಿಸುವ ದಿನದರ್ಶಿಕಗಳಿಗಿಂತ ಗೋಕಾಕ ತಾಲೂಕಿನ ಬೆಟಗೇರಿ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿಯ ಪ್ರಕಟಿಸಿದ ಬಸವಶ್ರೀ ದಿನದರ್ಶಿಕೆ ಅತ್ಯಂತ ವಿಭಿನ್ನವಾಗಿದೆ ಎಂದು ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ ಹೇಳಿದರು.
ಬೆಟಗೇರಿ ಗ್ರಾಮದ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಕಾರ್ಯಾಲಯದಲ್ಲಿ ಸೋಮವಾರ ಡಿ.27ರಂದು ಆಯೋಜಿಸಿದ 2022ನೇ ವರ್ಷದ ಬಸವಶ್ರೀ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿ, ಪಾರದರ್ಶತೆ ಹಾಗೂ ವಿಶ್ವಾಸದ ಪ್ರತಿಬಿಂಬವಾಗಿರುವ ಬಸವೇಶ್ವರ ಸೌಹರ್ದ ಸಹಕಾರಿಯೂ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಸಾಗಿದೆ. ಮುಂದೆಯೂ ಜನಪರ ಕಾರ್ಯಗಳನ್ನು ಮಾಡುವಂತಹ ಶಕ್ತಿ ಭಗವಂತನು ನೀಡಲಿ ಎಂದು ಹಾರೈಸಿದರು.
ಸ್ಥಳೀಯ ಬಸವೇಶ್ವರ ಸೌಹಾರ್ದ ಸಹಕಾರಿಯ ಅಧ್ಯಕ್ಷ ಮಲ್ಲಿಕಾರ್ಜುನ ನೀಲಣ್ಣವರ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಬಸವೇಶ್ವರ ಸೌಹಾರ್ದ ಸಹಕಾರಿ ಆಡಳಿತ ಮಂಡಳಿ ವತಿಯಿಂದ ಶ್ರೀಗಳನ್ನು ಸನ್ಮಾನಿಸಲಾಯಿತು.
ಕಲ್ಲಪ್ಪ ಹುಬ್ಬಳ್ಳಿ, ವೀರಭದ್ರ ದಂಡಿನ, ಈಶ್ವರ ಬಡಿಗೇರ, ಬಸವರಾಜ ಮಾಳೇದ, ಶಿವನಪ್ಪ ಕಂಬಿ, ಶಿವು ಮೇಳೆನ್ನವರ, ಅಶೋಕ ದೇಯನ್ನವರ, ಅಪ್ಪಯ್ಯಪ್ಪ ಸಿದ್ನಾಳ, ಮುಖ್ಯ ಕಾರ್ಯನಿರ್ವಾಹಕ ಈರಣ್ಣ ಸಿದ್ನಾಳ, ಗುಳಪ್ಪ ಪಣದಿ, ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ, ಗಣ್ಯರು, ಸ್ಥಳೀಯರು ಇದ್ದರು.


Spread the love

About inmudalgi

Check Also

ಸಾಹಿತಿ ಚಿದಾನಂದ ಹೂಗಾರ ರವರ ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ

Spread the loveಮೂಡಲಗಿಯ ಚೈತನ್ಯ ಸೊಸೈಟಿಯಲ್ಲಿ ಮೂಡಲಗಿ ತಾಲ್ಲೂಕು ಚುಸಾಪ ಮತ್ತು ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ ಚಿದಾನಂದ ಹೂಗಾರ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ